ಭದ್ರಾ ನಾಲೆಯಲ್ಲಿ ಸಿಕ್ಕ ಅನಾಮಧೇಯ ಶವ ಶಿವಮೊಗ್ಗ ಜಿಲ್ಲೆಯ ಮಹಿಳೆಯದ್ದು
ದಾವಣಗೆರೆ: ದಾವಣಗೆರೆ ಜಿಲ್ಲೆ ಬಸವಾ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯ ಕಣಿವೆ ಬಿಳಚಿ ಗ್ರಾಮದ ಬಳಿ ಭದ್ರಾ ನಾಲೆಯಲ್ಲಿ ದಿನಾಂಕ: 09-05-2024 ರಂದು ಅನಾಮಧೇಯ ಮೃತ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಬಗ್ಗೆ ಬಸವಾಪಟ್ಟಣ ಗ್ರಾಮದ ಶ್ರೀ ಅಣ್ಣಪ್ಪರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಮೇರೆಗೆ ಬಸವಾಪಟ್ಟಣ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಸದರಿ ಮೃತ ದೇಹವು ಸಂಪೂರ್ಣ ಕೊಳೆತ ಸ್ಥಿತಿಯಲಿದ್ದು, ಸುಮಾರು ೪೦-೪೫ ವರ್ಷ ವಯಸ್ಸಿನ ಮಹಿಳೆಯ ಶವದಂತೆ ಇರುವ ಬಗ್ಗೆ ಮೇಲ್ನೋಟಕ್ಕೆ ಕಂಡುಬಂದಿತ್ತು
ಕೊರಳಲ್ಲಿ ಹಗ್ಗ ಸುತ್ತಿದ ರೀತಿಯಲ್ಲಿದ್ದು, ಯಾರೋ ಎಲ್ಲಿಯೋ ಕೊಲೆ ಮಾಡಿ ಚಾನಲ್ ಗೆ ಹಾಕಿರುವ ಬಗ್ಗೆ ಅನುಮಾನಸ್ಪದವಾಗಿದ್ದ ಕಾರಣ ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ 61/2024 ಕಲಂ 302,. 201 ಐಪಿಸಿ ರೀತ್ಯಾ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲಾಗಿರುತ್ತದೆ.
ಸದರಿ ಪ್ರಕರಣದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಶ್ರೀ ವಿಜಯಕುಮಾರ ಎಂ ಸಂತೋಷ, ಶ್ರೀ ಮಂಜುನಾಥ ಜಿ ರವರುಗಳ & ಶ್ರೀ ಪ್ರಶಾಂತ್ ಮನ್ನೋಳಿ, ಡಿ.ವೈ.ಎಸ್.ಪಿ ಚನ್ನಗಿರಿ ಉಪವಿಭಾಗ ರವರ ಮಾರ್ಗದರ್ಶನದಲ್ಲಿ ತನಿಖಾಧಿಕಾರಿಗಳಾದ ಶ್ರೀ ಗೋಪಾಲ ನಾಯ್ಕ್ ಸಿ.ಪಿ.ಐ ಸಂತೇಬೆನ್ನೂರು ವೃತ್ತ ರವರ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿ ಸಿಬ್ಬಂದಿಗಳನ್ನೊಳಗೊಂಡ ತಂಡವನ್ನು ರಚಿಸಿದ್ದು, ಸದರಿ ತಂಡವು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪ್ರಕರಣ ತನಿಖೆ ಕೈಗೊಂಡಿದ್ದು, ಮೃತ ಶವದ ಗುರುತು ಪತ್ತೆಗಾಗಿ ಜಿಲ್ಲೆಯ ಹಾಗೂ ಅಕ್ಕ ಪಕ್ಕದ ಜಿಲ್ಲೆಗಳ ಮನುಷ್ಯ ಕಾಣೆಯಾದ ಪ್ರಕರಣಗಳ ಬಗ್ಗೆ ಪರಶೀಲನೆ ಕೈಗೊಂಡಿದ್ದರು.
ಈ ಸಮಯದಲ್ಲಿ ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಗುನ್ನೆ ನಂ ೧೪೦/೨೦೨೪ ರಲ್ಲಿ ಕಲಂ ಕಾಣೆ ಪ್ರಕರಣದಲ್ಲಿನ ಮಹಿಳೆಯ ಚಹರೆಗೂ ಹಾಗೂ ಅನಾಮಧೇಯ ಶವದ ಚಹರೆಗೂ ಹೊಲಿಕೆ ಕಂಡು ಬಂದ ಮೇರೆಗೆ ಮುಂದಿನ ತನಿಖೆ ಕೈಗೊಂಡಿದ್ದು, ಮಹಿಳೆಯ ಸಂಬಂಧಿಕರನ್ನು ಸಂಪರ್ಕಿಸಿದಾಗ ಮೃತ ಶವದ ಗುರುತು ಪತ್ತೆ ಮಾಡಿದ್ದು, ನಂತರ ಸದರಿ ಮೃತ ದೇಹವು ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಅರಕೆರೆ ಗ್ರಾಮದ ನೇತ್ರಾವತಿ, (47 ವರ್ಷ) ಎಂದು ತಿಳಿದು ಬಂದಿದೆ.
