ಮರ್ಯಾದಸ್ಥರ ಮಾನ ಸಂತೆಯಲ್ಲಿ ಹರಾಜದಂತೆ.! ಸಿರಿಗೆರೆ ಮಠದ ವಿಷಯಕ್ಕೆ ಎರಡು ಬಣರ ಮುಖಂಡರ ನಡೆಗೆ ಆಕ್ಷೇಪ.!

ದಾವಣಗೆರೆ: ಸಾಧು ಲಿಂಗಾಯಿತ ಸಮುದಾಯ ಎಂದರೆ ತನ್ನದೇ ಆದ ಗೌರವ, ಪ್ರತಿಷ್ಠೆಯನ್ನು ಹೊಂದಿದ್ದು.. ನಮ್ಮ ಸಮುದಾಯದವರು ಅಲ್ಲದೆ ಬೇರೆ ಸಮುದಾಯದವರು ಸಹ ಗೌರವದಿಂದ ಕಾಣುವ ಸಮುದಾಯ ಎಂದರೆ ಅದು ನಮ್ಮ ಸಾಧು ಲಿಂಗಾಯತ ಸಮುದಾಯ ಎಂಬುದನ್ನು ಬಹಳ ಗೌರವದಿಂದ ಹೇಳಬಹುದು.
ಆದರೆ ಈಗ ಕೆಲವು ದಿನಗಳಿಂದ ನಡೆಯುತ್ತಿರುವ ಘಟನೆಗಳು ತೀರ ಬೇಸರ ತರಿಸುತ್ತವೆ, ಕೆಲವೇ ಕೆಲವರ ವೈಯಕ್ತಿಕ ಪ್ರತಿಷ್ಠೆಗೆ ಇಡೀ ಸಮುದಾಯ ಸಾರ್ವಜನಿಕವಾಗಿ ತಲೆತಗ್ಗಿಸುವಂತೆ ಆಗುತ್ತಿದೆ.
ಇಲ್ಲಿ ನಡೆಯುತ್ತಿರುವ ಪರ-ವಿರೋಧಗಳ ಪಾತ್ರದಾರಿಗಳು ಕೆಲವೇ ಕೆಲವು ವ್ಯಕ್ತಿಗಳ ಆಗಿದ್ದು, ಅವರೆಲ್ಲರೂ ವೈಯಕ್ತಿಕವಾಗಿ ಒಂದಲ್ಲ ಒಂದು ರೀತಿಯಿಂದ ಮಠದಿಂದ ಹಾಗೂ ಗುರುಗಳಿಂದ ಅನುಕೂಲ ಪಡೆದುಕೊಂಡವರೇ ಆಗಿರುತ್ತಾರೆ ಎಂದರೆ ತಪ್ಪಾಗಲಾರದು, ಆದರೆ ಈಗ ನಡೆಯುತ್ತಿರುವ ಘಟನೆಗಳಿಂದ ಆಘಾತಕ್ಕೊಳಗಾಗಿರುವವರು ಮಾತ್ರ ಎಲ್ಲೋ ದೂರದಲ್ಲಿದ್ದು ಮಠ ಮತ್ತು ಗುರುಗಳನ್ನು ದೇವರೆಂದೇ ಪೂಜಿಸುವ ಸಾಮಾನ್ಯ ಭಕ್ತರು.
ಅದರಲ್ಲೂ ನಿನ್ನೆ ನಡೆದಂಥ ಘಟನೆ ತೀರಾ ಅಮಾನವೀಯ ಸಮಾಜದ ಗುರುಗಳ ಬಗ್ಗೆ ಮಾತನಾಡುವವರು ಮಠಕ್ಕೆ ಬರಬೇಕು ವಿನಹ ಪ್ರೆಸ್ ಕ್ಲಬ್ಬಿಗೆ ಅಲ್ಲ ಎಂಬುದನ್ನು ಅಂತ ಹಿರಿಯರಿಗೆ ನಾವು ಹೇಳಬೇಕೆ???
