ಎಲೆಕ್ಷನ್ ಪರ್ವಕಾಲದಲ್ಲಿ ಪ್ರಧಾನಿಗೇ ಬೊಮ್ಮಾಯಿ ಸರ್ಕಾರ ಶಾಖ್.! ಪ್ರಧಾನಿಗೆ ಸಿಟಿಜನ್ ರೈಟ್ಸ್ ನೀಡಿದ ದೂರಿನಲ್ಲೇನಿದೆ.?

ಬೆಂಗಳೂರು: ಎಲೆಕ್ಷನ್ ಪರ್ವಕಾಲದಲ್ಲಿ ಪ್ರಧಾನಿಗೇ ಬೊಮ್ಮಾಯಿ ಸರ್ಕಾರ ಶಾಖ್ ಕೊಟ್ಟಿದೆ. ಕರಾವಳಿಯಲ್ಲಿನ ಅನಿರೀಕ್ಷಿತ ಬೆಳವಣಿಗೆ ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿದ್ದರೆ ಇನ್ನೊಂದೆಡೆ ಬಿಪಿಎಲ್ ಕಾರ್ಡ್ ಅವಾಂತರ ‘ಗರೀಬಿ ಹಟಾವೋ’ ಎಂಬ ಮೋದಿ ನಡೆಗೆ ಅಡ್ಡಿಯಾಗಿದೆಯೇ ಎಂಬ ಚರ್ಚೆ ಆರಂಭವಾಗಿದೆ.

ರಾಜ್ಯದಲ್ಲಿನ ಹಲವಾರು ಹಗರಣಗಳ ಆರೋಪಗಳು ಮೋದಿ ಸೇನೆಗೆ ಮುಜುಗರದ ಸನ್ನಿವೇಶ ಸೃಷ್ಟಿಸಿದ್ದರೆ, ಇದೀಗ ಬಿಪಿಎಲ್ ಕಾರ್ಡ್‌ದಾರರಿಗೆ ಸರ್ಕಾರ ಕೊಡುತ್ತಿರುವ ಪ್ರಹಾರ ಕಮಲ ಪಾಳಯಕ್ಕೇ ಸವಾಲೆಂಬಂತಿದೆ. ಈ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಲುಪಿರುವ ದೂರೊಂದು ಬಿಜೆಪಿ ಹೈಕಮಾಂಡ್ ಪಾಳಯದಲ್ಲಿ ಸಂಚಲನ ಸೃಷ್ಟಿಸಿದೆ.

ದೇಶದ ಹಲವೆಡೆ ಅಕ್ರಮ ಪಡಿತರ ಚೀಟಿ ವಿರುದ್ದ ಕಾರ್ಯಾಚರಣೆ ಸಾಗಿದೆ. ಇತ್ತ ಕರ್ನಾಟಕ ಸರ್ಕಾರವೂ ಅಕ್ರಮ ಬಿಪಿಎಲ್ ಕಾಡ್‌ಗಳ ಪತ್ತೆಗಾಗಿ ಅರ್ಥಪೂರ್ಣ ಕಾರ್ಯಾಚರಣೆ ಕೈಗೊಂಡಿದೆ. ಆದರೆ ಈ ವಿಚಾರದಲ್ಲಿ ಅಧಿಕಾರಿಗಳು ಸಾಗಿರುವ ಮಾರ್ಗ ಅವಾಂತರಕ್ಕೆ ಕಾರಣವಾಗಿದ್ದು, ಈ ಬಗ್ಗೆ ಕಡು ಬಡವರು ಹಿಡಿಶಾಪ ಹಾಕುತ್ತಿದ್ದಾರೆ. ಈ ವಿಚಾರದಲ್ಲಿ ಕಡುಬಡವರ ಪರವಾಗಿ ನಿಂತಿರುವ ‘ಸಿಟಿಜನ್ ರೈಟ್ಸ್ ಫೌಂಡೇಷನ್’ ಅಧ್ಯಕ್ಷ ಕೆ.ಎ.ಪಾಲ್ ಅವರು ಪ್ರಧಾನಿಗೆ ಪತ್ರ ಬರೆದು ಬೊಮ್ಮಾಯಿ ಸರ್ಕಾರದ ಲೋಪಗಳ ಬಗ್ಗೆ ಗಮನಸೆಳೆದಿದೆ.

