ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ 23ನೇ ಅಧಿವೇಶನ 2023 ಫೆಬ್ರವರಿ 11,12,13, ಕ್ಕೆ ನಡೆಯಲಿದೆ – ಶಾಮನೂರು ಶಿವಶಂಕರಪ್ಪ

ದಾವಣಗೆರೆ: ಬೆಳಗಾವಿಯ ಸುವರ್ಣ ಸೌಧದಲ್ಲಿ ಡಿಸೆಂಬರ್ 19ರಿಂದ ಚಳಿಗಾಲದ ಅಧಿವೇಶನ ನಡೆಯುತ್ತಿರುವ ಕಾರಣ ದಾವಣಗೆರೆಯಲ್ಲಿ ಡಿಸೆಂಬರ್ 24ರಿಂದ ಆಯೋಜಿಸಲಾಗಿದ್ದ ಅಖಿಲ ಭಾರತ ವೀರಶೈವ ಲಿಂಗಾಯುತ ಮಹಾಸಭಾದ 23ನೇ ಅಧಿವೇಶನವನ್ನು ಮುಂದೂಡಲಾಗಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಅಧಿವೇಶನದ ವೇಳೆ ಅನೇಕ ವಿಚಾರಧಾರೆಗಳು ಸಮಾಜಕ್ಕೆ ದಿಕ್ಕೂಚಿ ಮತ್ತು ಅಮೂಲ್ಯ ಆಗುವ ಕಾರಣ ತಾವು ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ದಾವಣಗೆರೆಯ ಎಂ.ಬಿ.ಎ. ಕಾಲೇಜು ಮೈದಾನದಲ್ಲಿ ಡಿಸೆಂಬರ್ 24 ರಿಂದ 26ರ ವರೆಗೆ ನಿಗದಿಯಾಗಿದ್ದ ಮಹಾಸಭಾದ ಅಧಿವೇಶನವನ್ನು ಮುಂದೂಡಬೇಕು ಎಂಬುದಾಗಿ ಸಮಾಜದ ಅನೇಕ ಜನಪ್ರತಿನಿಧಿಗಳು ಅಭಿಪ್ರಾಯ ವ್ಯಕ್ತ ಪಡಿಸಿರುವುದರಿಂದ ಮುಂದೂಡಲಾಗಿದೆ ಎಂದರು.

ಉತ್ತರ ಕರ್ನಾಟಕದ ಕೆಲ ಜಿಲ್ಲಾ ಅಧ್ಯಕ್ಷರು ಅಧಿವೇಶನದ ಸಂಘಟನೆಗೆ ಲಭ್ಯವಿರುವ ಸಮಯ ಕಡಿಮೆ ಎಂದು ತಿಳಿಸಿದ್ದರು. ಸಾರ್ವಜನಿಕ ವಲಯದಿಂದಲೂ ಮುಂದೂಡಿವಿಕೆಯ ಬಗ್ಗೆ ಹೆಚ್ಚು ಒಲವು ಕಂಡ ಬಂದ ಹಿನ್ನೆಲೆಯಲ್ಲಿ ಅಧಿವೇಶನವನ್ನ ಮುಂದೂಡಲಾಗಿದೆ. ಅಧಿವೇಶನವನ್ನು ರದ್ದುಪಡಿಸಿಲ್ಲ ಮುಂದೂಡಲಾಗಿದೆ ಅಷ್ಟೇ ಎಂದು ಸ್ಪಷ್ಟ ಪಡಿಸಿದರು.

ಮುಂದಿನ 2023ರ ಫೆಬ್ರವರಿ 11ರಿಂದ 13ರವರೆಗೆ ಅದೇ ಎಂ.ಬಿ.ಎ. ಕಾಲೇಜು ಮೈದಾನದಲ್ಲಿ ಇನ್ನೂ ಹೆಚ್ಚಿನ ಹುರುಪು, ವೈಭವದಿಂದ 23ನೇ ಅಧಿವೇಶನವನ್ನು ಅತ್ಯಂತ ಯಶಸ್ವಿಯಾಗಿ ನಡೆಸಲಾಗುವುದು ಎಂದು ತಿಳಿಸಿದರು.

ಈ ವೇಳೆ ಮಹಾಸಭಾದ ಎಸ್.ಎಸ್.ಗಣೇಶ್, ಅಥಣಿ ಎಸ್.ವೀರಣ್ಣ, ಅಣಬೇರು ರಾಜಣ್ಣ, ರೇಣುಕ ಪ್ರಸನ್ನ ಜಿಲ್ಲಾಧ್ಯಕ್ಷ ದೇವರಮನೆ ಶಿವಕುಮಾರ್, ಶುಭ ಐನಳ್ಳಿ, ನಿರ್ಮಲಾ ಸುಭಾಷ್, ಬಿ.ಜಿ. ರಮೇಶ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!