ದಾವಣಗೆರೆ ಮಹಾನಗರ ಪಾಲಿಕೆ ಬಜೆಟ್! ಸ್ವಂತ ಆದಾಯದ ಮೂಲಗಳ ಗುರಿ ಎಷ್ಟು ಗೊತ್ತಾ?

ದಾವಣಗೆರೆ: ಮಹಾನಗರ ಪಾಲಿಕೆಗೆ ಆಸ್ತಿತೆರಿಗೆ, ನೀರಿನ ಕಂದಾಯ, ಕಟ್ಟಡ ಪರವಾನಿಗೆ, ಮಳಿಗೆಗಳ ಬಾಡಿಗೆ, ನೆಲಬಾಡಿಗೆ, ಉದ್ದಿಮೆ ಪರವಾನಿಗೆ ಇತ್ಯಾದಿ ಸ್ವಂತ ಮೂಲಗಳಿಂದ ಸಂಗ್ರಹಿಸಲಾಗುವ ಆದಾಯಗಳು ಕೆಳಕಂಡ0ತೆ ಅಂದಾಜಿಸಲಾಗಿದೆ.
ಆಸ್ತಿ ತೆರಿಗೆ: ನಗರ ವ್ಯಾಪ್ತಿಯಲ್ಲಿನ ಕಟ್ಟಡಗಳು ಹಾಗೂ ಖಾಲಿ ನಿವೇಶನಗಳ ಮೇಲೆ ವಿಧಿಸಲಾಗುವ ಆಸ್ತಿ ತೆರಿಗೆಯು ಪಾಲಿಕೆಯ ಅತ್ಯಂತ ಪ್ರಮುಖ ಸ್ವಂತ ಆದಾಯ ಮೂಲವಾಗಿರುತ್ತದೆ. ಪಾಲಿಕೆ ವ್ಯಾಪ್ತಿಗೆ ಒಳಪಡುವ ಎಲ್ಲಾ ಆಸ್ತಿಗಳನ್ನು ಸರ್ವೇ ಮಾಡಿ ಪ್ರತಿ ಆಸ್ತಿಗೆ ಆಸ್ತಿ ಗುರುತು ಸಂಖ್ಯೆ (Property Identification Number) ಯನ್ನು ನೀಡಿ ಸಂಪೂರ್ಣ ಗಣಕೀಕರಣಗೊಳಿಸುವ ಕಾರ್ಯ ಜಾರಿಯಲ್ಲಿದ್ದು ಸದರಿ ಕಾರ್ಯ ಪೂರ್ಣಗೊಂಡ ತರುವಾಯ ಶೇ. 100% ರಷ್ಟು ಆಸ್ತಿಗಳನ್ನು ತೆರಿಗೆ ಜಾಲಕ್ಕೆ ಒಳಪಡಿಸಲಾಗುವುದು. ಸದರಿ ಸಾಲಿನಲ್ಲಿ ಒಟ್ಟು ರೂ. 2500.00 ಲಕ್ಷಗಳ ತೆರಿಗೆ ಸಂಗ್ರಹಣೆಯ ಗುರಿ ಹೊಂದಲಾಗಿದೆ.
ವಾಣಿಜ್ಯ ಮಳಿಗೆಗಳ ಬಾಡಿಗೆ:
ಪಾಲಿಕೆ ಒಡೆತನದ ವಾಣಿಜ್ಯ ಮಳಿಗೆಗಳು ಹಾಗೂ ಸಮುಚ್ಚಯಗಳಿಂದ ಬರುವ ಬಾಡಿಗೆಯು ಪ್ರಮುಖ ಆದಾಯ ಮೂಲಗಳಲ್ಲೊಂದಾಗಿದ್ದು ವಸೂಲಾತಿಯಲ್ಲಿ ಬಿಗಿಯಾದ ಕ್ರಮಗಳನ್ನು ತಂದು ಒಟ್ಟಾರೆಯಾಗಿ ರೂ. 60.00 ಲಕ್ಷಗಳ ಆದಾಯ ಸಂಗ್ರಹದ ಗುರಿ ಹೊಂದಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಕೆ.ಆರ್. ಮಾರುಕಟ್ಟೆ, ಹಳೇ ಬಸ್ ನಿಲ್ದಾಣ ಮುಂತಾದ ಕಡೆ ಹೊಸ ವಾಣಿಜ್ಯ ಮಳಿಗೆ ಸಂಕೀರ್ಣ ನಿರ್ಮಿಸಲಾಗುತ್ತಿದ್ದು ಹೆಚ್ಚುವರಿ ಆದಾಯ ಕ್ರೋಢೀಕರಣಕ್ಕೆ ಸಹಾಯಕವಾಗುವುದು.
