ಸೀಟಿ ಒಡೆಯಲು ಸಜ್ಜಾಗಿದ್ದ ಕುಕ್ಕರ್ ಸೀಜ್.! ಕಾಂಗ್ರೆಸ್ ನಾಯಕರ ಫೋಟೊ ಇರುವ 16 ಲಕ್ಷ ಮೌಲ್ಯದ ಬಾಕ್ಸ್‌ಗಳು ವಶ

ದಾವಣಗೆರೆ: ಬೆಣ್ಣೆ ನಗರಿಯಲ್ಲಿ ಈಗ ಚುನಾವಣೆ ಹವಾ ಜೋರಾಗಿದ್ದು, ಮತದಾರರ ಮನೆಯಲ್ಲಿ ಸೀಟಿ ಒಡೆಯಲು ಕುಕ್ಕರ್‌ಗಳು ಗುಪ್ತ ಸ್ಥಳದಲ್ಲಿ ಸೀಟಿ ಒಡೆಯುತ್ತಿದ್ದು, ಖಾಕಿ ಪಡೆ ಹಾಗೂ ಚುನಾವಣಾ ಅಧಿಕಾರಿಗಳು ಇದಕ್ಕೆ ಬ್ರೇಕ್ ಹಾಕುತ್ತಿದ್ದಾರೆ. ಸದ್ಯ ಸ್ಲಮ್‌ಗಳಲ್ಲಿ ಕುಕ್ಕರ್ ಹವಾ ಜೋರಾಗಿದ್ದು, ಅಲ್ಲಿನ ಕಾಂಗ್ರೆಸ್ ನ ಪಾಲಿಕೆ ಸದಸ್ಯರು ಇದರ ಸೂತ್ರಧಾರಿಗಳಾಗಿದ್ದಾರೆ.. ಅಂತೆಯೇ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಲು ಪ್ರಚೋದಿಸುತ್ತಾ ಜನರಿಗೆ ಕುಕ್ಕರ್ ಹಂಚುತ್ತಿದ್ದ ಮಹಾನಗರ ಪಾಲಿಕೆ ಸದಸ್ಯ ಸೇರಿದಂತೆ ಇಬ್ಬರ ಮೇಲೆ ಕೆಟಿಜೆ ನಗರ ಪೊಲೀಸ್ ಠಾಣೆಯಲಿ ದೂರು ದಾಖಲಾಗಿದೆ. ಅಲ್ಲದೇ 16 ಲಕ್ಷ ವೌಲ್ಯದ ಕುಕ್ಕರ್ ಬಾಕ್ಸ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಲು ಪ್ರಚೋದಿಸುತ್ತಾ ಜನರಿಗೆ ಕುಕ್ಕರ್ ಹಂಚುತ್ತಿದ್ದ ಮಹಾನಗರ ಪಾಲಿಕೆ ಸದಸ್ಯ ಸೇರಿದಂತೆ ಇಬ್ಬರ ಮೇಲೆ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪಾಲಿಕೆ 26ನೇ ವಾರ್ಡ್ ಸದಸ್ಯ ಅಬ್ಬುಲ್ ಲತೀಫ್ ಹಾಗೂ ಜೊತೆಗಿದ್ದ ಜಬೀವುಲ್ಲಾ ವಿರುದ್ಧ ಐಪಿಸಿ 171(4) ಕಲಂ ಅನ್ವಯ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಕಳೆದ ಮಾ.18ರಂದು ರಾತ್ರಿ 10 ಗಂಟೆ ಸುಮಾರಿಗೆ ಕೆಟಿಜೆ ನಗರದಲ್ಲಿ ಜನರಿಗೆ ಅಡುಗೆ ಮಾಡುವ ಕುಕ್ಕರ್ ಮತ್ತಿತರೆ ಗೃಹೋಪಯೋಗಿ ಉತ್ಪನ್ನಗಳನ್ನು ಹಂಚುತ್ತಿದ್ದರು. ಉತ್ಪನ್ನಗಳಿರುವ ರಟ್ಟಿನ ಬಾಕ್ಸ್ ಮೇಲೆ ದಾವಣಗೆರೆ ದಕ್ಷಿಣ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಭಾವಚಿತ್ರದೊಂದಿಗೆ ಎಸ್‌ಎಸ್‌ಎಂ ಅಭಿಮಾನಿ ಬಳಗ ಎಂಬುದಾಗಿ ಮುದ್ರಿಸಲಾಗಿದೆ.
