ಅನ್ನ ನೀಡಿದಂತಹ, ನನ್ನ ಕುಟುಂಬ ಮತ್ತು ಮಕ್ಕಳ, ವಿದ್ಯಾಭ್ಯಾಸಕ್ಕೆ ನೆರವಾದ ಪೋಲೀಸ್ ಇಲಾಖೆಗೆ ಕೋಟಿ ನಮನ – ಕೃಷ್ಣಪ್ಪ ಟಿ.ಆರ್. ನಿವೃತ್ತ PSI

ದಾವಣಗೆರೆ: ದಾವಣಗೆರೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ಮಾ 2 March 2 ರಂದು ಪೊಲೀಸ್ ಧ್ವಜ ದಿನಾಚರಣೆ Police Flag Day ಕಾರ್ಯಕ್ರಮವನ್ನ ನಗರದ ಡಿಎಆರ್ DAR Ground ಕವಾಯತು ಮೈದಾನದಲ್ಲಿ ಆಯೋಜಿಸಲಾಗಿತ್ತು. ಡಾ|| ಕೆ. ತ್ಯಾಗರಾಜನ್, ಐ.ಪಿ.ಎಸ್., Dr, K.Thyagarajan, IGP Eastern Range, ಪ್ರಭಾರ ಪೋಲೀಸ್ ಮಹಾ ನಿರೀಕ್ಷಕರು, ಪೂರ್ವವಲಯ, ದಾವಣಗೆರೆ ಇವರಿಂದ ಪೋಲೀಸ್ ಧ್ವಜ ಬಿಡುಗಡೆ ಮಾಡಲಾಯಿತು. ಸಿ.ಜಿ.ರಿಷ್ಯಂತ್, ಐಪಿಎಸ್., ಪೊಲೀಸ್ ಅಧೀಕ್ಷಕರು C.G. Ryshyanth IPS SP Davanagere District ದಾವಣಗೆರೆ ಜಿಲ್ಲೆ ಇವರು ಕಾರ್ಯಕ್ರಮಕ್ಕೆ ಆಗಮಿಸಿದವರನ್ನ ಸ್ವಾಗತಿಸಿದರು. ಎಲ್ಲರನ್ನ ಸ್ವಾಗತಿಸಿ ನೇರೆದಿದ್ದವರಿಗೆ ಯುಗಾದಿ Yugadi Wishes ಶುಭಾಶಯವನ್ನ  ಎಸ್ ಪಿ ತಿಳಿಸಿದರು.

     ಡಾ|| ಕೆ. ತ್ಯಾಗರಾಜನ್, ಐ.ಪಿ.ಎಸ್. ಪ್ರಭಾರ ಪೋಲೀಸ್ ಮಹಾ ನಿರೀಕ್ಷಕರು, ಪೂರ್ವವಲಯ, ದಾವಣಗೆರೆ ಇವರಿಂದ ಪೋಲೀಸ್ ಧ್ವಜ ಬಿಡುಗಡೆ

ಪ್ರಜಾಪ್ರಭುತ್ವದ ಈಗಿನ ಪರಿಸ್ಥಿತಿಯಲ್ಲಿ ಪೋಲೀಸ್ ಇಲಾಖೆಯು ತನ್ನ ಕರ್ತವ್ಯವನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಸಾರ್ವಜನಿಕರು ಸಹಾಯ ಮತ್ತು ಸಹಕಾರಗಳಿಂದ ಪೋಲೀಸರು ತಮ್ಮ ಜವಾಬ್ಧಾರಿಯನ್ನ ನಿಭಾಯಿಸಬಹುದಾಗಿದೆ. ಇದೇ ಸಂದರ್ಭದಲ್ಲಿ ಪೋಲೀಸ್ ಧ್ವಜವನ್ನು ಏಕೆ ಅಚರಿಸಲಾಗುತ್ತೆ ಎಂದು ಎಸ್ ಪಿ,  ಸಿ.ಜಿ.ರಿಷ್ಯಂತ್ ತಿಳಿಸಿದರು. ಹಾಗೂ ಸರ್ಕಾರ ದ್ವಜ ದಿನಾಚರಣೆಯನ್ನ ಏಪ್ರಿಲ್ 2 ರಂದು ಆಚರಣೆ ಏಕೆ ಮಾಡಲಾಗುತ್ತದೆ ಎಂದು ತಿಳಿಸಿದರು, ಹಾಗೂ ದ್ವಜ ಮಾರಾಟದಿಂದ ಬಂದ ಹಣವನ್ನ ಯಾರಿಗೆಲ್ಲ ನೀಡಲಾಗುತ್ತೆ ಎಂದು ಸ್ವವಿವರವಾಗಿ ಹೇಳಿದರು.

