ದಾವಣಗೆರೆ ಮಹಾನಗರ ಪಾಲಿಕೆ ಬಜೆಟ್! ಟೆರೇಸ್ ಗಾರ್ಡನ್ (Terrace Garden) ಗೆ 5 ಲಕ್ಷ ಮಿಸಲು

terrace garden

ದಾವಣಗೆರೆ: 2021-22ನೇ ಸಾಲಿನ ಪರಿಷ್ಕತ ಹಾಗೂ 2022-23ನೇ ಸಾಲಿನ ಆಯ-ವ್ಯಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ತಾರಸಿ ಉದ್ಯಾನವನದ (Terrace Garden)ಕಾರ್ಯಕ್ರಮವನ್ನು 5 ಲಕ್ಷ ವೆಚ್ಚದಲ್ಲಿ ನಿರ್ಮಿಸಲು ಮಹಾನಗರ ಪಾಲಿಕೆ ಘೋಷಿಸಿದೆ. ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಗುರುವಾರ ನಡೆದ ಆಯ-ವ್ಯಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಕೈಗೊಂಡಿದ್ದು, ತಾರಸಿ ಉದ್ಯಾನವನ ಕಾರ್ಯಕ್ರಮದಲ್ಲಿ ಉದ್ಯಾನವನ ಉತ್ತೇಜಿಸಲು ಜಾಗೃತಿ ಶಿಬಿರ ಮತ್ತು ನಾಗರೀಕರಿಗೆ ತರಬೇತಿ ಹಾಗೂ ತರಬೇತಿ ಪಡೆದ ನಾಗರೀಕರಿಗೆ ಟೂಲ್ ಕಿಟ್ ನೀಡುವುದರ ಮೂಲಕ ಟೆರಸ್ ಗಾರ್ಡನಿಂಗ್ ಅನ್ನು ಪ್ರಾರಂಭಿಸಲು ರೂ. 5 ಲಕ್ಷಗಳನ್ನು ಮೀಸಲಿರಿಸಿದೆ.
ಟೆರೆಸ್ ಗಾರ್ಡನಿಂಗ್ ಮೂಲಕ ನಗರವನ್ನು ಹಸಿರೀಕರಣ ಮಾಡುವಲ್ಲಿ ಮತ್ತು ಮನೆಗೆ ಬೇಕಾದ ತರಕಾರಿ ಮತ್ತು ಹೂವು ಹಣ್ಣುಗಳನ್ನು ತಮ್ಮ ಮನೆಯಲ್ಲೇ ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ.

 

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!