ಕಡುಬಡವರಿಗಾಗಿ ಮೀಸಲಿರುವ ಬಿಪಿಎಲ್ ಪಡಿತರ ವ್ಯವಸ್ಥೆಯನ್ನು ಅನೇಕರು ಅಪಬಳಕೆ ಮಾಡುತ್ತಿದ್ದಾರೆಂಬ ಆರೋಪ ಇಂದು ನಿನ್ನೆಯದಲ್ಲ. ಬಿಪಿಎಲ್ ಕಾರ್ಡ್ ಹೊಂದಿದವರು ಷರತ್ತು ಉಲ್ಲಂಘಿಸಿದರೆ ಕಾರ್ಡ್ ರದ್ದು ಪಡಿಸಬೇಕಾದದ್ದು ಅಧಿಕಾರಿಗಳ ಕರ್ತವ್ಯವೂ ಹೌದು. ಅದರಂತೆಯೇ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದ್ದು, ನಾಲ್ಕು ಚಕ್ರಗಳ ವಾಹನ ಹೊಂದಿದವರೂ ಸೇರಿದಂತೆ ಕೆಲವು ಸಂಗತಿಗಳನ್ನು ಮುಂದಿಟ್ಟು ಅಕ್ರಮದ ಆರೋಪದಲ್ಲಿ ಸಾವಿರಾರು ಮಂದಿಗೆ ನೋಟಿಸ್ ನೀಡಿದೆ.

*ಏನಿದು BPL ಅವಾಂತರ..?*

BPL ರೇಷನ್ ಕಾರ್ಡ್ ಹೊಂದಿದವರ ಪಟ್ಟಿಯನ್ನು ಸಿದ್ದಪಡಿಸಿರುವ ಸರ್ಕಾರ ಈವರೆಗೆ 12,548 ಕುಟುಂಬಗಳಿಗೆ ನೋಟಿಸ್ ನೀಡಿದೆ ಎಂಬುದು ಮಾಧ್ಯಮಗಳ ವರದಿ. ಈ ನೋಟಿಸ್‌ಗಳಲ್ಲಿ ಕಾರ್ಡ್ ರದ್ದುಪಡಿಸುವ ಎಚ್ಚರಿಕೆಯಷ್ಟೇ ಅಲ್ಲ, ದಂಡ ಕಟ್ಟಬೇಕೆಂದೂ ಹಾಗೂ ಕ್ರಮಿನಲ್ ಪ್ರಕರಣ ಎದುರಿಸಬೇಕೆಂದೂ ಬೆದರಿಸಲಾಗಿದೆ.

*50,000ಕ್ಕೂ ಹೆಚ್ಚು ಬಡವರ ಮೇಲೆ ಕೇಸ್ ಹಾಕುತ್ತಾ ಸರ್ಕಾರ?*

ಒಂದೊಂದು ಕುಟುಂಬದಲ್ಲಿ 4-5 ಮಂದಿ ಇರುವುದು ಸಾಮಾನ್ಯ, ಆಹಾರ ಇಲಾಖೆಯ ಈ ನೋಟಿಸ್ ಪ್ರಕಾರ ಅಕ್ರಮವಾಗಿ ಬಿಪಿಎಲ್ ಕಾರ್ಡ್ ಹೊಂದಿವೆ ಎನ್ನಲಾದ ಪ್ರತೀ ಕುಟುಂಬದಲ್ಲಿ ಮೂರ್ನಾಲ್ಕು ಮಂದಿ ಇರುವುದು ಸಹಜ. ಹೀಗಿರುವಾಗ ಸರ್ಕಾರ ಈಗಾಗಲೇ ನೋಟಿಸ್ ನೀಡಿರುವ 12,548 ಕುಟುಂಬಗಳಲ್ಲಿ 50 ಸಾವಿರಕ್ಕೂ ಹೆಚ್ಚು ಮಂದಿ ಕಡುಬಡವರೇ ಆಗಿದ್ದು, ಇವರೆಲ್ಲರ ಮೇಲೂ ಕ್ರಮಿನಲ್ ಕೇಸ್ ಹಾಕಬೇಕಾಗುತ್ತದೆ, ಈ ಕೇಸ್ ಹಾಕುವ ಪ್ರಕ್ರಿಯೆ ಆರಂಭವಾಗಿದೆ ಎನ್ನಲಾಗಿದ್ದು, ಇಷ್ಟೊಂದು ಪ್ರಮಾಣದಲ್ಲಿ ಕೇಸ್ ಹಾಕುತ್ತಿರುವುದು ದೇಶದಲ್ಲೇ ಇದೇ ಮೊದಲು.

