ನಗರದಲ್ಲಿ ಹೊಸದಾಗಿ ಡ್ಯಾಪ್- ದಿಲ್ ಸೆ ಡೆಲಿವರಿ ಮೊಬೈಲ್ ಆ್ಯಪ್ ಸರ್ವೀಸ್

IMG-20211113-WA0066

ದಾವಣಗೆರೆ: ನಗರದಲ್ಲಿ ಹೊಸದಾಗಿ ಡ್ಯಾಪ್- ದಿಲ್ ಸೆ ಡೆಲಿವರಿ ಮೊಬೈಲ್ ಆ್ಯಪ್ ಸರ್ವೀಸ್
ಆರಂಭಿಸಲಾಗಿದ್ದು, ಇದೊಂದು ಜನರ
ದಿನನಿತ್ಯದ ಬೇಡಿಕೆ, ಅವಶ್ಯಕತೆಗಳನ್ನು ಪೂರೈಸುವ ಉತ್ತಮವಾದ ಹೈಪರ್
ಲೋಕಲ್ ಡೆಲಿವರಿ ಸರ್ವೀಸ್ ಅಪ್ಲಿಕೇಶನ್ ಎಂದು ಸಂಸ್ಥೆಯ ಉತ್ತರ ಕರ್ನಾಟಕ ಮಾರ್ಕೆಟಿಂಗ್ ಹೆಡ್ ವಿನಾಯಕ ಭೋವಿ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫ್ಲೇಯಿಂಗ್ ಬ್ರೆನ್ಸ್ ಇನ್ನೊವೇಶನ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಇದನ್ನು ಪ್ರಾರಂಭಿಸಲಾಗಿದ್ದು, ಇದರಲ್ಲಿ ಜನರು ತಮ್ಮ
ದಿನನಿತ್ಯದ ಅವಶ್ಯ ವಸ್ತುಗಳಾದ ಆಹಾರ, ತರಕಾರಿ, ಹಣ್ಣು, ದಿನಸಿ ವಸ್ತು,
ಮೀನು, ಮಾಂಸ, ಪ್ಯಾಕೇಜ್ ಡೆಲಿವರಿ, ಸಾಕುಪ್ರಾಣಿಗಳ ಆಹಾರ, ಸಾವಯುವ
ಕೃಷಿ ಉತ್ಪನ್ನ ಮತ್ತಿತರೆ ಅಗತ್ಯ ವಸ್ತುಗಳನ್ನು 30 ನಿಮಿಷಗಳಲ್ಲಿ ಮನೆ ಬಾಗಿಲಿಗೆ ಡೆಲಿವರಿ ಪಡೆದುಕೊಳ್ಳಬಹುದು ಎಂದರು.

ಇದರ ಮುಖಾಂತರ ತಮ್ಮ ದೈನಂದಿನ ಅಗತ್ಯ ಸೇವೆಗಳ ಉಚಿತ ಡೆಲಿವರಿ ಲಾಭ ಪಡೆದುಕೊಳ್ಳಬಹುದಾಗಿದೆ. ಇದರ ಜೊತೆಗೆ ಸ್ಥಳೀಯ ವ್ಯಾಪಾರಿಗಳಿಗೆ ಇದು ತುಂಬಾ ಅನುಕೂಲಕರವಾಗಿದ್ದು, ನಗರದ ಯಾವುದೇ ಭಾಗದಲ್ಲಿ ಕೇವಲ 33 ರೂ.
ಏಕರೂಪ ಡೆಲಿವರಿ ಶುಲ್ಕ ಪಾವತಿಸಿ ಈ ಸೇವೆ ಪಡೆಯಬಹುದಾಗಿದೆ ಎಂದರು.

ವ್ಯಾಪಾರಿಗಳು ಆನ್‌ಲೈನ್
ಹಾಗೂ ಸ್ಥಳೀಯ ಗ್ರಾಹಕರನ್ನು ತಲುಪುವ ಮುಖಾಂತರ ಹೆಚ್ಚಿನ ಆದಾಯ
ಗಳಿಸಲು ಪೂರಕವಾಗಿದೆ. ಈಗಾಗಲೇ ನೂರಕ್ಕೂ ಅಧಿಕ ವ್ಯಾಪಾರಿಗಳು ನಮ್ಮಲ್ಲಿ
ನೋಂದಣಿಯಾಗಿದ್ದಾರೆ ಎಂದು ಅವರು ತಿಳಿಸಿದರು.

ಸಂಸ್ಥೆಯ ಆಕಾಶ್, ಭರತ್, ಸಂತೋಷ್ ಮತ್ತಿತರರು ಗೋಷ್ಠಿಯಲ್ಲಿದ್ದರು

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!