ನೀರು ಸರಬರಾಜು ಬಳಕೆದಾರರ ಶುಲ್ಕ:
ಕುಡಿಯುವ ನೀರು ಸರಬರಾಜು ಸಂಪರ್ಕಗಳ ದಾಖಲೆಗಳನ್ನು ಗಣಕೀಕರಣಗೊಳಿಸಲಾಗುತ್ತಿದ್ದು ವಸೂಲಾತಿಯಲ್ಲಿ ಬಿಗಿ ನಿಯಮಗಳನ್ನು ಅನುಸರಿಸಿ ಶೇ. 100%ರಷ್ಟು ವಸೂಲಾತಿ ದಕ್ಷತೆಯನ್ನು ತಂದು ಅಂದಾಜು ರೂ. 500.00 ಲಕ್ಷಗಳ ಆದಾಯ ಸಂಗ್ರಹಣೆಯ ಗುರಿ ಹೊಂದಲಾಗಿದೆ.
ನೀರು ಸರಬರಾಜು ಸಂಪರ್ಕ ಶುಲ್ಕ:
ಗೃಹಬಳಕೆ, ವಾಣಿಜ್ಯ ಬಳಕೆ ಹಾಗೂ ಕೈಗಾರಿಕಾ ಬಳಕೆಯ ಕುಡಿಯುವ ನೀರು ಸರಬರಾಜು ಹೊಸದಾಗಿ ನೀಡುವ ಸಂಪರ್ಕಗಳಿAದ ಮುಂದಿನ ಸಾಲಿನಲ್ಲಿ ಅಂದಾಜು ರೂ. 20.00 ಲಕ್ಷಗಳ ಆದಾಯ ಬರುವ ನಿರೀಕ್ಷೆ ಇದೆ.
ಒಳಚರಂಡಿ ಸಂಪರ್ಕ ಬಳಕೆದಾರರ ಶುಲ್ಕ:
ಪಾಲಿಕೆ ವ್ಯಾಪ್ತಿಯ ವಸತಿ ಕಟ್ಟಡಗಳು ಹಾಗೂ ಖಾಸಗಿ ವಾಣಿಜ್ಯ ಕಟ್ಟಡಗಳಿಗೆ ಒಳಚರಂಡಿ ಸಂಪರ್ಕ ಕಲ್ಪಿಸಿ ಒಳಚರಂಡಿ ಸಂಪರ್ಕ ಬಳಕೆದಾರರ ಶುಲ್ಕವನ್ನು ವಿಧಿಸಿ ವಸೂಲಿ ಮಾಡಲಾಗುತ್ತಿದೆ. 2022-23ನೇ ಸಾಲಿನಲ್ಲಿ ಅಂದಾಜು ರೂ. 75.00 ಲಕ್ಷಗಳ ಆದಾಯ ನಿರೀಕ್ಷೆ ಮಾಡಲಾಗಿದೆ ಹಾಗೂ ಸದರಿ ಸಾಲಿನಲ್ಲಿ ಹೊಸ ಒಳಚರಂಡಿ ಸಂಪರ್ಕ ಶುಲ್ಕ ರೂ. 55.00 ಲಕ್ಷ ಒಟ್ಟಾರೆಯಾಗಿ ರೂ. 130.00 ಲಕ್ಷಗಳನ್ನು ಅಂದಾಜಿಸಲಾಗಿದೆ.
ಸಂತೆ ಸುಂಕ:
ಸಂತೆಗಳು ಹಾಗೂ ಮಾರುಕಟ್ಟೆಗಳಲ್ಲಿ ದೈನಂದಿನ ವ್ಯಾಪಾರ ಮಾಡುವ ರಸ್ತೆ ಬದಿ ವ್ಯಾಪಾರಿಗಳಿಂದ ಕನಿಷ್ಠ ದರದಲ್ಲಿ ಸಂತೆ ಸುಂಕವನ್ನು ಸಂಗ್ರಹಿಸಲಾಗುತ್ತಿದ್ದು, ವಾರ್ಷಿಕ ಹರಾಜಿನ ಮೂಲಕ ಸಂತೆ ಸುಂಕ ಸಂಗ್ರಹಣೆಯನ್ನು ಖಾಸಗಿಯವರಿಗೆ ವಹಿಸಲಾಗಿದೆ. ಈ ಮೂಲದಿಂದ ಸದರಿ ಸಾಲಿನಲ್ಲಿ ಒಟ್ಟು ರೂ. 55.00 ಲಕ್ಷಗಳ ಆದಾಯ ಬರುವ ನಿರೀಕ್ಷೆ ಇದೆ.
