ನರೇಗಾ ಯೋಜನೆಯಡಿ ನೂರು ದಿನ ಪೊರೈಸಿದ ಶ್ರೀಮತಿ ಮಂಜುಳರವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿದ ಆಯುಕ್ತರು.

ಬೆಂಗಳೂರಿ: ಇಂದು ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ನಡೆದ ರಾಷ್ಟ್ರೀಯ ನರೇಗಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಮಾನ್ಯ ಗ್ರಾಮೀಣಾಭಿವೃದ್ಧಿ ಆಯುಕ್ತರಾದ ಶ್ರೀಮತಿ ಶಿಲ್ಪಾ ನಾಗ್‌ರವರು ಅವರು ಉದ್ಯೋಗ ಖಾತರಿ ಯೋಜನೆಯಿಂದ ಲಕ್ಷಾಂತರ ಕುಟುಂಬಗಳು ಇಂದು ದೇಶದಲ್ಲಿ ತಮ್ಮ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಇಂತಹ ಒಂದು ಅದ್ಭುತವಾದ ಯೋಜನೆಯಲ್ಲಿ ನಾವೆಲ್ಲಾ ಕೆಲಸ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಸರ್ಕಾರಿ ಕೆಲಸ ದೇವರ ಕೆಲಸ, ಗ್ರಾಮೀಣ ಭಾಗದ ಜನರಿಗೆ ಬದುಕು ಕಟ್ಟಿಕೊಳ್ಳಲು ನೆರವಾಗುತ್ತಿರುವ ಈ ಯೋಜನೆಯ ಭಾಗವಾಗಿರುವುದು ಬಹಳ ಅರ್ಥಪೂರ್ಣವಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ನರೇಗಾಜ್ಯೋತಿಯ ಬೆಳಕನ್ನು ಕತ್ತಲ್ಲಿನಲ್ಲಿರುವ ಗ್ರಾಮೀಣ ಕುಟುಂಬಗಳಿಗೆ ತಲುಪಿಸಲು ನಿರಂತರ ಶ್ರಮ ಪಡುತ್ತಿರುವ ಎಲ್ಲಾ ಆತ್ಮೀಯ ಸಿಬ್ಬಂದಿ ಹಾಗೂ ಅಧಿಕಾರಿ ವರ್ಗದವರಿಗೆ ಮಾನ್ಯ ಗ್ರಾಮೀಣಾಭಿವೃದ್ಧಿ ಆಯುಕ್ತರಾದ ಶ್ರೀಮತಿ ಶಿಲ್ಪಾ ನಾಗ್‌ರವರು ನರೇಗಾ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದರು. ರಾಜ್ಯಕ್ಕೆ ನೀಡಿರುವ 13.00 ಕೋಟಿ ಮಾನವ ದಿನಗಳನ್ನು ಮೀರಿ 14 ಕೋಟಿ ಮಾನವ ದಿನಗಳ ಗುರಿ ಮೀರಿದ ಸಾಧನೆಗೆ ಇಡೀ ರಾಜ್ಯದ ನರೇಗಾ ಕೂಲಿಕಾರರು ಹಾಗೂ ನರೇಗಾ ಯೋಜನೆಯ ಸಿಬ್ಬಂದಿಯ ಸಹಕಾರವನ್ನು ಶ್ಲಾಘಿಸಿದರು.
ಇದೇ ಸಮಯದಲ್ಲಿ ನರೇಗಾ ಯೋಜನೆಯಡಿ 100 ದಿನಗಳ ಉದ್ಯೋಗ ಪೂರೈಸಿರುವ ಆಯ್ದ ಫಲಾನುಭವಿಗಳನ್ನು ಸನ್ಮಾನಿಸಲಾಯಿತು. ಲಾಕ್‌ಡೌನ್ ಸಂಕಷ್ಟ ಕಾಲದಲ್ಲಿ ನರೇಗಾ ಬದುಕು ಕಟ್ಟಿಕೊಳ್ಳಲು ನೆರವಾಗಿದೆ. ಯೋಜನೆಯಿಂದ ಅನುಕೂಲಗಳನ್ನು ಪಡೆದಿದ್ದೇವೆ ಎಂದು ಫಲಾನುಭವಿಗಳು ತಿಳಿಸಿದರು. ರಾಜ್ಯಾಧ್ಯಂತ ಎಲ್ಲಾ ಜಿಲ್ಲೆಗಳಲ್ಲಿ ವಿಜೃಂಭಣೆಯಿಂದ ಮತ್ತು ಅರ್ಥಪೂರ್ಣವಾಗಿ ನರೇಗಾ ದಿನಾಚರಣೆಯನ್ನು ಆಚರಣೆ ಮಾಡಲಾಯಿತು.
ಸಮಾರಂಭದಲ್ಲಿ ಹಿರಿಯ ಅಧಿಕಾರಿಗಳು ಮತ್ತು ಹಲವು ಫಲಾನುಭವಿಗಳು ಭಾಗವಹಿಸಿದ್ದರು.

 
                         
                       
                       
                       
                       
                      