ಜನರಿಗೆ ವಿಶ್ವಾಸ ದ್ರೋಹವೆಸರಿಗಿರುವ ಕೇಂದ್ರ ಬಿಜೆಪಿ ಸರ್ಕಾರ- ಎಂ ಎನ್ ಶ್ರೀರಾಮ್!

tippesvami

ದಾವಣಗೆರೆ: ಎಸ್ ಯು ಸಿ ಐ (ಕಮ್ಯುನಿಸ್ಟ್) ಅಭ್ಯರ್ಥಿ ಅಣಬೇರು ತಿಪ್ಪೇಸ್ವಾಮಿ ಪರ ಹರಿಹರದಲ್ಲಿ ಪ್ರಚಾರ!

ದೇಶದ ಜನರಿಗೆ ಹಲವು ಭರವಸೆಗಳನ್ನು ನೀಡಿ 2014ರಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಹತ್ತು ವರ್ಷಗಳ ತನ್ನ ದುರಾಡಳಿತದಿಂದ ಜನರಿಗೆ ವಿಶ್ವಾಸದ್ರೋಹವೆಸಗಿದೆ ಎಂದು ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ರಾಜ್ಯ ಸಮಿತಿ ಸದಸ್ಯರಾದ ಎಂ ಎನ್ ಶ್ರೀರಾಮ್ ಆಕ್ರೋಶ ವ್ಯಕ್ತಪಡಿಸಿದರು. ಪಕ್ಷದ ದಾವಣಗೆರೆ ಲೋಕಸಭಾ ಅಭ್ಯರ್ಥಿ ಅಣಬೇರು ತಿಪ್ಪೇಸ್ವಾಮಿಯವರ ಪರ ಹರಿಹರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಜನರ ಮೂಲಭೂತ ಸಮಸ್ಯೆಗಳಾದ ಹಸಿವು, ಬಡತನ, ನಿರುದ್ಯೋಗ ಮುಂತಾದವುಗಳನ್ನು ಪರಿಹರಿಸದೆ ಅಂಬಾನಿ, ಅದಾನಿ ಮುಂತಾದ ಬಂಡವಾಳಿಗರ ಪರ ನೀತಿಗಳನ್ನು ಬಿಜೆಪಿಯು ಜಾರಿಗೊಳಿಸಿದೆ. ಇನ್ನು, ಬಿಜೆಪಿಗೆ ತಾನೇ ಪರ್ಯಾಯ ಎಂದು ‘ಇಂಡಿಯಾ’ ಒಕ್ಕೂಟದ ನೇತೃತ್ವ ವಹಿಸಿರುವ ಕಾಂಗ್ರೆಸ್ ಹೇಳಿಕೊಳ್ಳುತ್ತಿದೆ. ಆದರೆ, ತನ್ನ 60 ವರ್ಷಗಳ ಆಳ್ವಿಕೆಯಲ್ಲಿ ಬಂಡವಾಳಶಾಹಿಪರ ನೀತಿಗಳಿಂದಾಗಿ ಕಾಂಗ್ರೆಸ್ಸು ಜನರ ಬದುಕನ್ನು ಬೀದಿಗೆ ತಳ್ಳಿದೆ. ಇಂತಹ ಪರಿಸ್ಥಿತಿಯಲ್ಲಿ ದೇಶದ ಬಂಡವಾಳಶಾಹಿಗಳ ಏಜೆಂಟರಾಗಿರುವ ಕಾಂಗ್ರೆಸ್-ಬಿಜೆಪಿ ಪಕ್ಷಗಳ ವಿರುದ್ಧ ಬಲಿಷ್ಠ ಜನಹೋರಾಟಗಳನ್ನು ಬೆಳೆಸುವುದು ಎಡಪಕ್ಷಗಳ ಜವಾಬ್ದಾರಿಯಾಗಿತ್ತು. ಇದನ್ನು ಮರೆತಿರುವ ಸಿಪಿಐ, ಸಿಪಿಐ (ಎಂ) ಎಡ ಪಕ್ಷಗಳು ಪ್ಯಾಸಿವಾದಿ ಬಿಜೆಪಿಯನ್ನು ಸೋಲಿಸುವ ಹೆಸರಿನಲ್ಲಿ ಕಾಂಗ್ರೆಸ್ ಬಾಲ ಹಿಡಿದಿವೆ.

