ದಾವಣಗೆರೆ ಕಾಂಗ್ರೆಸ್ ಜಿಲ್ಲಾ ಸಾಮಾಜಿಕ ಜಾಲತಾಣದಲ್ಲಿ ಕಾರ್ಯ ನಿರ್ವಹಿಸಿಲು ಅವಕಾಶ ನೀಡಿದ್ದ ಎಲ್ಲರಿಗೂ ಧನ್ಯವಾದಗಳು

kl

ದಾವಣಗೆರೆ; ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸಾಮಾಜಿಕ ಜಾಲತಾಣ ವಿಭಾಗ ಪ್ರಾರಂಭಿಸಿದಾಗ ಜಿಲ್ಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದ ಯುವಕರುಗಳನ್ನು ಗುರುತಿಸಿ ಅವರಿಗೆ ಅವಕಾಶ ನೀಡಿದ ಸಂದರ್ಭದಲ್ಲಿ, ನನ್ನನ್ನು ಸಾಮಾಜಿಕ ಜಾಲತಾಣ ವಿಭಾಗದ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪಕ್ಷದ ಪರವಾಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟಿದಿರಿ.

ಪಕ್ಷ ನೀಡಿದ ಕೆಲಸವನ್ನು ನಾನು ನನ್ನ ಶಕ್ತಿ ಮೀರಿ ಕಾರ್ಯನಿರ್ವಹಿಸಿದ ಫಲವಾಗಿ ಮುಂದೆ ಸಾಮಾಜಿಕ ಜಾಲತಾಣದ ಜಿಲ್ಲಾ ಉಪಾಧ್ಯಕ್ಷನಾಗಿ, ರಾಜ್ಯ ಸಮಿತಿ ಸದಸ್ಯನಾಗಿ, ರಾಜ್ಯ ಕಾರ್ಯದರ್ಶಿಯಾಗಿ, ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ತದನಂತರ ಪಕ್ಷದ ಮುಖಂಡರ ಆದೇಶದ ಮೇರೆಗೆ ಜಿಲ್ಲಾಧ್ಯಕ್ಷನಾಗಿಯೂ ಇಲ್ಲಿಯವರೆಗೂ ಕಾರ್ಯ ನಿರ್ವಹಿಸಿದ್ದು, ಪಕ್ಷದ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಸಮಯ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಇತ್ತೀಚೆಗೆ ನನ್ನ ಜಿಲ್ಲಾಧ್ಯಕ್ಷ ಹುದ್ದೆಯನ್ನು ತ್ಯಜಿಸಿದ್ದೇನು.

ಪಕ್ಷವೂ ಇಂದು ಜಿಲ್ಲಾ ಸಾಮಾಜಿಕ ಜಾಲತಾಣದ ನೂತನ ಜಿಲ್ಲಾಧ್ಯಕ್ಷರಾಗಿ ಆತ್ಮೀಯ ಸ್ನೇಹಿತ ಶ್ರೀಕಾಂತ್ ಬಂಗೇರ ನೇಮಿಸಿದ್ದು, ಅವರನ್ನು ಅಭಿನಂದಿಸುತ್ತ ನನಗೆ ಇಲ್ಲಿಯವರೆಗೆ ನೀಡಿದ ಸಹಕಾರವನ್ನು ಎಲ್ಲರೂ ಅವರಿಗೂ ಸಹ ನೀಡಲಿ ಎಂದು ಕೇಳಿಕೊಳ್ಳುತ್ತೇನೆ.

ಸಾಮಾಜಿಕ ಜಾಲತಾಣದಲ್ಲಿ ನನ್ನನ್ನು ಗುರುತಿಸಿ ಅವಕಾಶ ನೀಡಿದ ನಾಯಕರುಗಳಿಗೂ, ಮುಖಂಡರುಗಳಿಗೂ, ಕಾರ್ಯಕರ್ತರಿಗಳಿಗೂ ಹಾಗೂ ಸುದ್ದಿ ಮಾಧ್ಯಮದ ಸ್ನೇಹಿತರುಗಳಿಗೂ ನಾನು ಆತ್ಮೀಯ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಧನ್ಯವಾದಗಳು

ಕೆ.ಎಲ್.ಹರೀಶ್ ಬಸಾಪುರ.

Leave a Reply

Your email address will not be published. Required fields are marked *

error: Content is protected !!