                                                                   ಪೋಲೀಸ್ ದಿನಾಚರಣೆಯ ಕವಾಯತು ಪಥಸಂಚಲನ ತಂಡಗಳು

ಪೋಲೀಸ್ ಧ್ವಜ ದಿನಾಚರಣೆಯ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ Retired PSI ನಿವೃತ್ತ ಪೋಲೀಸ್ ಉಪ ನಿರೀಕ್ಷಕರಾದ ಕೃಷ್ಣಪ್ಪ ಟಿ.ಆರ್. ಕವಾಯತು ಪರಿವೀಕ್ಷಣೆ ಮಾಡಿ ಸಭಿಕರಿಗೆ ಶುಭಾಶಯ ಕೋರಿ ಮಾತನಾಡಿದ ಅವರು ನಿವೃತ್ತಿ ದಿನದ ನಂತರ ಸಭೆಗೆ ನನಗೆ ಕರೆಯಿಸಿ ಗೌರವ ವಂದನೆ ಸಲ್ಲಿಸಿದ್ದಕ್ಕೆ ವಂದನೆ ಸಲ್ಲಿಸಿದರು. ನನಗೆ ಜನ್ಮ ನೀಡಿದ ತಂದೆ ತಾಯಿಗಳು ಹೇಗೋ ಅನ್ನ ನೀಡಿದಂಥಹ, ನನ್ನ ಕುಟುಂಬದ ನಿರ್ವಹಣೆಗೆ ಮತ್ತು ನನ್ನ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾದಂತಹ ಪೋಲೀಸ್ ಇಲಾಖೆಗೆ ನನ್ನ ಕೋಟಿ ನಮನಗಳು ಎಂದು ಹೇಳುವಾಗ ಗಧ್ಗಧಿತರಾದರು.

ಶಿಸ್ತಿನ ಇಲಾಖೆಗೆ ಸೇರಿದ ನಾವೆಲ್ಲರೂ ಇಲಾಖೆಯ ನಿಯಮಗಳಿಗೆ ಅನುಗುಣವಾಗಿ ಮೇಲಾಧಿಕಾರಿಗಳ ಆದೇಶದಂತೆ ಕರ್ತವ್ಯ ನಿರ್ವಹಿಸಬೇಕು. ನನ್ನ ಸೇವಾ ಅವಧಿಯಲ್ಲಿ ಮೇಲಾಧಿಕಾರಿಗಳ ಆದೇಶದಂತೆ ಕರ್ತವ್ಯ ನಿರ್ವಹಿಸದ್ದಿಕ್ಕೆ ಇಂತಹ ಸಮಾವೇಶದಲ್ಲಿ ಗೌರವ ಸಿಕ್ಕಿದೆ ಅಂದರೆ ಪೋಲೀಸ್ ಇಲಾಖೆಯ ನನ್ನ ಮೇಲಾಧಿಕಾರಿಯ ಮೇಲೆ ನನ್ನ ಅಪೂರ್ವ ಅಪಾರವಾದ ನಂಭಿಕೆಯನ್ನಿಟ್ಟು ಕರ್ತವ್ಯ ನಿರ್ವಹಿಸಿದ್ದಕ್ಕೆ ಈ ಗೌರವ ಸಿಕ್ಕಿದ ಅಂತಾ ನನ್ನ ಭಾವನೆ.
ನಾವು ಹಿಂದಿನ ಕಟ್ಟುಪಾಡುಗಳಿಗೆ ಜೋತು ಬೀಳದೆ, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನಮ್ಮ ಬುದ್ದಿಮತ್ತೆಯಿಂದ ಕರ್ತವ್ಯ ನಿರ್ವಹಿಸಬೇಕು. ಖಾಕಿ ಬಟ್ಟೆ ಧರಿಸಿರುವ ನಾವು ಇಲಾಖೆಗೆ ಪ್ರೀತಿ ತೋರಿಸಬೇಕು, ಹಿರಿಯ ಅಧಿಕಾರಿಗಳ ಜೊತೆ ಕೌಶಲ್ಯತೆ ಬಗ್ಗೆ ತಾಂತ್ರಿಕಥೆ ಬಗ್ಗೆ ಅಧ್ಯಯನ ಮಾಡಿ ಕರ್ತವ್ಯ ನಿರ್ವಹಿಸಬೇಕಾಗಿದೆ. ಪೋಲೀಸ್ ಇಲಾಖೆಯಲ್ಲಿ ಇಂದು ಉನ್ನತ ವಿಧ್ಯಾಭ್ಯಾಸ ಹೊಂದಿದವರು ಇಲಾಖೆಯಲ್ಲಿದ್ದಾರೆ. ಇತ್ತೀಚೆಗೆ ನಮ್ಮ ಪೋಲೀಸ್ ಠಾಣೆಗಳಲ್ಲಿ ಬರಹಗಾರರು ಹಾಗೂ ತನಿಖಾ ಸಹಾಯಕರ ಅವಶ್ಯಕತೆ ತುಂಬಾ ಕೊರತೆ ಇದೆ, ನಮ್ಮ ಸಹೋದರ ಸಹೋದರಿಯರು ಕೌಶ್ಯಲತೆ,ತಾಂತ್ರಿಕತೆಯನ್ನ ಹೆಚ್ಚಿಸಿಕೊಂಡು ಕೆಲಸ ಮಾಡುವಂತೆ ಕರೆ ನೀಡಿದ್ರು. ಇದರ ಬಗ್ಗೆ ತಮ್ಮ ಹಿಂದಿನ ಅನುಭವವನ್ನ ನೆನಪಿಸಿಕೊಂಡರ.

