ಗಡಿಯಾರ ಕಂಬದ ಬಳಿಯ ಫುಟ್ ಪಾತ್ ಕಾಮಗಾರಿ ವೀಕ್ಷಣೆ ಮಾಡಿದ ಮೇಯರ್

ದಾವಣಗೆರೆ: ಮಹಾನಗರ ಪಾಲಿಕೆ ಮಹಾಪೌರರಾದ ಜಯಮ್ಮ ಗೋಪಿನಾಯ್ಕ ಅವರ ನಗರದ ಗಡಿಯಾರ ಕಂಬದ ವಿಜಯ ಲಕ್ಷ್ಮೀ ರಸ್ತೆಯಲ್ಲಿ ನಡೆಯುತ್ತಿರುವ ಫುಟ್ ಫಾತ್ ಕಾಮಗಾರಿಯನ್ನು ವೀಕ್ಷಿಸಿ, ಅಲ್ಲಿಯ ಕೆಲಸಗಾರರು ಕಡಿಮೆ ಸಿಮೆಂಟ್ ಬಳಸಿ ಕಾಮಗಾರಿಯನ್ನು ಮಾಡುವುದನ್ನು ಗಮನಿಸಿ ಗುಣಮಟ್ಟದ ಕಾಮಗಾರಿಯನ್ನು ಮಾಡುವಂತೆ ಗುತ್ತಿಗೆದಾರರಿಗೆ ಕರೆ ಮಾಡಿ ತಾಕಿತ್ತು ಮಾಡಿದರು. ಮಾರ್ಕೆಟ್ ಏರಿಯಾ ಇರುವುದರಿಂದ ತ್ವರಿತವಾಗಿ ಕಾಮಗಾರಿ ಮುಗಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಟಿ.ಪಾಟೀಲ, ನಿರಂಜನ ಉಪಸ್ಥಿತರಿದ್ದರು.

 
                         
                       
                       
                       
                       
                       
                       
                      