ಗಾಂಜಾ ಮತ್ತಲ್ಲಿ ಆರ್ಮಿ ಆಫೀಸರ್‌ ಮಗನನ್ನೇ ಕಿಡ್ನಾಪ್ ಮಾಡಿದ ಗೆಳೆಯರು

arrest

ಹಣಕ್ಕಾಗಿ ಗಾಂಜಾ ಮತ್ತಲ್ಲಿ ಸ್ನೇಹಿತನನ್ನೇ ಕಿಡ್ನಾಪ್​ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಯುವಕನೊಬ್ಬ ತನ್ನ ಸಹಚರರೊಂದಿಗೆ ಸೇರಿ ಹಣಕ್ಕಾಗಿ ಗೆಳೆಯನನ್ನೇ ಕಿಡ್ನ್ಯಾಪ್‌ ಮಾಡಿ ಜೈಲುಪಾಲಾಗಿದ್ದಾನೆ. ಕೇರಳ ಮೂಲದ ಸಾಹೀಲ್ ಸಲೀಂ ಎಂಬಾತನನ್ನು ಪ್ರಮುಖ ಆರೋಪಿ ಮುಬಾರಕ್‌ ಎಂಬಾತ ತನ್ನ ಸ್ನೇಹಿತ ರೊಂದಿಗೆ ಪ್ಲ್ಯಾನ್‌ ಮಾಡಿ ಸಾಹೀಲ್‌ನನ್ನು ಕಿಡ್ನ್ಯಾಪ್‌ ಮಾಡಿದ್ದರು. ಪದವಿ ವ್ಯಾಸಂಗ ಮಾಡುತ್ತಿದ್ದ ಸಾಹೀಲ್‌ ಬೆಂಗಳೂರಿನ ಸಂಪಿಗೆಹಳ್ಳಿಯ ಪಿಜಿವೊಂದರಲ್ಲಿ ವಾಸವಿದ್ದ. ಮುಬಾರಕ್ ಹಾಗೂ ಸಾಹೀಲ್ ಇಬ್ಬರು ಪಿಯುಸಿಯಲ್ಲಿ ಕ್ಲಾಸ್ ಮೇಟ್ಸ್ ಆಗಿದ್ದರು.

ಸಾಹೀಲ್ ಆರ್ಮಿ ಆಫೀಸರ್‌ ಮಗ. ಆತನ ಬಳಿ ಸಿಕ್ಕಾಪಟ್ಟೆ ಹಣ ಇರುತ್ತೆ ಎಂದು ಕಿಡ್ನ್ಯಾಪ್‌ ಪ್ಲಾನ್ ಮಾಡಿದ್ದ. ಪಿಜಿಯಲ್ಲಿದ್ದ ಸಾಹೀಲ್‌ನನ್ನು ಕರೆಸಿ ಶೆಡ್‌ವೊಂದರಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದ್ದರು. ಈ ವೇಳೆ ಸಾಹೀಲ್‌ನಿಂದ 25 ಸಾವಿರ ರೂ. ಹಣ ಪಡೆದು ಬಿಟ್ಟು ಕಳಿಸಿದ್ದರು. ಇದರಿಂದ ಹೆದರಿದ ಸಾಹೀಲ್‌ ಕೇರಳ ಸೇರಿದ್ದ.

ಮಗ ಪಿಜಿ ತೊರೆದು ಮನೆ ಸೇರಿದ್ದು ಪೋಷಕರಿಗೆ ಅನುಮಾನ ಮೂಡಿಸಿತ್ತು. ಹೀಗಾಗಿ ವಿಚಾರಿಸಿದಾಗ ಸಾಹಿಲ್‌ ತನ್ನ ತಂದೆ ಬಳಿ ನಡೆದಿದ್ದನ್ನು ತಿಳಿಸಿದ್ದ. ಸದ್ಯ ಸಾಹೀಲ್ ತಂದೆ ನೀಡಿದ ದೂರಿನನ್ವಯ ಸಂಪಿಗೆಹಳ್ಳಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಉಳಿದ ಮೂವರು ಆರೋಪಿಗಳಿಗಾಗಿ ಬಲೆಬೀಸಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!