 


ನಿವೃತ್ತ ಪೋಲೀಸ್ ಅಧಿಕಾರಿಗಳ ಆರೋಗ್ಯಕ್ಕಾಗಿ 4-5 ಸಾವಿರ ಹಣವನ್ನ ಕಟ್ಟಿಸಿಕೊಳ್ಳುತ್ತಿದ್ದಾರೆ, ಇದು ನಮಗೆ ಹೊರೆಯಾಗುತ್ತಿದೆ ಸರ್ಕಾರದಿಂದ ಇದಕ್ಕೆ ವಿನಾಯಿತಿ ಕೊಡಿಸಬೇಕು ಎಂದು ಕೃಷ್ಣಪ್ಪನವರು ಮಾನ್ಯ ಐಜಿಪಿ ಹಾಗೂ ಎಸ್ ಪಿ ಬಳಿ ಮನವಿ ಮಾಡಿಕೊಂಡರು. ದಾವಣಗೆರೆ ಜಿಲ್ಲೆಯಲ್ಲಿ ಕೆಲಸ ಮಾಡುವಾಗ ನನಗೆ ನನ್ನ ಇಲಾಖೆಯ ಸಹೊದ್ಯೋಗಿಗಳಿಗೆ ವಂದನಾರ್ಪಣೆ ಸಲ್ಲಿಸಿ ತಾವು ಸಲ್ಲಿಸಿದ ಉಪ ಅಧೀಕ್ಷಕರ ಕಚೇರಿಯನ್ನು ಜೀವನದಲ್ಲಿ ಎಂದೂ ಮರೆಯುವುದಿಲ್ಲ ಜೈ ಪೋಲೀಸ್ ಎಂದು ತಮ್ಮ ಭಾಷಣಕ್ಕೆ ವಿರಾಮವಿಟ್ಟರು.

                                                       ನಿವೃತ್ತಿ ಹೊಂದಿದ ಅಧಿಕಾರಿಗಳಿಗೆ ಅಭಿನಂದನೆ

ಪೋಲೀಸ್ ದಿನಾಚರಣೆಯ ಕವಾಯತು ಪಥಸಂಚಲನ ತಂಡಗಳು:
ಕವಾಯತು ಪ್ರಧಾನ ನಾಯಕರಾಗಿ ಎಸ್.ಎನ್. ಕಿರಣ್‌ಕುಮಾರ್ ಪೊಲೀಸ್ ನಿರೀಕ್ಷಕರು, ಡಿಎಆರ್, ದಾವಣಗೆರೆ ಇವರು ಮುಂದಾಳತ್ವ ವಹಿಸಿಕೊಂಡಿದ್ದರು.
1. ಮೊದಲನೇ ತುಕಡಿ :- ಸಶಸ್ತ್ರ ಪೊಲೀಸ್ ತಂಡ
ತಂಡದ ನಾಯಕ : ಶ್ರೀ ನಾರಾಯಣ ಮದುಗಿರಿ, ಪ್ರೊ.ಪಿಎಸ್‌ಐ, ಬಸವಪಟ್ಟಣ ಠಾಣೆ.
2. ಎರಡನೇ ತುಕಡಿ :- ನಗರ ಉಪ-ವಿಭಾಗದ ತಂಡ
ತಂಡದ ನಾಯಕ :- ಶ್ರೀ ಪ್ರವೀಣ್ ಎಸ್.ಪಿ., ಪ್ರೊ.ಪಿಎಸ್‌ಐ, ಹರಿಹರ ಗ್ರಾ. ಠಾಣೆ.
3. ಮೂರನೇ ತುಕಡಿ :- ಗ್ರಾಮಂತರ ಉಪ-ವಿಭಾಗದ ತಂಡ
ತಂಡದ ನಾಯಕ ಶ್ರೀ ಮಹದೇವ್ ಬತ್ತೆ, ಪ್ರೊ.ಪಿಎಸ್‌ಐ, ನ್ಯಾಮತಿ ಠಾಣೆ
4. ನಾಲ್ಕನೇ ತುಕಡಿ :- ಮಹಿಳಾ ಪೊಲೀಸ್ ತಂಡ
ತಂಡದ ನಾಯಕ :- ಶ್ರೀ ಶಿವನಗೌಡ ಪಾಟೀಲ, ಪ್ರೊ.ಪಿಎಸ್‌ಐ, ಜಗಳೂರು ಠಾಣೆ

