Suspend: ಸಮೀಕ್ಷೆಗೆ ಗೈರು – ಶಿಕ್ಷಕರು ಸೇರಿದಂತೆ ಮೂವರು ಸಿಬ್ಬಂದಿಗಳ ಅಮಾನತು

IMG-20250927-WA0059

ದಾವಣಗೆರೆ: (Suspend) ದಾವಣಗೆರೆ ಜಿಲ್ಲೆಯಲ್ಲಿ
ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಸಮೀಕ್ಷಾ ಕಾರ್ಯ ನಡೆಯುತ್ತಿದ್ದು ಸಮೀಕ್ಷಾ ಕಾರ್ಯ ಕೈಗೊಳ್ಳಲು ನಿರಾಸಕ್ತಿ ತೋರಿದ ಇಬ್ಬರು ಶಿಕ್ಷಕರು ಸೇರಿ ಮೂರು ಸಿಬ್ಬಂದಿಯನ್ನು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅಮಾನತು ಮಾಡಿ ಆದೇಶಿಸಿದ್ದಾರೆ.


ಅಮಾನತು ಮಾಡಿದವರಲ್ಲಿ ಮಂಜುನಾಥ ಡಿ ಕೆ, ಸಹ ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಜಮಾಪುರ, ದಾವಣಗೆರೆ ಉತ್ತರ ವಲಯ, ಬಸವರಾಜಪ್ಪ ಹೆಚ್, ದೈಹಿಕ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ ನಾಗನೂರು ದಾವಣಗೆರೆ ದಕ್ಷಿಣ ವಲಯ ಮತ್ತು ದುರ್ಗಪ್ಪ ಕೆ.ಆರ್, ನಿಲಯ ಮೇಲ್ವಿಚಾರಕರು, ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ, ಮಾಯಾಕೊಂಡ ದಾವಣಗೆರೆ ತಾಲೂಕು ಇವರುಗಳನ್ನು ಸೆಪ್ಟೆಂಬರ್ 22 ಅಕ್ಟೋಬರ್ 7ರವರೆಗೆ ಸಮೀಕ್ಷಾ ಕಾರ್ಯ ಕೈಗೊಳ್ಳಲು ಆದೇಶಿಸಲಾಗಿತ್ತು , ಸದರಿ ನೌಕರರು ಸಮೀಕ್ಷಾ ಕಾರ್ಯಕ್ಕೆ ಗೈರು ಹಾಜರಾಗಿರುತ್ತಾರೆ.

ಆದಾಗಿಯು ಸರ್ಕಾರವು ಗೈರುಜರಾದವರನ್ನು ನಿರ್ದಕ್ಷಣವಾಗಿ ಕ್ರಮ ವಹಿಸಲಾಗುವುದು ಎಂದು ತಿಳಿಸಿ ಸದರಿ ನೌಕರರಿಗೆ ನೋಟಿಸ್ ನೀಡಿದರೂ ಸಹ ಸಮಜಾಯಿಸಿಯನ್ನು ನೀಡದೆ ಸಮೀಕ್ಷಾ ಕಾರ್ಯಕ್ಕೆ ಗೈರುಹಾಜರಾಗಿರುತ್ತಾರೆ. ಆದ್ದರಿಂದ ಮೂರು ನೌಕರರ ವಿರುದ್ಧ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಕರ್ನಾಟಕ ಸರ್ಕಾರಿ ಸಿವಿಲ್ ವರ್ಗೀಕರಣ ಮತ್ತು ಅಪೀಲು ನಿಯಮಾವಳಿ 1957ರ ನಿಯಮ 10(1)(d) ಅನ್ವಯ ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾಧಿಕಾರಿ ಅವರು ಆದೇಶಿಸುತ್ತಾರೆ.

ಇತ್ತೀಚಿನ ಸುದ್ದಿಗಳು

error: Content is protected !!