ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ಜನಸಾಮಾನ್ಯರ ನಿರೀಕ್ಷೆಯನ್ನು ಹುಸಿಗೊಳಿಸಿದೆ.

ಕೇಂದ್ರ ಸರ್ಕಾರ
ಚಿತ್ರದುರ್ಗ: ದೇಶದ ಯುವಕರಿಗೆ ಉದ್ಯೋಗ ಹಾಗೂಬಡತನ ನಿರ್ಮೂಲನೆಗೆ ಅನುಕೂಲಕರವಾದಂತಹ ಯಾವುದೇ ಯೋಜನೆ ನೀಡಿಲ್ಲ.
ಪೆಟ್ರೋಲ್,ಡಿಸೇಲ್ ,ಗ್ಯಾಸ್ ಹಾಗೂ ದಿನ ನಿತ್ಯ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಅವುಗಳ ಮೇಲೆ ಹೇರಿರುವ ಮತ್ತಷ್ಟು ಸೆಸ್ಗಳು ಜೊತೆಗೆ ಕೃಷಿ ಮತ್ತು ಕೃಷಿಗೆ ಬಳಸುವ ರಸಗೊಬ್ಬರದ ಮೇಲಿನ ಸೆಸ್ ಹೆಚ್ಚಳದಿಂದ ದೇಶದ ರೈತರಿಗೆ ಶಾಕ್ ನೀಡಿದ್ದಾರೆ. ಹೀಗೆಎಲ್ಲಾ ವಲಯದಲ್ಲೂ ಹೆಚ್ಚಿನ ಸೆಸ್ ಹೊರೆಯಾಗಿದ್ದು ಯಾವುದೇ ರೀತಿಯ ಮುನ್ನೋಟ ಹಾಗೂ ಜನ ಸಾಮಾನ್ಯರಿಗೆಅನುಕೂಲಕರವಾಗುವಂತಹ ಯಾವುದೇ ಸಿಹಿಸುದ್ದಿಯನ್ನೊಳಗೊಳ್ಳದ ಬಜೆಟ್ ಜನರ ನಿರೀಕ್ಷೆ ಹುಸಿಗೊಳಿಸಿರುವುದಂತೂ ನಿಜ.
ಇನ್ನೂ ಕರ್ನಾಟಕದ ಪಾಲಿಗಂತೂ ನಿರಾಶೆಯ ಬಜೆಟ್ ಆಗಿದ್ದು , ಭದ್ರಾ ಮೇಲ್ದಂಡೆ ಯೋಜನೆಗೆ 5300ಕೋಟಿ ರೂಮೀಸಲಿಟ್ಟಿರುವುದು ಕೇವಲ ಮಿಸಲಾಗಿದ್ದರೆ ಈಗದು ಅದು ಬಳಕೆಯಾಗಬೇಕು. ಈ ಹಿಂದಿನ ಹಲವು ರೈಲ್ವೇ ಹಾಗೂ ನಿರಾವರಿಯೋಜನೆಗಳಿಗೆ ಮೀಸಲಿಟ್ಟಿದ್ದ ಹಣ ಒಂದು ರೂಪಾಯಿಯೂ ಬಳಕೆಯಾಗಿಲ್ಲ.
ವೈದ್ಯಕೀಯ ಉಪಕರಣಗಳು ಮತ್ತು ವಸ್ತುಗಳ ಬೆಲೆಯೇರಿಕೆ ಮಾಡಿರುವುದು ದುರದೃಷ್ಟಕರ. ಒಟ್ಟಾರೆಯಾಗಿ ಈ ಬಜೆಟ್ಜನಸಾಮಾನ್ಯರಿಗೆ ನಿರಾಶಾದಾಯಕವಾದದ್ದಂತೂ ಸತ್ಯ.
ಪ್ರಕಾಶ್ ರಾಮಾನಾಯ್ಕ್.,ಜಿಲ್ಲಾಧ್ಯಕ್ಷರು.
ಮಾಹಿತಿ ತಂತ್ರಜ್ಞಾನ ವಿಭಾಗ,ಜಿಲ್ಲಾ ಕಾಂಗ್ರೆಸ್ ಸಮಿತಿ,ಚಿತ್ರದುರ್ಗ.

 
                         
                       
                       
                       
                       
                       
                       
                      