5. ನಾಲ್ಕನೇ ತುಕಡಿ ಚನ್ನಗಿರಿ ಉಪ-ವಿಭಾಗದ ತಂಡ
ತಂಡದ ನಾಯಕ :-ಶ್ರೀ ಚಂದ್ರಶೇಖರ್ ನಾಯ್ಕ, ಪ್ರೊ.ಪಿಎಸ್‌ಐ, ಸಂತೇಬೆನೂರು
6. ಪೊಲೀಸ್ ವಾದ್ಯವೃಂದ:
ತಂಡದ ನಾಯಕ:- ಶ್ರೀ ಹೊನ್ನೂರಪ್ಪ, ಎಆರ್‌ಎಸ್‌ಐ, ಬ್ಯಾಂಡ್ ಮಾಸ್ಟರ್, ಡಿ.ಎ.ಆರ್, ದಾವಣಗೆರೆ.

2021 ನೇ ಸಾಲಿನಲ್ಲಿ ಮಾನ್ಯ ರಾಷ್ಟ್ರಪತಿಗಳ ಪದಕ President Medal ಮತ್ತು ಮುಖ್ಯ ಮಂತ್ರಿಗಳ ಪದಕವನ್ನು Cheif Minister Medal ಪಡೆದ ದಾವಣಗೆರೆ ಜಿಲ್ಲೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸನ್ಮಾನಿಸಲಾಯಿತು. ಮಾನ್ಯ ರಾಷ್ಟ್ರಪತಿಗಳ ಪದಕ ಪಡೆದ ಶ್ರೀ ಬಸವರಾಜ್ ಡಿವೈಎಸ್ಪಿ, ಡಿ ಸಿ ಆರ್ ಬಿ ವಿಭಾಗ, ಹಾಗೂ ರಾಮಚಂದ್ರ ಆರ್.ಜಾದವ್ ಕಂಪ್ಯೂಟರ್ ವಿಭಾಗ, ಕೇಂದ್ರ ಗೃಹ ಸಚಿವರ ವಿಶೇಷ ಪದಕ Central Home Minister Medal ಪಡೆದ ದೇವರಾಜ್ ಟಿ ವಿ ಪೋಲೀಶ್ ಇನ್ಸ್ಪೆಕ್ಟರ್ ಹೊನ್ನಾಳಿ ವೃತ್ತ ಹಾಗೂ ಮುಖ್ಯಮಂತ್ರಿಗಳ ಪದಕ ಪಡೆದ ಬಿ ಕೆ ಅಜ್ಜಯ್ಯ ಜಿಲ್ಲಾ ವಿಶೇಷ ಘಟಕ, ಇವರುಗಳಿಗೆ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದ ಸಿಬ್ಬಂದಿಯವರಿಗೂ ಕೂಡ ಅಭಿನಂದಿಸಿ ಸನ್ಮಾನಿಸಲಾಯಿತು,

ಕಾರ್ಯಕ್ರಮದ ಕೊನೆಯಲ್ಲಿ ರಾಮಗೊಂಡ ಆರ್ ಬಸರಗಿ ಕೆ.ಎಸ್.ಪಿ.ಎಸ್., ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ASP ದಾವಣಗೆರೆ ಜಿಲ್ಲೆ ಇವರು ವಂದಿಸಿದರು.

Leave a Reply

Your email address will not be published. Required fields are marked *

error: Content is protected !!