ಸದರಿ ಮಹಿಳೆಯ ಕೊಲೆ ಪ್ರರಕಣದಲ್ಲಿ ಎಲ್ಲಾ ಆಯಾಮಗಳಲ್ಲಿ ತೀವ್ರ ಕಾರ್ಯಾಚರಣೆ ಕೈಗೊಂಡು, ಮಹಿಳೆಯ ಕೊಲೆ ಪ್ರಕರಣದಲ್ಲಿನ ಆರೋಪಿಗಳಾದ 01) ಕುಮಾರ ಹೆಚ್ ಜಿ, ೫೦ ವರ್ಷ, ನಾಗೊಲೆ (ಅರಕೆರೆ ಗೇಟ್) ಗ್ರಾಮ, ಭದ್ರಾವತಿ ತಾ. ಶಿವಮೊಗ್ಗ ಜಿಲ್ಲೆ, 02) ಚಿದಾನಂದಪ್ಪ, ೫೪ ವರ್ಷ, ಅರಕೆರೆ ಗ್ರಾಮ, ಭದ್ರಾವತಿ ತಾ. ಶಿವಮೊಗ್ಗ ಜಿಲ್ಲೆ ಇವರುಗಳನ್ನು ವಶಕ್ಕೆ ಪಡೆದು, ವಿಚಾರಣೆ ಮಾಡಿದಾಗ, ಸದರಿ ಮೃತ ನೇತ್ರಾವತಿಯು ದಿನಾಂಕ: 20-04-2024 ರಂದು ಕೊಲೆ ಆರೋಪಿಗಳ ಜಮೀನಿನಲ್ಲಿ ಅಡಿಕೆ ಗಿಡಗಳನ್ನು ಕಡಿದಿದ್ದರಿಂದ ಕೋಪಗೊಂಡ ಆರೋಪಿತರು ಮೃತ ನೇತ್ರಾವತಿಯನ್ನು ತಮ್ಮ ಜಮೀನಿನಲ್ಲಿ ಕೊಲೆ ಮಾಡಿ ನಂತರ ಜಮೀನಿನ ಸಮೀಪದ ಭದ್ರಾ ಚಾನಲ್ ನಲ್ಲಿ ಹಾಕಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ.
ಸದರಿ ಕೊಲೆ ಪ್ರಕರಣದ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಹಾಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಸದರಿ ಕೊಲೆ ಪ್ರಕರಣವನ್ನು ಭೇಧಿಸಿ ಆರೋಪಿಗಳ ಪತ್ತೆಕಾರ್ಯದಲ್ಲಿ ಯಶಸ್ವಿಯಾದ ಮೇಲ್ಕಂಡ ಅಧಿಕಾರಿಗಳು ಸೇರಿದಂತೆ, ತನಿಖಾಧಿಕಾರಿಗಳಾದ ಶ್ರೀ ಗೋಪಾಲ ನಾಯ್ಕ್ ಸಿ.ಪಿ.ಐ ಸಂತೇಬೆನ್ನೂರು ವೃತ್ತ, ಬಸವಾ ಪಟ್ಟಣ ಪೊಲೀಸ್ ಠಾಣೆಯ ಪಿಎಸ್ಐ ಕು. ವೀಣಾ ಕೆ & ಸಿಬ್ಬಂದಿರವರುಗಳಾದ ಇದಾಯತ್, ಎಎಸ್ಐ, ರಂಗನಾಥ, ರುದ್ರೇಶ್, ಸತೀಶ್, ವೀರಭದ್ರಪ್ಪ, ಪರಶುರಾಮ, ರವಿ, ಇರ್ಷಾದ್, ಮಂಜುನಾಥ, ಇಬ್ರಾಹೀಂ, ಜಿಲ್ಲಾ ಪೊಲೀಸ್ ಕಛೇರಿಯ ರಾಘವೇಂದ್ರ, ಶಾಂತರಾಜ ರವರುಗಳನ್ನು ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ. ಐ.ಪಿ,ಎಸ್ ರವರು ಶ್ಲಾಘಿಸಿರುತ್ತಾರೆ