ದಾವಣಗೆರೆ ಮಹಾನಗರ ಪಾಲಿಕೆ ಬಜೆಟ್! 10 ಲಕ್ಷ ವೆಚ್ಚದಲ್ಲಿ Bonsai Garden ನಿರ್ಮಾಣ

bonsai

ದಾವಣಗೆರೆ: 2021-22ನೇ ಸಾಲಿನ ಪರಿಷ್ಕತ ಹಾಗೂ 2022-23ನೇ ಸಾಲಿನ ಬಜೆಟ್ (Budget) ವಾರ್ಷಿಕ ಸಾಮಾನ್ಯ ಸಭೆಯಲ್ಲಿ (Bonsai Garden) ಬೋನ್‌ಸಾಯ್ ಉದ್ಯಾನವನದ ನಿರ್ಮಾಣಕ್ಕೆ 10 ಲಕ್ಷ ರೂಗಳನ್ನು ದಾವಣಗೆರೆ ಮಹಾನಗರ ಪಾಲಿಕೆ ತನ್ನ ಬಜೆಟ್‌ನಲ್ಲಿ ಘೋಷಿಸಿದೆ. ದಾವಣಗೆರೆ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಗುರುವಾರ ನಡೆದ ಬಜೆಟ್ ಮಂಡನೆ ಸಭೆಯಲ್ಲಿ ಬೋನ್‌ಸಾಯ್ ಉದ್ಯಾನವನಕ್ಕೆ 10 ಲಕ್ಷ ರೂಗಳನ್ನು ಘೋಷಿಸಿದೆ. ನಗರದ ಪಾಲಿಕೆ ವ್ಯಾಪ್ತಿಯಲ್ಲಿರುವ ಒಂದು ಉದ್ಯಾನ ವನದಲ್ಲಿ (Bonsai) ಉದ್ಯಾನವನ ನಿರ್ಮಿಸಲು ಉದ್ದೇಶಿಸಿದ್ದು, ಸುಂದರವಾದ ವಿವಿಧ ಪ್ರಜಾತಿಯ ಕುಬ್ಜ ಮರಗಳನ್ನು ಬೆಳೆಸುವುದರ ಮೂಲಕ ಕುಬ್ಜ ಮರಗಳ ಉದ್ಯಾನವನ ನಿರ್ಮಿಸುವುದರ ಮೂಲಕ ನಗರವನ್ನು ಸುಂದರವಾಗಿಸಲು ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!