ದಾವಣಗೆರೆಯ ಸಂತ ಪೌಲರ ಶಾಲೆಗೆ ಸ್ವಚ್ಛ ವಿದ್ಯಾಲಯ ಪ್ರಶಸ್ತಿ

ದಾವಣಗೆರೆ: ಜಿಲ್ಲಾ ಮಟ್ಟದ ಸ್ವಚ್ಛತಾ ಉಪ ವಿಭಾಗಗಳಲ್ಲಿ ನಗರದ ಸಂತ ಪೌಲರ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯು ಸ್ವಚ್ಛ ವಿದ್ಯಾಲಯ ಪ್ರಶಸ್ತಿ ಪಡೆದುಕೊಂಡಿದೆ.

ಜಿಲ್ಲೆಯಲ್ಲಿ ೨೦೪೩ ಶಾಲೆಗಳು ೨೦೨೧-೨೨ರ ಸಾಲಿನ ಸ್ವಚ್ಛ ವಿದ್ಯಾಲಯ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿದ್ದವು. ಇದರಲ್ಲಿ ೧೩೪೨ ಶಾಲೆಗಳು ಅರ್ಹತೆ ಗಳಿಸಿದ್ದು, ಜಿಲ್ಲೆಯ ೩೮ ಶಾಲೆಗಳು ಮಾತ್ರ ಈ ಪುರಸ್ಕಾರಕ್ಕೆ ಆಯ್ಕೆಯಾಗಿರುತ್ತವೆ. ಇದರಲ್ಲಿ ನಮ್ಮ ಶಾಲೆಗೆ ಪ್ರಶಸ್ತಿ ಲಭಿಸಿದೆ. ಅಷ್ಟೇ ಅಲ್ಲದೇ, ಕೋವಿಡ್ ನಿಯಮಾವಳಿ ಪಾಲಿಕೆಯಲ್ಲೂ ಶಾಲೆ ರಾಜ್ಯಮಟ್ಟದ ಪ್ರಶಸ್ತಿಗೆ ಶಿಫಾರಸ್ಸು ಪಡೆದಿದೆ ಎಂದು ಶಾಲೆಯ ವ್ಯವಸ್ಥಾಪಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!