ಎಲೆಕ್ಷನ್ ನಿಲ್ಲಬೇಕು ಅಂತಿದ್ದಿರಾ.? ಪಾಪುಲರ್ ಆಗೋದು ಬೇಡ್ವಾ.? ಆಹಾರ ಇಲಾಖೆ ಡಿಡಿ ನಜ್ಮಾರಿಗೆ ಐಎಎಸ್ ಅಧಿಕಾರಿ ಉಮಾಶಂಕರ್ ತಮಾಷೆಯ ಪ್ರಶ್ನೆ.!

ದಾವಣಗೆರೆ: ದಾವಣಗೆರೆ ಜಿಲ್ಲಾ ಪಂಚಾಯತ್ ವತಿಯಿಂದ ಸಾಮಾನ್ಯ ಸಭೆ ಅಯೋಜಿಸಲಾಗಿತ್ತು. ಸಹಕಾರ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ದಾವಣಗೆರೆ ಜಿಲ್ಲಾ ಪಂಚಾಯತ್ ಆಡಳಿತಾಧಿಕಾರಿ ಎಸ್ ಆರ್ ಉಮಾಶಂಕರ್ ಅಧ್ಯಕ್ಷತೆಯಲ್ಲಿ ಆಯೋಜನೆ ಮಾಡಲಾಗಿತ್ತು.
ದಿನಾಂಕ 14.12.2022 ರಂದು ಮೊದಲಿಗೆ ಹಿಂದಿನ ಸಭಾ ನಡವಳಿ ದೃಢೀಕರಿಸಿದ ನಂತರ ದಾವಣಗೆರೆ ಜಿಲ್ಲಾ ಪಂಚಯತ್ ಸಭಾಂಗಣದಲ್ಲಿ ಸಾಮಾನ್ಯ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಕೈಗೊಳ್ಳಲಾಯಿತು.ಈ ವೇಳೆ ರಜ್ಯಾದ್ಯಂತ ‘ಡಿಲೀಟ್’ ಪದ ಪ್ರತಿಧ್ವನಿಸುತ್ತಿರುವ ಸಂದರ್ಭದಲ್ಲಿ ದಾವಣಗೆರೆಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲೂ ಕೂಡ ‘ಡಿಲೀಟ್’ ಪದ ಪ್ರತಿಧ್ವನಿಸಿತು.!
ಈ ವೇಳೆ ಆಹಾರ ಇಲಾಖೆಯ ಉಪ ನಿರ್ದೇಶಕರಾದ ನಜ್ಮಾ ಅವರು ತಮ್ಮ ಇಲಾಖೆಯ ಪ್ರಗತಿ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ದಾವಣಗೆರೆ ಜಿಲ್ಲೆಯಿಂದ ಒಟ್ಟು 4027 ನೂತನವಾಗಿ ಬಿಪಿಎಲ್ ಚೀಟಿಗಾಗಿ ಅರ್ಜಿಗಳು ಬಂದಿವೆ ಅದರಲ್ಲಿ ಸರ್ಕಾರದಿಂದ 1257 ಕಾರ್ಡಗಳನ್ನು ನೀಡುವಂತೆ ತಿಳಿಸಲಾಗಿದೆ ಎಂದು ಮಾಹಿತಿ ನೀಡಿದರು. ಇದಾದ ನಂತರ ಅಂದಾಜು 3000 ಅನರ್ಹ ಪಡಿತರ ಕಾರ್ಡಗಳನ್ನು ಪತ್ತೆ ಹಚ್ಚಿ ಡಿಲೀಟ್ ಮಾಡಿ ಒಟ್ಟು ಅಂದಾಜು 63 ಲಕ್ಷ ದಂಡ ವಸೂಲಿ ಮಾಡಲಾಗಿದೆ ಎಂದರು.
ಈ ವೇಳೆ ನಜ್ಮಾ ಮೇಡಮ್ ವರದಿ ನೀಡುತ್ತಿರುವಾಗ ಮಧ್ಯೆ ಪ್ರವೇಶಿಸಿದ ಉಸ್ತುವಾರಿ ಕಾರ್ಯದರ್ಶಿಗಳು ನೀವು ಬಂದಾಗಿನಿ0ದ ಎಷ್ಟು ಕಾರ್ಡಗಳನ್ನು ಡಿಲೀಟ್ ಮಾಡಿದ್ದಿರಿ ಎಂದು ಕೇಳಿದಾಗ, ಎಷ್ಟು ಇಲ್ಲ ಸರ್ ಎಂದರು. ಅದಕ್ಕೆ “ಎನ್ರೀ ಎಲೆಕ್ಷನ್‌ಗೆ ನಿಲ್ಲಬೇಕು ಅಂದುಕೊಡಿ0ದ್ದೀರಾ” ನೀವು ಪಾಪುಲರ್ ಆಗೋದು ಬೇಡವಾ..? ಎಂದು ಪ್ರಶ್ನೆ ಮಾಡಿದ್ರು, ಇದಕ್ಕೆ ಸಭೆಯಲ್ಲಿದ್ದ ಎಲ್ಲಾ ಅಧಿಕಾರಿಗಳು ನಕ್ಕ ಪ್ರಸಂಗ ನಡೆಯಿತು. ನೀವು ಆಹಾರ ಇಲಾಖೆಗೆ ಯಾವಾಗ ಬಂದಿದ್ದು ಎಂದಿದಕ್ಕೆ ಜೂನ್ 2022 ಕ್ಕೆ ಅಂದ ನಜ್ಮಾ ಮೇಡಮ್ ನಂತರ ತಮ್ಮ ಇಲಾಖೆಯ ಪ್ರಗತಿ ಬಗ್ಗೆ ಸಭೆಗೆ ವಿವರಿಸತೊಡಗಿದರು.