ಗುರುಗಳಿಗೆ ಪತ್ರ ಬರೆದಿರಬಹುದು, ಅವರು ಉತ್ತರಿಸದೇ ಇರಬಹುದು.. ಅದು ಏನೇ ಇರಲಿ ಅದನ್ನು ಹೇಳುವ ಸ್ಥಳ ಪತ್ರಿಕಾಗೋಷ್ಠಿಯ ಎಂಬುದನ್ನು ಅವರು ಮೊದಲು ತಿಳಿಯಬೇಕಾಗಿದೆ, ನೇರವಾಗಿ ಮಠಕ್ಕೆ ಹೋಗಿ ಗುರುಗಳನ್ನೇ ಪ್ರಶ್ನಿಸಬಹುದಿತ್ತು ಮಠ ನಮ್ಮೆಲ್ಲರ ಸ್ವತ್ತು ಅಲ್ಲವೇ ಪ್ರೆಸ್ ಕ್ಲಬ್ ಸೂಕ್ತ ಸ್ಥಳ ಅಲ್ಲ ಎಂಬುದು ನನ್ನ ಅಭಿಪ್ರಾಯ.
ಇನ್ನು ಇನ್ನೊಂದು ಗುಂಪು ಬೀದಿಯಲ್ಲಿ ನಿಂತು ಇವರನ್ನು ಪ್ರಶ್ನಿಸುವ ಅಗತ್ಯವೇನಿತ್ತು, ಪ್ರೆಸ್ ಕ್ಲಬ್ ಮುಂದೆ ಪತ್ರಕರ್ತರು ಹಾಗೂ ಟಿವಿ ಮಾಧ್ಯಮದವರು ಇರುತ್ತಾರೆ ಎಂಬ ಸಾಮಾನ್ಯ ಜ್ಞಾನವೂ ಇಲ್ಲವೇ ಇವರಿಗೆ.. ಒಬ್ಬರು ಪತ್ರಿಕಾಗೋಷ್ಠಿ ನಡೆಸಿ ಸಮಾಜದ ಮರ್ಯಾದೆ ತೆಗೆಯುವ ಕೆಲಸ ಮಾಡಿದರೆ, ಇನ್ನೊಬ್ಬರು ಬೀದಿಯಲ್ಲಿ ನಿಂತು ಆ ಕೆಲಸವನ್ನು ಮುಂದುವರಿಸಿದರು ಎಂಬುದು ಸತ್ಯ ಅಲ್ಲವೇ????
36 ವರ್ಷದ ನನಗೆ ಸಮಾಜದ, ಮಠದ, ಗುರುಪರಂಪರೆಯ ಜ್ಞಾನ ಇಲ್ಲದೆ ಇರಬಹುದು, ಆದರೆ ಎಲ್ಲರೂ ಗೌರವಿಸುವ ನಮ್ಮ ಸಮುದಾಯದ ಗೌರವವನ್ನು ನಾಲ್ಕು ಗೋಡೆಯ ನಡುವೆ ಕೂತು ಹಿರಿಯರ ಸಮ್ಮುಖದಲ್ಲಿ ಬಗೆಹರಿಸಿಕೊಳ್ಳಬೇಕು ಎಂಬ ತಿಳುವಳಿಕೆ ಮಾತ್ರ ಇದ್ದು, ದಯವಿಟ್ಟು ಅನ್ಯತಾ ಭಾವಿಸದೆ ಸಮುದಾಯದ ಗೌರವ ಕಾಪಾಡುವ ಕೆಲಸ ಮಾಡಿ ಎಂಬುದಷ್ಟೇ ನನ್ನ ಪ್ರಾರ್ಥನೆ.
*ಕೆ.ಎಲ್.ಹರೀಶ್ ಬಸಾಪುರ*