ಘನತ್ಯಾಜ್ಯ ನಿರ್ವಹಣೆ ಬಳಕೆದಾರರ ಶುಲ್ಕ:
ವಾಸದ ಕಟ್ಟಡಗಳಿಂದ ಘನತ್ಯಾಜ್ಯ ನಿರ್ವಹಣಾ ಬಳಕೆದಾರರ ಶುಲ್ಕವನ್ನು ಆಸ್ತಿ ತೆರಿಗೆಯೊಂದಿಗೆ ಸಂಗ್ರಹಿಸಲಾಗುತ್ತಿದ್ದು, ಸದರಿ ಶೀರ್ಷಿಕೆಯಡಿ ರೂ. 175.00 ಲಕ್ಷಗಳನ್ನು ನಿರೀಕ್ಷಿಸಲಾಗಿದೆ.
ಕಟ್ಟಡ ಪರವಾನಿಗೆ ಶುಲ್ಕ:
ಕಟ್ಟಡ ಪರವಾನಿಗೆ ನೀಡಿಕೆಯಲ್ಲಿ ಹಲವಾರು ಸುಧಾರಣಾ ಕ್ರಮಗಳನ್ನು ಪೌರಸುಧಾರಣಾ ಕೋಶದ ಸಹಯೋಗದೊಂದಿಗೆ ಜಾರಿಗೆ ತರಲಾಗಿದ್ದು, ಇದಕ್ಕಾಗಿ ನಿರ್ಮಾಣ-2 ಎಂಬ ತಂತ್ರಾ0ಶವನ್ನು ಅಭಿವೃದ್ಧಿಪಡಿಸಿ ಯಶಸ್ವಿಯಾಗಿ ಜಾರಿಗೊಳಿಸಲಾಗಿರುತ್ತದೆ. ಸದರಿ ತಂತ್ರಾ0ಶದ ಮೂಲಕ ಕಟ್ಟಡ ಪರವಾನಿಗೆಗಳನ್ನು ವಿಳಂಬವಿಲ್ಲದೆ ನೀಡಲಾಗುತ್ತಿದೆ. ಮುಂದಿನ ಸಾಲಿನಲ್ಲಿ ಒಟ್ಟು ರೂ. 100.00 ಲಕ್ಷಗಳ ಆದಾಯವನ್ನು ಸಂಗ್ರಹಿಸುವ ಗುರಿ ಹೊಂದಲಾಗಿದೆ.
ಉದ್ದಿಮೆ ಪರವಾನಿಗೆ ಶುಲ್ಕ (ಟ್ರೇಡ್ ಲೈಸೆನ್ಸ್ ಫೀ):
ನಗರದಲ್ಲಿ ಸಾವಿರಾರು ಉದ್ದಿಮೆಗಳು ಹಾಗೂ ವ್ಯಾಪಾರ ಚಟುವಟಿಕೆ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಸದರಿ ಉದ್ದಿಮೆಗಳು ಹಾಗೂ ವ್ಯಾಪಾರ ಕೇಂದ್ರಗಳ ನಿಯಂತ್ರಣ ಮತ್ತು ಪ್ರೋತ್ಸಾಹಕ್ಕಾಗಿ ಉದ್ದಿಮೆ ಪರವಾನಿಗೆಯನ್ನು ನೀಡಲಾಗುತ್ತಿದೆ. ಇದಕ್ಕಾಗಿ ವ್ಯಾಪಾರ ಎಂಬ ತಂತ್ರಾ0ಶವನ್ನು ಪೌರ ಸುಧಾರಣಾ ಕೋಶದ ವತಿಯಿಂದ ಅಭಿವೃದ್ಧಿ ಪಡಿಸಲಾಗಿದೆ. ಇದರಿಂದ ಉದ್ದಿಮೆ ಪರವಾನಿಗೆ ನೀಡಿಕೆ ಪ್ರಕ್ರಿಯೆ ಸಂಪೂರ್ಣ ಗಣಕೀಕರಣಗೊಂಡಿದ್ದು, ದಕ್ಷತೆ ಹಾಗೂ ಪಾರದರ್ಶಕತೆಯನ್ನು ತರಲಾಗಿರುತ್ತದೆ. ಒಟ್ಟಾರೆಯಾಗಿ ಮುಂದಿನ ಸಾಲಿನಲ್ಲಿ ಒಟು ರೂ. 80.00 ಲಕ್ಷಗಳ ಆದಾಯ ಸಂಗ್ರಹಣೆಯ ಗುರಿ ಹೊಂದಲಾಗಿದೆ.
