ತಾಯಿಯನ್ನು ಪದಗಳಲ್ಲಿ ವರ್ಣಿಸಿದ ಪ್ರೀತಿ ಟಿ ಎಸ್

IMG-20220211-WA0060

ದಾವಣಗೆರೆ: (ಕವನ – ಕಾಲಂ)

ಅವ್ವ…!

ಅವ್ವ ಮಲಗಿದ್ದಳು

ಕುಡಿ ದೀಪದೆದುರು

ಬದುಕ ಬೆಳಕಾಗಿ ಸೂಸಿ

ಉರಿಉಂಡು ನೊಂದು ||1||

 

ನೀರವ ಮೌನವ

ನಡುವೆ ಬೆಚ್ಚಿಸಿದ

ಮಿಂಚು ಗುಡುಗು

ಅವ್ವನ ಎಬ್ಬಿಸದಾದವು ||2||

 

ಕುಯ್ಗುಡ್ಲು ಹಿಡಿದು

ಹೊಲದಲ್ಲಿ ಕಳೆಕಿತ್ತು

ನೆತ್ತಿ ಸುಡುವ ಬಿಸಿಲಲ್ಲಿ

ಹಣೆ ತುಂಬ

ಹನಿಮುತ್ತ ಹೊತ್ತು

ಅವ್ವ ದಣಿದಿದ್ದಳು ||3||

 

ಹನಿಮುತ್ತ ಚೆಲ್ಲಿ

ಹೊಲವೆಲ್ಲಾ ರಾಶಿರಾಶಿ

ತೆನೆಹೊತ್ತು ನಿಂತೈತೆ

ತಲೆಬಾಗಿ

ಅವ್ವ ಮಲಗಿದ್ದಾಳೆ

ಅಲ್ಲೀಗ ||4||

 

ಹೊಲ ಕುಯ್ದು

ಹೊಲ ಕಟ್ಟಿ

ಉಸಿರ ಬಿಗಿಹಿಡಿದು

ಹೊರೆ ಹೊತ್ತಿದ್ದಳು

ಅವ್ವ ಪ್ರತಿಸಾರಿ ||5||

 

ಈಗ ಹೀಗಿಲ್ಲ

ಈಗಷ್ಟೇ ಮಲಗವಳೇ

ಹೊತ್ತು ಮುಳುಗುವ ಮುನ್ನ

ಬೆಚ್ಚಗೆ ಈ ಮಣ್ಣಿನ ಒಡಲಲ್ಲಿ ||6||

– ಪ್ರೀತಿ.ಟಿ.ಎಸ್, ಬರಹಗಾರ್ತಿ

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!