ವಿಧಾನಸಭಾ ಅಧಿವೇಶನದ ತಾತ್ಕಾಲಿಕ ಕಾರ್ಯಕ್ರಮ ಪಟ್ಟಿ ಫೆ.11ಕ್ಕೆ ರಾಜ್ಯಪಾಲರ ಭಾಷಣ, 17ರಂದು ಬಜೆಟ್ ಮಂಡನೆ

ಬೆಂಗಳೂರು: ಕರ್ನಾಟಕ ವಿಧಾನಸಭೆ ಹದಿನೈದನೇ ಅಧಿವೇಶನದ ತಾತ್ಕಾಲಿಕ ಕಾರ್ಯಕ್ರಮದ ಪಟ್ಟಿ ಪ್ರಕಟಗೊಂಡಿದೆ.
ಫೆಬ್ರವರಿ 10 ರಿಂದ 24ರವರೆಗೆ ಕಾರ್ಯಕಲಾಪಗಳು ನಡೆಯಲಿವೆ. ಫೆ.11ರ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ.
ದಿ.11ಹಾಗೂ 12ರಂದು ಸಾರ್ವತ್ರಿಕ ರಜೆ, 13ರಿಂದ 15 ಸರ್ಕಾರಿ ಕಾರ್ಯಕಲಾಪಗಳು, 16ರಂದು ಸರ್ಕಾರಿ/ಖಾಸಗಿ ಕಾರ್ಯಕಲಾಪಗಳು ನಡೆಯಲಿವೆ.
ಫೆ.17ರಂದು ಮುಖ್ಯಮಂತ್ರಿಗಳು 2023-24ನೇ ಸಾಲಿನ ಆಯವ್ಯಯ ಮಂಡನೆ ಮಾಡಲಿದ್ದಾರೆ.
ದಿ.18 ಹಾಗೂ 19 ರಂದು ಸಾರ್ವತ್ರಿಕ ರಜೆ. ದಿ.20 ರಿಂದ 24ರವರೆ ಕಾರ್ಯಕಲಾಪಗಳು ನಡೆಯಲಿವೆ.