ತರಳಬಾಳು ಸೇವಾ ಸಮಿತಿ ಹಾಗೂ ಶಿವಸೈನ್ಯ ರಾಜ್ಯದಲ್ಲಿಯೇ ಮಾದರಿ – ಕೃಷಿ ಸಚಿವ ಬಿಸಿ ಪಾಟೀಲ್

ದಾವಣಗೆರೆ: ದಾವಣಗೆರೆ ನಗರದ ಹದಡಿ ರಸ್ತೆಯಲ್ಲಿರುವ ಡಾ. ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪಕ್ಕೆ ಭೇಟಿನೀಡಿದ್ದ  ಕರ್ನಾಟಕ ಸರ್ಕಾರದ ಕೃಷಿ ಸಚಿವರು ಆದ ಬಿ.ಸಿ.ಪಾಟೀಲ್ ರವರು , ಅಲ್ಲಿ ತರಳಬಾಳು ಸೇವಾ ಸಮಿತಿ ಹಾಗೂ ಶಿವಸೈನ್ಯ ಯುವಕ ಸಂಘದವರು  ತರಳಬಾಳು ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಸತತವಾಗಿ ಕಳೆದ 39 ದಿನಗಳಿಂದ  ಕೊರೋನಾ ಸಂತ್ರಸ್ತರಿಗೆ ಹಾಗೂ ವಾರಿಯರ್ಸ್ ಗಳಿಗೆ ಪ್ರಸಾದ ವ್ಯವಸ್ಥೆ ಮಾಡುತ್ತಿರುವ ಕಾರ್ಯವನ್ನು ವೀಕ್ಷಿಸಿ ತರಳಬಾಳು ಸೇವಾ ಸಮಿತಿಯವರ ಕಾರ್ಯ ರಾಜ್ಯದಲ್ಲಿಯೇ ಮಾದರಿಯಾಗಿದೆ ಎಂದು ಹೇಳುತ್ತಾ ಇದರ ರೂವಾರಿ ಗಳಾದ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ಇಡೀ ಜಗತ್ತು ಈ ಸಾಂಕ್ರಾಮಿಕ ರೋಗದಿಂದ ನಲಗುತ್ತಿರುವ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಎದೆಗುಂದದೆ  ಅತ್ಯಂತ ಉತ್ತಮ ಕೆಲಸ ನಿರ್ವಹಿಸುತ್ತಿದ್ದು ಇದರಿಂದ ಸಾವಿರಾರು ಕೊರೋನಾ ಸಂತ್ರಸ್ತರಿಗೆ ಸಂತ್ರಸ್ತರಿಗೆ ನೆರವಾಗಿದೆ ಹಾಗೂ ವಾರಿಯರ್ಸ್ ಗಳಿಗೂ ಉತ್ತೇಜನ ಸಿಕ್ಕಂತಾಗಿದೆ. ಆದ್ದರಿಂದ ಇದಕ್ಕೆ ಎಲ್ಲರೂ ಕೈಜೋಡಿಸಬೇಕೆಂದು ಕರೆ ಕೊಡುವುದರೊಂದಿಗೆ ನಾನು ಈ ಕಾರ್ಯಕ್ಕೆ ಮನಸಾರೆ ಪ್ರಭಾವಿತಾನಾಗಿದ್ದು ಎಲ್ಲಾ ರೀತಿಯಲ್ಲಿಯೂ ಸಹಕರಿಸುತ್ತೇನೆ ಎಂದು  ಕೃಷಿ ಸಚಿವರಾದ ಬಿ.ಸಿ. ಪಾಟೀಲ್ ರವರು ಹೇಳಿದರು.

ಸಮಿತಿಯ ಗೌರವಾಧ್ಯಕ್ಷರಾದ ಶಶಿಧರ ಹೆಮ್ಮನಬೇತೂರು ರವರು ಮಾತನಾಡುತ್ತಾ ಕಳೆದ 39 ದಿನಗಳಿಂದ ಈ ಕಾರ್ಯಕ್ಕೆ ಕೈಜೋಡಿಸಿ ತನು-ಮನ-ಧನ ಸಹಾಯ-ಸಹಕಾರ ಮಾಡುತ್ತಾ ಬಂದಿರುವ ಎಲ್ಲ ದಾನಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಹಾಗೂ ಈ ಸೇವೆ ಮಾಡಲು ಅವಕಾಶ ಕಲ್ಪಿಸಿ ಕೊಟ್ಟ ತರಳಬಾಳು ಜಗದ್ಗುರು ಶ್ರೀಶ್ರೀಶ್ರೀ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರಿಗೆ ಭಕ್ತಿಪೂರ್ವಕವಾಗಿ ವಂದಿಸಿದರು.

ಈ ಸಂದರ್ಭದಲ್ಲಿ ತರಳಬಾಳು ಸೇವಾ ಸಮಿತಿ ಹಾಗೂ ಶಿವಸೈನ್ಯ ಯುವಕ ಸಂಘದ ಪದಾಧಿಕಾರಿಗಳಾದ, ಶಶಿಧರ ಹೆಮ್ಮನಬೇತೂರು ,ಮಾಗನೂರು ಉಮೇಶ್ ಗೌಡ್ರು,ಕಾವಲಹಳ್ಳಿ ಪ್ರಭು,ಕೊರಟಿಕೆರೆ ಶಿವಕುಮಾರ್, ಅಗಸನಕಟ್ಟೆ ಲಿಂಗರಾಜ್, ಸತೀಶ್ ಸಿರಿಗೆರೆ, ಶ್ರೀನಿವಾಸ್ ಮೆಳ್ಳೇಕಟ್ಟೆ,ಧನ್ಯಕುಮಾರ್ ಎಲೆಬೇತೂರು,ಹಾಗೂ ಪ್ರಭು ಕತ್ತಲಗೆರೆ ಮತ್ತಿತರರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!