ರಸ್ತೆ ಕಡಿತ ಶುಲ್ಕ:
ಟೆಲಿಕಾಂ ಸಂಸ್ಥೆಗಳು ಫೈಬರ್ ಆಪ್ಟಿಕ್ಸ್ ಹಾಗೂ ವಿದ್ಯುತ್ ಸರಬರಾಜು ಸಂಸ್ಥೆಗಳು ಹೈಟೆನ್ಷನ್ ವಿದ್ಯುತ್ ಕೇಬಲ್ಗಳ ಜಾಲವನ್ನು ಅಳವಡಿಸುತ್ತಿದ್ದು, ನಗರ ವ್ಯಾಪ್ತಿಯಲ್ಲಿ ಹಲವೆಡೆ ರಸ್ತೆಗಳನ್ನು ಕಡಿಯಲಾಗುತ್ತಿದೆ. ಸದರಿ ಸಂಸ್ಥೆಗಳಿಗೆ ನಿಯಮಾನುಸಾರ ರಸ್ತೆ ಕಡಿತದ ಶುಲ್ಕವನ್ನು ವಿಧಿಸಿ ವಸೂಲಿ ಮಾಡಲಾಗುತ್ತಿದೆ. ಸದರಿ ಮೂಲದಿಂದ ರೂ. 150.00 ಲಕ್ಷಗಳ ಆದಾಯ ಸಂಗ್ರಹಿಸುವ ಗುರಿ ಹೊಂದಲಾಗಿದೆ.
ಆಸ್ತಿಗಳ ವರ್ಗಾವಣೆ ಮೇಲಿನ ಹೆಚ್ಚುವರಿ ಅಧಿಬಾರ ಶುಲ್ಕ:
ಪಾಲಿಕೆ ವ್ಯಾಪ್ತಿಯಲ್ಲಿಯ ಸ್ಥಿರಾಸ್ತಿಗಳ ವರ್ಗಾವಣೆ ಸಂದರ್ಭದಲಿ ನೋಂದಣಿ ಮತು ್ತ ಮುದ್ರಾಂಕ ಇಲಾಖೆಯಲ್ಲಿ ಸಂಗ್ರಹವಾಗುವ ಹೆಚ್ಚುವರಿ ಅಧಿಬಾರ ಶುಲ್ಕವನ್ನು ಪ್ರತಿ ವರ್ಷ ಪಾಲಿಕೆಗೆ ವರ್ಗಾಯಿಸಲಾಗುತ್ತಿದ್ದು, ಮುಂದಿನ ಸಾಲಿನಲ್ಲಿ ಅಂದಾಜು ರೂ. 50.00 ಲಕ್ಷಗಳ ವರ್ಗಾವಣೆ ನಿರೀಕ್ಷಿಸಲಾಗಿದೆ.
ಅಭಿವೃದ್ಧಿ ಶುಲ್ಕ:
ನಗರ ವ್ಯಾಪ್ತಿಯಲ್ಲಿ ಅಭಿವೃದ್ಧಿಪಡಿಸಲಾಗುವ ಖಾಸಗಿ ಬಡಾವಣೆಗಳ ಅನುಮೋದನೆ ಹಾಗೂ ಏಕ ನಿವೇಶನ ವಿನ್ಯಾಸ ಅನುಮೋದನೆ ಸಮಯದಲ್ಲಿ ಅಭಿವೃದ್ಧಿ ಶುಲ್ಕವನ್ನು ವಸೂಲಿ ಮಾಡಲಾಗುತ್ತಿದ್ದು, ಮುಂದಿನ ಸಾಲಿನಲ್ಲಿ ಅಂದಾಜು ರೂ. 30.00 ಲಕ್ಷಗಳ ಆದಾಯ ಸಂಗ್ರಹಣೆಯ ನಿರೀಕ್ಷೆ ಇದೆ.