ಲೋಕಾಯುಕ್ತ ಬಲೆಗೆ ಹೊನ್ನಾಳಿ ಸರ್ವೇಯರ್ ಉದಯ್ ಚೌಧರಿ

ದಾವಣಗೆರೆ: ಮನೆಯ ಇ-ಸ್ವತ್ತು ಮಾಡಿಕೊಡಲು ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದ ಹೊನ್ನಾಳಿ ತಾಲ್ಲೂಕು ಎ.ಡಿ.ಎಲ್.ಆರ್. ಕಛೇರಿಯ ಸರ್ವೇಯರ್ ಉದಯ್ ಚೌದರಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ಹೊನ್ನಾಳಿ ತಾಲ್ಲೂಕು ಹರಳಹಳ್ಳಿ ಗ್ರಾಮದ ದೇವೇಂದ್ರ ಗೌಡ ಎಂಬುವರು ತಮ್ಮ ಮನೆಯ ಇ-ಸ್ವತ್ತು ಸಂಬಂಧ ಅಳತೆ ಮಾಡಿಕೊಡಲು ಮನವಿ ಸಲ್ಲಿಸಿದ್ದರು. ಈ ಕೆಲಸ ಮಾಡಿಕೊಡಲು ಸರ್ವೇಯರ್ ಉದಯ್ ಚೌದರಿ 3 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಜ.9ರಂದು ಲಂಚದ ಹಣವನ್ನು ಹೊನ್ನಾಳಿ ಶಿವಮೊಗ್ಗ ರಸ್ತೆಯಲ್ಲಿರುವ ಸಾಯಿ ಫುಯೆಲ್ ಸ್ಟೇಶನ್ ಬಳಿ ಪಡೆಯುವಾಗ ಸಂಜೆ ಯಶಸ್ವಿ ಕಾರ್ಯಾಚರಣೆ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ಚೌದರಿಯನ್ನು ದಸ್ತಗಿರಿ ಮಾಡಿದ್ದು, ತನಿಖೆ ಮುಂದುವರೆಸಿದ್ದಾರೆ.
31 ವರ್ಷದ ಚೌದರಿ, ದಾವಣಗೆರೆಯ ಆವರಗೆರೆ ಟೀಚರ್ಸ್ ಕಾಲೋನಿ ನಿವಾಸಿ.

Leave a Reply

Your email address will not be published. Required fields are marked *

error: Content is protected !!