ಮನೆ ಕಟ್ಟಿಸಲು ಸ್ನೇಹಿತರೊಬ್ಬರಿಂದ ಸಾಲ ಮಾಡಿ ತೆಗೆದುಕೊಂಡು ಬಂದ ಹಣ ರೈಲಿನಲ್ಲಿ.! ಮುಂದೇನಾಯ್ತು.?

ರೈಲಿನಲ್ಲಿ, ಸಿಕ್ಕ 2.70 ಲಕ್ಷದ ಬ್ಯಾಗ್ ಮರಳಿಸಿ, ಪ್ರಾಮಾಣಿಕತೆ, ಮೆರೆದ, ಲೆಕ್ಕಪರೀಕ್ಷಕ,

ದಾವಣಗೆರೆ: ರೈಲಿನಲ್ಲಿ ಹಣವಿದ್ದ ಬ್ಯಾಗ್ ಅನ್ನು ಬಿಟ್ಟು ಹೋಗಿದ್ದ ಪ್ರಯಾಣಿಕರೊಬ್ಬರಿಗೆ ಲೆಕ್ಕ ಪರೀಕ್ಷಕರೊಬ್ಬರು ಹಿಂತಿರುಗಿಸಿ ಪ್ರಾಮಾಣಿಕತೆ ಮೆರದಿದ್ದಾರೆ.
ಮನೆ ಕಟ್ಟಿಸಲು ಸ್ನೇಹಿತರೊಬ್ಬರಿಂದ ಸಾಲ ಮಾಡಿ ತೆಗೆದುಕೊಂಡು ಬಂದ ಹಣ ಇದಾಗಿತ್ತು  ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರಿನ ಟಿ. ದಾಸರಹಳ್ಳಿಯ ನಿವಾಸಿ ಎಸ್.ಎಸ್. ಸುಧಾಕರ್  ರಾಮೇಶ್ವರ -ಹುಬ್ಬಳ್ಳಿ ಎಕ್ಸ್ ಪ್ರೆಸ್ ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದಾಗ  2.80 ಲಕ್ಷ ಹಾಗೂ ಬಟ್ಟೆಗಳು ಇರುವ ಬ್ಯಾಗ್ ಅನ್ನು ಬಿಟ್ಟು ಬದಲಿಗೆ ಮತ್ತೊಂದು ಬ್ಯಾಗನ್ನು ತೆಗೆದುಕೊಂಡು ಬೀರೂರು ರೈಲು ನಿಲ್ದಾಣದಲ್ಲಿ ಇಳಿದುಹೋದರು.
ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಧರ್ಮಸ್ಥಳ ಸಂಘದ ದಾವಣಗೆರೆ ಗ್ರಾಮಾಂತರ ವಿಭಾಗದ ಲೆಕ್ಕ ಪರೀಕ್ಷಕ ಜಗದೀಶ್ ಅವರ ಕೈಗೆ ಸಿಕ್ಕಿದೆ. ಅವರು ಬ್ಯಾಗ್ ಅನ್ನು ತೆರೆಯದೇ ದಾವಣಗೆರೆ ರೈಲ್ವೆ ಪೊಲೀಸ್ ಠಾಣೆಗೆ ತಂದು ಒಪ್ಪಿಸಿದರು.

https://garudavoice.com/2023/06/vehicle-safety-registration-plate-500/

ರೈಲ್ವೆ ಪೊಲೀಸ್ ಠಾಣೆಯ ಎಸ್ಐ ಕೆ.ಟಿ. ಅಣ್ಣಯ್ಯ ಮಾರ್ಗದರ್ಶನದಲ್ಲಿ ಎಎಸ್‌ಐ ಜಿ. ನಾಗರಾಜ್, ಹೆಡ್ ಕಾನ್‌ಸ್ಟೆಬಲ್‌ಗಳಾದ ಮಂಜುನಾಥ ವಿ, ಆನಂದಪ್ಪ ಕೆ., ಅರುಣ್ ಕುಮಾರ್ ಹಾಗೂ ಪೊಲೀಸ್ ಕಾನ್‌ಸ್ಟೆಬಲ್ ವಿನೋದ್ ಕುಮಾರ್ ಅವರು ಬ್ಯಾಗ್‌ ಅನ್ನು ತೆರೆದು ನೋಡಿದಾಗ ಹಣವಿರುವುದು ಗೊತ್ತಾಯಿತು.
ಬ್ಯಾಗ್‌ನಲ್ಲಿ ನಕಾಶೆಯೊಂದು ಇದ್ದು, ಅವರಲ್ಲಿ ಎಂಜಿನಿಯರ್ ವಿಳಾಸವನ್ನು ಗೂಗಲ್ ಸರ್ಚ್ ಮಾಡಿ ನಕಾಶೆ ಬರೆಸಿಕೊಂಡವರ ವಿಳಾಸ ಪತ್ತೆ ಹಚ್ಚಿ, ಮೊಬೈಲ್ ಸಂಖ್ಯೆಗೆ ಕರೆ ಮಾಡಿದ ಪೊಲೀಸರು ಸುಧಾಕರ್ ಅವರನ್ನು ಠಾಣೆಗೆ ಕರೆಸಿಕೊಂಡು ಬ್ಯಾಗ್‌ ಅನ್ನು ಖಚಿತಪಡಿಸಿಕೊಂಡು ಹಿಂತಿರುಗಿಸಿದರು

 

Leave a Reply

Your email address will not be published. Required fields are marked *

error: Content is protected !!