ಐದರ ಪೋರನ ಕಾರ್ ಡ್ರೈವಿಂಗ್ ಕಲೆಯನ್ನೊಮ್ಮೆ ನೋಡಿ..!
ದಾವಣಗೆರೆ: ಕಾರು ಚಾಲನೆ ಯಾರಿಗೆ ಇಷ್ಟವಿಲ್ಲ ಹೇಳಿ ? ಮೊದಲೆಲ್ಲಾ ಕಾರು ಇಟ್ಟುಕೊಂಡಿದ್ದಾರೆಂದರೆ ಅವರು ಮಾತ್ರ ಶ್ರೀಮಂತರು ಎನ್ನುವ ಭಾವನೆ ಇತ್ತು. ಈಗ ಹಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಮನೆಗೊಂದು ಕಾರು ಮಾಮೂಲಿಯಾಗಿದೆ.
ಕಾರುಗಳು ಕೈಗೆಟಕುವ ಬೆಲೆಯಲ್ಲಿ ಲಭ್ಯ. ಇನ್ನು 50 ರಿಂದ 1 ಲಕ್ಷ ರೂ.ಗಳಲ್ಲಿಯೇ ಸೆಕೆಂಡ್ ಹ್ಯಾಂಡ್ ಕಾರ್ ಖರೀದಿಸಬಹುದು. ಹೀಗಾಗಿ ಬಡ ಹಾಗೂ ಮಧ್ಯಮ ವರ್ಗದವರ ಮನೆ ಮುಂದೂ ಈಗ ಕಾರುಗಳು ನಿಂತಿವೆ. ಕಾರ್ ಕೊಂಡುಕೊಂಡು ಓಡಿಸಬೇಕೆಂದರೆ, ಡ್ರೈವಿಂಗ್ ಕಲಿತಿರಲೇ ಬೇಕು. ಹೀಗಾಗಿ ಡ್ರೈವಿಂಗ್ ಶಾಲೆಗೆ ಸೇರುವವರ ಸಂಖ್ಯೆಯೂ ಹೆಚ್ಚಾಗಿದೆ. ದಾವಣಗೆರೆಯಂತಹ ನಗರದಲ್ಲಿ ಕಾರ್ ಡ್ರೈವಿಂಗ್ ಶಾಲೆಗಳೂ ಹೆಚ್ಚಾಗುತ್ತಿವೆ. ಕಾರ್ ಕಲಿಸಿ, ಲೈಸನ್ಸ್ ಕೊಡಿಸಲು ಐದಾರು ಸಾವಿರ ರೂ.ಗಳನ್ನು ಕೊಡಬೇಕು.
ಇರಲಿ ಬಿಡಿ, ಈಗ ವಿಷಯಕ್ಕೆ ಬರೋಣ, ಇಲ್ಲಿ ನೋಡಿ.
ಈತ ಐದು ವರ್ಷದ ಪೋರ. ಕಾರ್ ಡ್ರೈವಿಂಗ್ ವಿಷಯವನ್ನು ಅರೆದು ಕುಡಿದವನಂತೆ ಹೇಳಬಲ್ಲ. ಆರಂಭದಲ್ಲಿ ಕಾರ್ ಸ್ಟ್ರಾಟ್ ಮಾಡುವುದರಿಂದ ಹಿಡಿದು ಯಾವ ಗೇರ್ ಗಳನ್ನು ಯಾವಾಗ ಹಾಕಬೇಕು. ಕ್ಲಚ್ ಹಿಡಿಯುವುದು ಯಾವಾಗ, ಬ್ರೇಕ್ ಯಾವಾಗ ಹಾಕಬೇಕು ಎಂಬಿತ್ಯಾದಿ ಬಗ್ಗೆ ಎಲ್ಲವನ್ನೂ ಹೇಳಬಲ್ಲ.
ಅಂದ ಹಾಗೆ ಈತನ ಹೆಸರು ಅಥರ್ವ ಕೆ.ಹೆಚ್. ದಾವಣಗೆರೆಯ ಶ್ರೀ ಚೈತನ್ಯ ಟೆಕ್ನೋ ಶಾಲೆಯಲ್ಲಿ ಓದುತ್ತಿದ್ದಾನೆ. ದಾವಣಗೆರೆಯ ಹರೀಶ್ ಬಸಾಪುರ ಇವರ ಪುತ್ರರ ಡ್ರೈವಿಂಗ್ ಪಾಠಕ್ಕೆ ಮನಸೋಲದವರೇ ಇಲ್ಲ ಎನ್ನಬಹುದು.
ಇಲ್ಲಿನ ವೀಡಿಯೋ ನೋಡಿದರೆ ಶಹಬ್ಬಾಶ್ ಎನ್ನುತ್ತೀರಿ. ಕಾರು ಕಲಿಯಲು ಭಯವಿದ್ದವರಿಗೆ ಇದರಿಂದ ಒಂದಿಷ್ಟು ಧೈರ್ಯ ಬರಬಹುದೇನೋ. ಕಲಿಯುವ ವರೆಗೆ ಭ್ರಹ್ಮ ವಿಧ್ಯೆ, ತಲಿತ ಮೇಲೆ ಕೋತಿ ವಿದ್ಯೆ ಅಷ್ಟೇ ಅಲ್ಲವೇ?
ಹಾಂ. ಅಂದಹಾಗೆ ಎಚ್ಚರವಿರಲಿ. ಈ ಪುಟಾಣಿ ಡ್ರೈವಿಂಗ್ ಬಗ್ಗೆ ಹೇಳಿದ್ದಾನಷ್ಟೇ.
ಈ ಲೇಖನ ಓದಿ ಅಥವಾ ವೀಡಿಯೋ ನೋಡಿ ನಿಮ್ಮ ಮಕ್ಕಳಿಗೂ ಕಾರು ಕಲಿಸುವುದಾಗಲೀ, ಕೊಡುವುದಾಗಲೀ ಮಾಡಬೇಡಿ. ಸಂಚಾರಿ ಕಾಯ್ದೆ ಉಲ್ಲಂಘನೆ ಮಾಡುವುದು ಶಿಕ್ಷಾರ್ಹ ಅಪರಾಧ.