ವಲಯ ಮಟ್ಟದ ಹೋಮ್ ಗಾರ್ಡ್ಸ್ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿದ ಪೊಲೀಸ್ ಅಧೀಕ್ಷಕ ಸಿ.ಬಿ.ರಿಷ್ಯಂತ್

ಇಂದು ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ವಲಯ ಮಟ್ಟದ ಹೋಮ್ ಗಾರ್ಡ್ಸ್ ವಾರ್ಷಿಕ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಪೊಲೀಸ್ ಅಧೀಕ್ಷಕರವರಾದ ಶ್ರೀ ಸಿ.ಬಿ.ರಿಷ್ಯಂತ್ ಐಪಿಎಸ್ ರವರು ಕ್ರೀಡಾಕೂಟವನ್ನು ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಚ್ಚುವರಿ ಪೊಲೀಸ್ ಅಧೀಕ್ಷಕರವರು ಹಾಗೂ ಹೋಮ್ ಗಾರ್ಡ್ಸ್ ಕಮಾಂಡೆಂಟ್ ದಾವಣಗೆರೆ ರವರಾದ ಶ್ರೀ ರಾಜೀವ್ ಎಂ. ರವರುವಹಿಸಿದ್ದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶ್ರೀಮತಿ ಸಿ.ಕೆ.ಸಂಧ್ಯಾ ಜಿಲ್ಲಾ ಸಮಾದೇಷ್ಟರು, ಗೃಹ ರಕ್ಷಕದಳ, ಚಿತ್ರದುರ್ಗ ರವರು ಆಗಮಿಸಿದ್ದರು.
ಉದ್ಘಾಟಿಸಿ ಮಾತನಾಡಿದ ಪೊಲೀಸ್ ಅಧೀಕ್ಷಕರವರಾದ ಶ್ರೀ ಸಿ.ಬಿ.ರಿಷ್ಯಂತ್ ರವರು- ಕ್ರೀಡಾಕೂಟದಲ್ಲಿ ಸ್ಪರ್ದಿಗಳು ಕ್ರೀಡಾಸ್ಪೂರ್ತಿಯಿಂದ ಪಾಲ್ಗೊಳ್ಳೂವಂತೆ ತಿಳಿಸಿದರು. ಕ್ರೀಡೆಯಿಂದ ಮಾನಸಿಕ ಹಾಗೂ ದೈಹಿಕ ಸದೃಢತೆ ಹೆಚ್ಚುತ್ತದೆ. ಜಿಲ್ಲಾ ಮಟ್ಟದಿಂದ ವಲಯ ಮಟ್ಟಕ್ಕೆ ಆಯ್ಕೆಯಾದ ಎಲ್ಲಾ ಕ್ರೀಡಾ ಸ್ಪರ್ಧಿಗಳಿಗೂ ಈ ಸಂಧರ್ಭದಲ್ಲಿ ಶುಭಕೋರುತ್ತೇನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಿವೈಎಸ್ಪಿ ರವರುಗಳಾದ ಶ್ರೀ ಬಸವರಾಜ ಬಿ.ಎಸ್., ಶ್ರೀ ನರಸಿಂಹ ವಿ.ತಾಮ್ರದ್ವಜ, ಶ್ರೀ ಪ್ರಕಾಶ್ ಪಿ.ಬಿ.
ಪೊಲೀಸ್ ನಿರೀಕ್ಷಕರುಗಳಾದ ಶ್ರೀ ಗುರುಬಸವರಾಜ್, ಶ್ರೀ ಗಜೇಂದ್ರಪ್ಪ, ಶ್ರೀಮತಿ ಶಿಲ್ಪಾ, ಶ್ರೀ ಕಿರಣ್ ಕುಮಾರ್ ಸೇರಿದಂತೆ ಹೋಮ್ ಗಾರ್ಡ್ಸ್ ಅಧಿಕಾರಿಗಳಾದ ಶ್ರೀಮತಿ ಸರಸ್ವತಿ, ಶ್ರೀ ಕಿರುವಾಡಿ ಅಮರೇಶ ಕೆ.ಎಸ್., ಶ್ರೀ ಎಲ್ಲಪ್ಪ, ಶ್ರೀ ಲಕ್ಷ್ಮೀಪತಿ, ಶ್ರೀ ಹಾಲೇಶ್ ಹಾಗೂ ಶ್ರೀ ಲೋಕೇಶ್ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವಲಯ ಮಟ್ಟದ ಹೋಮ್ ಗಾರ್ಡ್ಸ್ ಕ್ರೀಡಾಕೂಟದಲ್ಲಿ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಹಾವೇರಿ ಜಿಲ್ಲೆಗಳ ಹೋಮ್ ಗಾರ್ಡ್ಸ್ ಭಾಗವಹಿಸಿದ್ದರು.
ವೃತ್ತಿಪರ ಕ್ರೀಡೆಗಳು-
ಸ್ಕ್ವಾಡ್ ಡ್ರಿಲ್, ಫೈರ್ ಫಟಿಂಗ್, ಫಾಸ್ಟ್ ಏಡ್, ರೇಸ್ಕ್ವ್ಯೂ,
ಅಥ್ಲೆಟಿಕ್ಸ್ ಕ್ರೀಡೆಗಳು- 100 ಮೀ, 400 ಮೀ, 800 ಮೀ ಮತ್ತು 400 ರಿಲೇ, ವಾಲಿಬಾಲ್, ಕಬಡ್ಡಿ, ಶಾಟ್ ಪುಟ್
ಕ್ರೀಡಾಕೂಟವು ಇಂದಿನಿಂದ 03 ದಿನಗಳು ನಡೆಯಲಿರುತ್ತದೆ.
04 ಜಿಲ್ಲೆಗಳಿಂದ 140 ಹೋಮ್ ಗಾರ್ಡ್ಸ್ ಗಳು ಭಾಗವಹಿಸಿರುತ್ತಾರೆ.
ಇದರಲ್ಲಿ 13 ಜನ ಮಹಿಳಾ ಸ್ಪರ್ಧೆಗಳು ಭಾಗವಹಿಸಿರುತ್ತಾರೆ.