ದೇಶದಲ್ಲಿ ದಿನಕ್ಕೆ 5000 ಮಕ್ಕಳು ಅಪೌಷ್ಟಿಕತೆಯನ್ನು ಸಾಯುತಿದ್ದಾರೆ. 20 ನಿಮಿಷಕೊಬ್ಬ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ನಿರುದ್ಯೋಗ ಮತ್ತು ಆರ್ಥಿಕ ಸಮಸ್ಯೆಗಳಿಂದ ಯುವಕರು ಆತ್ಮಹತ್ಯೆಯ ಮೊರೆ ಹೋಗುತ್ತಿದ್ದಾರೆ. ಮಹಿಳೆಯರ ಮೇಲಿನ ಅತ್ಯಾಚಾರಗಳು ಅವ್ಯಾಹತವಾಗಿ ನಡೆಯುತ್ತಿವೆ. ಒಟ್ಟಾರೆ, ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕ ಬಿಕ್ಕಟ್ಟನ್ನು ಎದುರಿಸಲಾಗದೆ ನರಕ ಸದೃಶ ಬದುಕನ್ನು ಜನರು ನಡೆಸುತ್ತಿದ್ದಾರೆ. ಯಾವುದನ್ನೂ ಲೆಕ್ಕಿಸದ ನರೇಂದ್ರ ಮೋದಿ ಸರ್ಕಾರವು ಕಳೆದ ಹತ್ತು ವರ್ಷಗಳಲ್ಲಿ ದೇಶದ ಕಾರ್ಪೊರೇಟ್ ಮನೆತನಗಳಿಗೆ 12 ಲಕ್ಷ ಕೋಟಿಗೂ ಹೆಚ್ಚು ತೇರಿಗೆ ವಿನಾಯಿತಿ ನೀಡಿದೆ. ಯಾವುದೇ ಭ್ರಷ್ಟಾಚಾರವನ್ನು ನಡೆಸಿಲ್ಲ ಎಂದು ಕೊಚ್ಚಿಕೊಳ್ಳುವ ಪ್ರಧಾನಿಯವರು ಚುನಾವಣಾ ಬಾಂಡ್ ಹೆಸರಲ್ಲಿ ಜಗತ್ತಿನಲ್ಲೇ ಅತಿ ದೊಡ್ಡ ಹಗರಣಕ್ಕೆ ಕಾರಣರಾಗಿದ್ದಾರೆ.


ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ದೇಶದ ನಾಗರಿಕರು ಪ್ರಜ್ಞಾವಂತರಾಗಬೇಕು. ಬಂಡವಾಳಶಾಹಿ ಬಿಜೆಪಿ ಕಾಂಗ್ರೆಸ್ ಪಕ್ಷಗಳನ್ನು ಧಿಕ್ಕರಿಸಿ, 76 ವರ್ಷಗಳಿಂದ ನಿರಂತರವಾಗಿ ಜನಹೋರಾಟಗಳನ್ನು ಕಟ್ಟುತ್ತಿರುವ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷವನ್ನು ಬೆಂಬಲಿಸಬೇಕು. ದಾವಣಗೆರೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಅಣಬೇರು ತಿಪ್ಪೇಸ್ವಾಮಿಯವರ ಆಟೋರಿಕ್ಷಾ ಗುರುತಿಗೆ ಮತ ನೀಡುವುದರ ಮೂಲಕ ಹೋರಾಟಗಾರರನ್ನು ಜನರು ಗೆಲ್ಲಿಸಬೇಕು. ಆಗ ಮಾತ್ರವೇ ಜನ ಹೋರಾಟದ ಧ್ವನಿಯು ಲೋಕಸಭೆಯಲ್ಲಿ ಒಳಗಲು ಸಾಧ್ಯ. ಎಂದು ಅವರು ಜನರಿಗೆ ಕರೆ ನೀಡಿದರು.

ಅಭ್ಯರ್ಥಿ ಅಣಬೇರು ತಿಪ್ಪೇಸ್ವಾಮಿ ಮಾತನಾಡಿ, ಬಂಡವಾಳಶಾಹಿಪರ ರಾಜಕೀಯವನ್ನು ತಿರಸ್ಕರಿಸಿ, ತಮ್ಮನ್ನು ಗೆಲ್ಲಿಸುವ ಮೂಲಕ ರೈತ,ಕಾರ್ಮಿಕರ, ದುಡಿಯುವ ಜನಗಳ ಪರವಾದ ಹೋರಾಟದ ರಾಜಕೀಯವನ್ನು ಬೆಂಬಲಿಸಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಸಮಿತಿ ಸದಸ್ಯರಾದ ಮಂಜುನಾಥ್ ಕುಕ್ವಾಡ ವಹಿಸಿದ್ದರು. ರಾಜ್ಯ ಸಮಿತಿ ಸದಸ್ಯರಾದ ಅಪರ್ಣಾ ಬಿ ಆರ್, ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಕೈದಾಳೆ, ಜಿಲ್ಲಾ ಸಮಿತಿ ಸದಸ್ಯರಾದ ಮಧು ತೊಗಲೇರೆ, ಟಿ ವಿ ಎಸ್ ರಾಜು, ಭಾರತಿ, ಮಹಾಂತೇಶ, ಪರಶುರಾಮ ಸೇರಿದಂತೆ ಕಾರ್ಯಕರ್ತರಾದ ಅನೀಲ್, ಪೂಜಾ, ಸ್ಮಿತಾ ಹಾಗೂ ಸಾರ್ವಜನಿಕರು ಸಭೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!