ಕುಕ್ಕರ್ ಹಂಚುತ್ತಿದ್ದ ಪಾಲಿಕೆ ಸದಸ್ಯ ಮತ್ತವರ ಬೆಂಬಲಿಗರು 40 ಪರ್ಸೆಟ್ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುವಂತೆ ಜನರಿಗೆ ಪ್ರಚೋದಿಸುತ್ತಿದ್ದರೆಂದು ವಾಜೀದ್ ಎಂಬುವರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ವಿಧಾನಸಭೆ ಚುನಾವಣೆಗೆ ಒಂದೂವರೆ ತಿಂಗಳು ಮೊದಲೇ ಕಾಂಗ್ರೆಸ್ನವರು ಮತದಾರರಿಗೆ ಸೀರೆ, ಕುರ್ಕ್ಕ ಹಂಚಿಕೆ ಮಾಡುವ ಮೂಲಕ ಆಮಿಷ ತೋರಿಸುತ್ತಿದ್ದು, ತಕ್ಷಣವೇ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಆಗ್ರಹಿಸಿದ್ದರು.
ಉತ್ತರ ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದವರು ಹಂಚಿದರೆನ್ನಲಾದ ಸೀರೆ ಹಾಗೂ ಕುಕ್ಕರ ಸಹಿತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಗರಕಟ್ಟೆ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರ ಮನೆಯಲ್ಲಿಯೇ ಹಂಚಿದ್ದ ಕುಕ್ಕರ್ ಸ್ಫೋಟಗೊಂಡು ಕಣ್ಣಿಗೆ ಹಾನಿಯಾಗಿದೆ. ಹಂಚುವುದಾದರೆ ಕೊನೆ ಪಕ್ಷ ಉತ್ತಮ ಗುಣಮಟ್ಟದ ಕುಕ್ಕರ್ ಗಳನ್ನಾದರೂ ಹಾಗೂ 10-15 ಸಾವಿರ ರೂ. ವೌಲ್ಯದ ರೇಷ್ಮೆ ಸೀರೆಗಳನ್ನಾದರೂ ಹಂಚಲಿ ಎಂದರು.
ನಗರವನ್ನು ಸಿಂಗಾಪುರ ಮಾಡಿದ್ದೇ ನಾವು ಎಂದು ಬೊಬ್ಬೆ ಹೊಡೆಯುತ್ತಿರುವ ಕಾಂಗ್ರೆಸ್ ಮುಖಂಡರು, ಆಮಿಷ ತೋರಿಸಿ ಗೆಲ್ಲುವ ಕನಸು ಕಾಣುತ್ತಿದ್ದಾರೆ. 74 ವರ್ಷಗಳ ಹಿಂದೆ ಶಾಮನೂರು ಶಿವಶಂಕರಪ್ಪರ ಆಸ್ತಿ ಎಷ್ಟಿತ್ತು? ಈಗ ಎಷ್ಟಿದೆ? ಎಂದು ಅವರು, ಶಾಮನೂರು ಅವಧಿಯಲ್ಲಿ ನಡೆದಿರುವ ಭ್ರಷ್ಟಾಚಾರಗಳನ್ನು ಮುಚ್ಚಿಕೊಳ್ಳಲು ಇವರಿಗೆ ಶಾಸಕ, ಸಂಸದರ ಸ್ಥಾನಗಳು ಬೇಕೇ ಹೊರತು, ನಗರ ಅಭಿವೃದ್ಧಿ ಮಾಡಲಲ್ಲ ಎಂದು ಟೀಕಿಸಿದರು.
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಈ ಬಾರಿ ಮತದಾರರು ಎಚ್ಚೆತ್ತುಕೊಂಡಿದ್ದಾರೆ. ಕಾಂಗ್ರೆಸ್‌ನ ಕುತಂತ್ರ ರಾಜಕಾರಣ ಗೊತ್ತಾಗಿದೆ. ಸುಳ್ಳು ಆಶ್ವಾಸನೆಗಳನ್ನು ನಂಬಿ ಓಟು ಹಾಕುತ್ತಿದ್ದ ಅಲ್ಪಸಂಖ್ಯಾತ ಮತದಾರರೂ ಸಹ ಬಿಜೆಪಿ ಬಗ್ಗೆ ಒಲವು ತೋರಿಸುವ ಮೂಲಕ ಬಿಜೆಪಿ ಸೇರುತ್ತಿದ್ದಾರೆ ಎಂದು ಅವರು ಹೇಳಿದ್ದರು.