ಮಲೆನಾಡು ಸೆರಗಲ್ಲಿ ಮರಾಠರಿಗೂ ಆಸರೆ; ಮರಾಠ ಸಮಾಜಕ್ಕೆ ಜಮೀನು ಮಂಜೂರು

ಬೆಂಗಳೂರು: ತೀರ್ಥಹಳ್ಳಿ ಕ್ಷತ್ರಿಯ ಮರಾಠ ಸಮಾಜಕ್ಕೆ ರಾಜ್ಯ ಸರ್ಕಾರ ಒಂದು ಎಕರೆ ಜಮೀನನ್ನು ಮಂಜೂರು ಮಾಡಿದ್ದು, ಬಹು ಕಾಲದ ಬೇಡಿಕೆಯನ್ನು, ಮಾನ್ಯ ಮಾಡಿ ಆದೇಶ ಹೊರಡಿಸಿದೆ.
ಈ ಸಂಬಂಧ ರಾಜ್ಯ ಸರಕಾರ, ಕೆಲವು ಶರತ್ತುಗಳನ್ನು ವಿಧಿಸಿ ಮಂಜೂರು ಆದ ಜಮೀನನ್ನು ಸಾರ್ವಜನಿಕ ಸಮುದಾಯ ಭವನ ನಿರ್ಮಿಸಲು ಉಪಯೋಗಿಸಬೇಕು ಎಂದು ತಿಳಿಸಿದೆ ಎಂದು ಗೃಹ ಸಚಿವರ ಕಚೇರಿ ಮೂಲಗಳು ತಿಳಿಸಿವೆ.


ತಾಲೂಕು ಕ್ಷತ್ರಿಯ ಮರಾಠ ಸಮಾಜಕ್ಕೆ ನಿವೇಶನ ಒದಗಿಸಬೇಕೆಂದು, ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ಅವರಿಗೆ ಮರಾಠ ಮುಖಂಡರು ಮನವಿ ಸಲ್ಲಿಸಿದ್ದರು. ತಾಲೂಕಿನ, ಸುರುಳೆ ಬಾಳೇಬೈಲು ಗ್ರಾಮದಲ್ಲಿ, ಜಾಗವನ್ನು ಗುರುತಿಸಿದ್ದು, ಮರಾಠ ಸಮಾಜವು ಸದರಿ ಭೂಮಿಯನ್ನು, ಸಮುದಾಯ ಭವನವನ್ನು ನಿರ್ಮಿಸಿ, ವಿವಾಹ ಹಾಗೂ ಇತರ ಸಮಾರಂಭ ಗಳನ್ನು ಆಯೋಜಿಸಿ, ಬಳಸಿಕೊಳ್ಳಲು ನಿರ್ದೇಶಿಸಲಾಗಿದೆ.
ಮರಾಠ ಸಮಾಜಕ್ಕೆ ಸಮುದಾಯ ಭವನ ನಿರ್ಮಿಸಲು, ಭೂಮಿ ಮಂಜೂರು ಮಾಡಿಸಲು ಶ್ರಮಿಸಿದ, ತೀರ್ಥಹಳ್ಳಿ ಶಾಸಕರೂ, ರಾಜ್ಯ ಗೃಹ ಸಚಿ ಆರಗ ಜ್ಞಾನೇಂದ್ರ ಅವರಿಗೆ, ಸಮಾಜದ ಮುಖಂಡರು ಕೃತಜ್ಞತೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!