ಹೋರಾಟ-ಚಳುವಳಿ-ಚುನಾವಣೆ ಕುರಿತು ನವೆಂಬರ್ 8 ರಂದು ದಾವಣಗೆರೆಯಲ್ಲಿ ‘ಚಿಂತನ ಮಂಥನ’ – ರೈತ ಮುಖಂಡ ತೇಜಸ್ವಿ ಪಟೇಲ್

ದಾವಣಗೆರೆ: ಸಮಾಜ ಅಧ್ಯಯನ ಕೇಂದ್ರ ಬೆಂಗಳೂರು ಅಪ್ನಾ ಭಾರತ ಮೋರ್ಚಾ (ABM) ಕರ್ನಾಟಕ ಮತ್ತು ಪ್ರಗತಿಪರ ಒಕ್ಕೂಟ ದಾವಣಗೆರೆ ಜಂಟಿಯಾಗಿ ಆಯೋಜಿಸಿರುವ” ಜನಪರ ಹೋರಾಟ, ಚಳುವಳಿಗಳು ಮತ್ತು ಚುನಾವಣೆ ರಾಜಕಾರಣ ” ಚಿಂತನ-ಮಂಥನ ಗೋಷ್ಠಿಯನ್ನು ಇದೆ 8ರಂದು 11:00 ಗಂಟೆಗೆ ನಗರದ ರೋಟರಿ ಕ್ಲಬ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರೈತ ಮುಖಂಡ ತೇಜಸ್ವಿ ಪಟೇಲ್ ತಿಳಿಸಿದರು
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಕಾರ್ಯಕ್ರಮದ ಉದ್ಘಾಟನೆಯನ್ನು ಅಶೋಕ್ ತನ್ವರ್ ರಾಷ್ಟ್ರೀಯ ಸಂಚಾಲಕ ಅಪ್ನಾ ಭಾರತ ಮೋರ್ಚಾ,ಹರಿಯಾಣ ನೆರವೇರಿಸುವರು ಮುಖ್ಯ ಅತಿಥಿಗಳಾಗಿ ಪ್ರಗತಿಪರ ಲೇಖಕಿ ಬಿ ಟಿ ಲಲಿತಾ ನಾಯಕ್ ಹಾಗೂ ಹೋರಾಟಗಾರ ಎಸ್ಆರ್ ಹಿರೇಮಠ ಆಗಮಿಸುವರು
ಗಿರಿ ಡಿಕೆ ಪ್ರಾಧ್ಯಾಪಕ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯ ನವದೆಹಲಿ ಹಾಗೂ ಗೋಪಾಲ್ ಬಿ ಸಮಾಜ ಪರಿವರ್ತನ ವೇದಿಕೆ ಹಾಗೂ ರಾಮಚಂದ್ರಪ್ಪ ಹೇಬಿ ನಿವೃತ್ತಿ ಪ್ರಾಧ್ಯಾಪಕ ವಿಚಾರ ಮಂಡನೆ ಮಾಡುವರು
ಈ ಕಾರ್ಯಕ್ರಮದಲ್ಲಿ ದಾದಾಪೀರ್ ನವಿಲೇಹಾಳ್, ಮುಚ್ಚುವನೆ ಮಂಜುನಾಥ್,ಬಲ್ಲೂರ್ ರವಿಕುಮಾರ್, ನುಲೇನೂರು ಎನ್ ಶಂಕ್ರಪ್ಪ,ಕೊಟ್ರಪ್ಪ ಬಿ, ನರಸಿಂಹಮೂರ್ತಿ, ಈಚಗಟ್ಟ ಸಿದ್ದವೀರಪ್ಪ, ಮಲ್ಲಿಕಾರ್ಜುನ ಬಳ್ಳಾರಿ,ಶಿವಾನಂದ ಕುಗ್ವೆ,ಪೂಜಾರ್ ಆಂಜನಪ್ಪ,ಪ್ರಭುಗೌಡ, ರೂಫ್ಲ ನಾಯಕ್ ಇನ್ನುಮುಂದಾದರೂ ಭಾಗವಹಿಸುವರು ಎಂದರು
ಸುದ್ದಿಗೋಷ್ಠಿಯಲ್ಲಿ ಪೂಜಾರ್ ಆಂಜನಪ್ಪ, ಬಲ್ಲೂರ್ ರವಿಕುಮಾರ್ ಮುಂತಾದವರು ಇದ್ದರು