ದಾವಣಗೆರೆ ಮಹಾನಗರ ಪಾಲಿಕೆ ಬಜೆಟ್! ಎಸ್.ಎಫ್.ಸಿ ಎಸ್.ಸಿ.ಎಸ್.ಪಿ, ಟಿ.ಎಸ್.ಪಿ ಕಾರ್ಯಕ್ರಮಗಳ ನಿರೀಕ್ಷೆ ಏನು ಗೊತ್ತಾ?

palike

ದಾವಣಗೆರೆ : ಸದರಿ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಇದರಡಿ ಒಟ್ಟು ರೂ. 237.00 ಲಕ್ಷಗಳ ಅನುದಾನ ನಿರೀಕ್ಷಿಸಲಾಗಿದೆ.
ಸ್ವಚ್ಛ್ ಭಾರತ್ ಅಭಿಯಾನ-ಎಸ್.ಡಬ್ಲೂ.ಎಂ ಅನುದಾನ:

ಸದರಿ ಯೋಜನೆಯಡಿ ಕೇಂದ್ರ ಸರ್ಕಾರದಿಂದ ರೂ. 1766.27 ಲಕ್ಷಗಳು ಮತ್ತು ದಾವಣಗೆರೆ ಸ್ಮಾರ್ಟ್ಸಿಟಿ ಲಿ., ಯಿಂದ ರೂ. 916.00 ಲಕ್ಷಗಳು ಒಟ್ಟಾರೆಯಾಗಿ ರೂ. 2682.27 ಲಕ್ಷಗಳ ಅನುದಾನ ನಿರೀಕ್ಷಿಸಲಾಗಿದೆ.
ಡೇ-ನಲ್ಮ್ ಯೋಜನೆ ಅನುದಾನ:

ಸದರಿ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಲು ಸರ್ಕಾರದಿಂದ ರೂ. 25.00 ಲಕ್ಷಗಳ ಅನುದಾನ ನಿರೀಕ್ಷಿಸಲಾಗಿದೆ.

ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅನುದಾನ:
ಸದರಿ ಯೋಜನೆಯಡಿ ದಾವಣಗೆರೆ ಉತ್ತರ ಮತ್ತು ದಕ್ಷಿಣ ಕ್ಷೇತ್ರಗಳಿಗೆ ವಿವಿಧ ಅಭಿವೃದ್ಧಿ ಕಾಮಗಾರಿ, ಸಾರ್ವಜನಿಕ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಪ್ರಸಕ್ತ ವರ್ಷದಲ್ಲಿ ರೂ. 20.00 ಲಕ್ಷಗಳ ಅನುದಾನ ನಿರೀಕ್ಷಿಸಲಾಗಿದೆ. ಒಟ್ಟಾರೆಯಾಗಿ 2022-23ನೇ ಸಾಲಿಗೆ ಮಹಾನಗರ ಪಾಲಿಕೆಯ ಸ್ವಂತ ಮೂಲಗಳಿಂದ ಒಟ್ಟು ರೂ. 4356.80 ಲಕ್ಷಗಳು, ರಾಜಸ್ವ ಅನುದಾನಗಳಿಂದ ರೂ. 7056.00 ಲಕ್ಷಗಳು ಹಾಗೂ ಬಂಡವಾಳ/ವಿಶೇಷ ಅನುದಾನಗಳಿಂದ ರೂ. 14044.27 ಲಕ್ಷಗಳ ಆದಾಯ ಸಂಗ್ರಹಣೆಯ ಗುರಿಯನ್ನು ಹೊಂದಲಾಗಿದ್ದು, ಒಟ್ಟಾರೆಯಾಗಿ ರೂ. 25457.07 ಲಕ್ಷಗಳ ಆದಾಯ ಸಂಗ್ರಹಣೆ ಗುರಿ ಹೊಂದಲಾಗಿದೆ.

Leave a Reply

Your email address will not be published. Required fields are marked *

error: Content is protected !!