ತುತ್ತು ಅನ್ನಕ್ಕಾಗಿ ಈ ಬಡಪಾಯಿಗಳು ಬಿಪಿಎಲ್ ಕಾರ್ಡ್‌ಗಳನ್ನು ಹೊಂದಿದ್ದಾರೆ. ಇಂಥವರ ಮೇಲೆ ಚುನಾವಣಾ ಪರ್ವಕಾಲದಲ್ಲಿ ಈ ರೀತಿ ಕೇಸ್ ಹಾಕುವ ಪ್ರಕ್ರಿಯೆ ಆರಂಭಿಸಿರುವ ಬೊಮ್ಮಾಯಿ ಸರ್ಕಾರದ ಕ್ರಮವು ಬಿಜೆಪಿ ಪಕ್ಷಕ್ಕೆ ಉರುಳಾಗುತ್ತಾ ಎಂಬ ಆತಂಕ ಬಿಜೆಪಿ ನಾಯಕರನ್ನು ಕಾಡಿದೆ.‌

ಬಸವರಾಜ್ ಬೊಮ್ಮಾಯಿ ಸರ್ಕಾರದ ಕ್ರಮವನ್ನು ಆಕ್ಷೇಪಿಸಿ ‘ಸಿಟಿಜನ್ ರೈಟ್ಸ್ ಫೌಂಡೇಷನ್’ ಅಧ್ಯಕ್ಷ ಕೆ‌.ಎ.ಪಾಲ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದು, ಬಿಪಿಎಲ್ ಕಾರ್ಡ್‌ಗಳು ಅಕ್ರಮವೆಂದು ದೃಢಪಟ್ಟರೆ ಅವುಗಳನ್ನು ರದ್ದುಪಡಿಸಲಿ ಅದನ್ನು ಬಿಟ್ಟು ಕ್ರಮಿನಲ್ ಧಾವೆಯ ಪ್ರಕ್ರಿಯೆ ಬೇಡ ಎಂದು ಮನವಿ ಮಾಡಿದ್ದಾರೆ.

40% ಕಮೀಷನ್ ಆರೋಪ, ಬಿಟ್ ಕಾಯಿನ್ ಅಕ್ರಮ, ನೇಮಕಾತಿ ಕರ್ಮಕಾಂಡಗಳ ಸಹಿತ ಹಲವಾರು ಭ್ರಷ್ಟಾಚಾರ ಪ್ರಕರಣಗಳಲ್ಲಿ ಬೊಮ್ಮಾಯಿ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಭ್ರಷ್ಟರು ರಕ್ಷಣೆ ಪಡೆಯುತ್ತಿದ್ದು ಈ ಸರ್ಕಾರವು ಶ್ರೀಮಂತರ ಪರವಾಗಿದೆ ಎಂಬಂತಿದೆ. ಹೀಗಿರುವಾಗ ತುತ್ತು ಅನ್ನ ಪಡೆಯಲು ಕಾರ್ಡ್ ಹೊಂದಿದವರ ಮೇಲೆ ಕ್ರಿಮಿನಲ್ ಕೇಸ್ ಹಾಕುವ ಪ್ರಕ್ರಿಯೆ ಸರಿಯಲ್ಲ ಎಂದು ಕೆ.ಎ.ಪಾಲ್ ಅವರು ಮೋದಿಯವರಿಗೆ ಈ ಪತ್ರ ಮೂಲಕ ಮನವರಿಕೆ ಮಾಡಿದ್ದಾರೆ.

ಈ ಹಿಂದೆ ಜಿಂದಾಲ್ ಹಗರಣ, ಬಿಟ್ ಕಾಯಿನ್ ಅಕ್ರಮ, ಬಿಬಿಎಂಪಿಯಲ್ಲಿನ ಕರ್ಮಕಾಂಡಗಳ ವಿರುದ್ದ ಸಾರ್ವಜನಿಕ ಹಿತಾಸಕ್ತಿ ಧಾವೆ ಹೂಡಿ ಬಿಎಸ್‌ವೈ ಸಹಿತ ಹಲವರ ರಾಜೀನಾಮೆಗೆ ಕಾರಣವಾಗಿರುವ ಸಾಮಾಜಿಕ ಹೋರಾಟಗಾರ ಕೆ.ಎ.ಪಾಲ್ ಅವರು ಇದೀಗ BPL ಕಾರ್ಡ್ ವಿಚಾರದಲ್ಲಿ ಕಡುಬಡವರ ಪರವಾಗಿ ಹೋರಾಟಕ್ಕಿಳಿದಿರುವುದು ಬಿಜೆಪಿ ಸರ್ಕಾರಕ್ಕೆ ಮತ್ತೊಂದು ಸವಾಲಾಗಿದೆ.

Leave a Reply

Your email address will not be published. Required fields are marked *

error: Content is protected !!