Taralabalu: ಅನುಭವ ಮಂಟಪದ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ, ಗುರುವಂದನಾ ಕಾರ್ಯಕ್ರಮ

Taralabalu: Alumni Association of Experience Hall, Guruvandana

ದಾವಣಗೆರೆ: (Taralabalu) ಶ್ರೀ ತರಳಬಾಳು ಜಗದ್ಗುರು ರೆಸಿಡೆನ್ಸಿಯಲ್ ಶಾಲೆ, ಅನುಭವ ಮಂಟಪದ 1996-99 ನೇ ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಹಳೆಯ ವಿದ್ಯಾರ್ಥಿಗಳ ಪುನರ್ಮಿಲನ ‘ಸ್ನೇಹ ಮಿಲನ-99’ ಕಾರ್ಯಕ್ರಮವನ್ನು ಈಚೆಗೆ ನಗರದ ಅಪೂರ್ವ ರೆಸಾರ್ಟ್ ನಲ್ಲಿ ಆಯೋಜಿಸಲಾಗಿತ್ತು.

ವಿಶ್ವದಾದ್ಯಂತ ನೆಲೆಸಿರುವ ಸುಮಾರು ನೂರಕ್ಕೂ ಹೆಚ್ಚು ವಿದ್ಯಾರ್ಥಿ ಮಿತ್ರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಳೆಯ ಸವಿನೆನಪುಗಳನ್ನು ಮೆಲುಕು ಹಾಕಿ ಸಂತೋಷ ಹಂಚಿಕೊಂಡರು. ಗುರುಪೂರ್ಣಿಮೆಯೂ ಇರುವುದರಿಂದ ಪ್ರೌಢಶಾಲೆಯ ಎಲ್ಲಾ ಗುರುಗಳನ್ನ ಆಹ್ವಾನಿಸಿ, ತಮಗೆ ಜ್ಞಾನ ಕಲಿಸಿ, ಮಾರ್ಗದರ್ಶನ ನೀಡಿರುವ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸಿದರು.

 

ಕಾರ್ಯಕ್ರಮದಲ್ಲಿ ಜಿ.ಎಸ್. ಭಾರತಿ, ಎಂ.ಕೆ. ಪ್ರೇಮಕುಮಾರಿ, ಇಂದಿರಾ, ಹೆಚ್.ಎನ್. ಓಂಕಾರಪ್ಪ, ಹೆಚ್. ಪುಟ್ಟಸ್ವಾಮಿ, ವಾಸುದೇವ ನಾಡಿಗ್, ಎಸ್. ಶಿವಕುಮಾರ್, ವಿದ್ಯಾರ್ಥಿ ನಿಲಯದ ಮುಖ್ಯಸ್ಥರಾದ ಪ್ರಸನ್ನ ಹಾಗೂ ರಾಜಪ್ಪ ಮತ್ತಿತರರಿದ್ದರು.

ಇತ್ತೀಚಿನ ಸುದ್ದಿಗಳು

error: Content is protected !!