Teacher: 30 ವರ್ಷಗಳ ಕಾಲ ಜ್ಞಾನವನ್ನು ಧಾರೆ ಎರೆದ ಶಿಕ್ಷಕಿ ಎಂ.ಜಿ. ಲತಾ ಹೊಸಕುಂದವಾಡ ಶಾಲೆಯ ಹಳೇ ವಿದ್ಯಾರ್ಥಿಗಳಿಂದ ಗುರುವಿಗೆ ವಂದನೆ

ದಾವಣಗೆರೆ : Teacher ಗುರು ಎಂದರೆ ಕತ್ತಲೆ, ಮತ್ತು ಗುರು ಎಂದರೆ ಹೋಗಲಾಡಿಸುವವನು. ಹೀಗಾಗಿ, ಗುರು ಎಂದರೆ ಕತ್ತಲೆಯನ್ನು ಹೋಗಲಾಡಿಸುವ ಮತ್ತು ಜ್ಞಾನೋದಯದ ಮುನ್ಸೂಚಕನಾದ ಶಿಕ್ಷಕ. ಈ ಮಾತಿಗೆ ತಕ್ಕಂತೆ 30 ವರ್ಷಗಳ ಕಾಲ ಜ್ಞಾನವನ್ನು ಧಾರೆ ಎರೆದ ಶಿಕ್ಷಕಿ ಎಂ.ಜಿ. ಲತಾ ದಾವಣಗೆರೆ ಸಮೀಪದ ಹೊಸಕುಂದವಾಡ ಶಾಲೆಯಲ್ಲಿ ಸುಧೀರ್ಘವಾಗಿ ಕರ್ತವ್ಯ ನಿರ್ವಹಿಸಿ ಅನೇಕ ವಿದ್ಯಾರ್ಥಿಗಳಿಗೆ ಜ್ಞಾನವನ್ನು ನೀಡಿ ಮಾರ್ಗದರ್ಶಕರಾಗಿ ಇಂದಿಗೂ ಸಹ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದಾರೆ.
ಎಂ.ಜಿ. ಲತಾ ಜೂನ್ 10, 1996 ರಂದು ದಾವಣಗೆರೆ ದಕ್ಷಿಣ ವಲಯದ ಹೊಸ ಕುಂದುವಾಡದಲ್ಲಿನ ಉನ್ನತಿಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೊದಲು ಕರ್ತವ್ಯಕ್ಕೆ ಸೇರಿದ ಪ್ರಪ್ರಥಮ ಮಹಿಳಾ ಶಿಕ್ಷಕಿಯಾಗಿ ಮಕ್ಕಳಿಗೆ ಜ್ಞಾನ ಧಾರೆ ಎರೆದಿದ್ದಾರೆ. 2013 ರಂದು ಕುರ್ಕಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡ ಇವರು ಆರು ವರ್ಷ ಸೇವೆ ಸಲ್ಲಿಸಿ ಪುನಹ ಹೊಸಕುಂದವಾಡದ ಶಾಲೆಗೆ ಮರಳಿ. ಆರು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದಾರೆ. ಶಿಕ್ಷಕಿ ಲತಾ ಅವರು ನಮ್ಮನ್ನು ಬಿಟ್ಟು ಹೋಗ್ತಾರೆ ಎಂದು ಇಂದಿಗೂ ಹಳೆಯ ವಿದ್ಯಾರ್ಥಿಗಳು ಹಾಗೂ ಈಗಿನ ವಿದ್ಯಾರ್ಥಿಗಳು ಭಾವುಕತೆಯನ್ನು ವ್ಯಕ್ತಪಡಿಸುತ್ತಾರೆ.
ಅವರ ಸೇವಾವಧಿಯಲ್ಲಿ ಮಾಡಿದಂತಹ ವಿದ್ಯಾರ್ಥಿಗಳಿಗೆ ಸೇವಾ ಮನೋಭಾವನೆ ಹಾಗೂ ವಿದ್ಯಾರ್ಥಿಗಳಿಗೆ ತಿಳಿಸುವಂತ ಪಾಠ ಪ್ರವಚನಗಳ ಬಗ್ಗೆ ಹಳೆಯ ವಿದ್ಯಾರ್ಥಿಗಳು ಇಂದಿಗೂ ಮೇಲು ಹಾಕುತ್ತಿದ್ದಾರೆ. ಹೊಸ ಕುಂದುವಾಡದಲ್ಲಿನ ಉನ್ನತಿಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿ ಲತಾ ಅವರಿಂದ ಶಿಕ್ಷಣ ಪಡೆದು ಬದುಕು ಕಟ್ಟಿಕೊಂಡಿರುವ ಹಳೇ ವಿದ್ಯಾರ್ಥಿಗಳು ಜೊತೆಗೆ ಹೊಸ ಕುಂದುವಾಡ ಗ್ರಾಮಸ್ಥರು, ಎಸ್ ಡಿಎಂಸಿ ಸದಸ್ಯರು ಲತಾ ಅವರ ನಿವೃತ್ತಿಯ ಹಿನ್ನೆಲೆ ಗೌರವ ಸನ್ಮಾನದೊಂದಿಗೆ ಬೀಳ್ಕೊಟ್ಟು, ಆಶೀರ್ವಾದ ಪಡೆದು ಮುಂದಿನ ಅವರ ಜೀವನ ಸುಖಕರವಾಗಿರಲಿ ಎಂದು ಹಾರೈಕೆಯೊಂದಿಗೆ ಗುರು ವಂದನೆ ಅರ್ಪಿಸಿದ್ದಾರೆ.ಅಲ್ಲದೇ ಅದೇ ಶಾಲೆಯಲ್ಲಿ 14 ವರ್ಷಗಳ ಕಾಲ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ ಭವಿಷ್ಯದ ಬೆಳಕು ನೀಡಿ ನಿವೃತ್ತಿ ಹೊಂದಿದ ದೈಹಿಕ ಶಿಕ್ಷಕ ಹೆಚ್.ಎಸ್. ಮೋಹನ್ ಕುಮಾರ್ ಅವರನ್ನು ಸಹ ಶಿಕ್ಷಕಿ ಲತಾ ಅವರೊಂದಿಗೆ ಸನ್ಮಾನಿಸಿ ಗುರು ವಂದನೆ ಸಲ್ಲಿಸಲಾಯಿತು.