ಮೆಟ್ರೋ ರೈಲಿನಲ್ಲೇ ಹಸ್ತ ಮೈಥುನ-ಫೋಟೋ ಬಿಡುಗಡೆ ಮಾಡಿ ಪತ್ತೆಗೆ ಮನವಿ ಮಾಡಿದ ಪೊಲೀಸರು

ಮೆಟ್ರೋ ರೈಲಿನಲ್ಲೇ ಹಸ್ತುಮೈಥುನ-ಫೋಟೋ ಬಿಡುಗಡೆ ಮಾಡಿ ಪತ್ತೆಗೆ ಮನವಿ ಮಾಡಿದ ಪೊಲೀಸರು

ನವದೆಹಲಿ: ದೆಹಲಿ ಮೆಟ್ರೊದಲ್ಲಿ ವ್ಯಕ್ತಿಯೊಬ್ಬ ಅಶ್ಲೀಲ ಕೃತ್ಯ ವೆಸಗಿದ್ದಾನೆ. ಆತ ಈಗ FIR ನಂ.02/23 PS IGIA ಅಡಿಯಡಿ ಬೇಕಾಗಿದ್ದು, ದಯವಿಟ್ಟು ಮೆಟ್ರೊದ 8750871326 ಅಥವಾ 1511 (ನಿಯಂತ್ರಣ ಕೊಠಡಿ), 112 ಪೊಲೀಸ್ ಸಹಾಯವಾಣಿಗೆ ತಿಳಿಸಿ. ಆರೋಪಿ ಬಗ್ಗೆ ಮಾಹಿತಿ ನೀಡುವವರ ಬಗ್ಗೆ ಗೌಪ್ಯತೆ ಕಾಪಾಡಿಕೊಳ್ಳಲಾಗುವುದು ಎಂದು ದೆಹಲಿ ಮೆಟ್ರೊ ರೈಲು ನಿಗಮ (ಡಿಎಂಆರ್‌ಸಿ) ಟ್ವೀಟ್ ಮಾಡಿದೆ.

ಹೌದು, ಮೆಟ್ರೊ ರೈಲಿನಲ್ಲಿ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ ವ್ಯಕ್ತಿಯ ಫೋಟೊವನ್ನು ದೆಹಲಿ ಪೊಲೀಸರು ಬಿಡುಗಡೆ ಮಾಡಿದ್ದು, ವ್ಯಕ್ತಿಯ ಗುರುತು ಪತ್ತೆಗೆ ಸಹಾಯ ಮಾಡುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯು) ಮುಖ್ಯಸ್ಥೆ ಸ್ವಾತಿ ಮಾಲೀವಾಲ್ ಅವರು ದೆಹಲಿ ಪೊಲೀಸರಿಗೆ ನೋಟಿಸ್ ನೀಡಿದ ನಂತರ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಪ್ರಯಾಣಿಕರೊಬ್ಬರು ರೆಕಾರ್ಡ್ ಮಾಡಲಾದ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ವ್ಯಕ್ತಿಯೊಬ್ಬ ಮೊಬೈಲ್‌ನಲ್ಲಿ ಏನೋ ನೋಡುತ್ತ ಹಸ್ತಮೈಥುನ ಮಾಡಿಕೊಳ್ಳುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ. ಘಟನೆ ಬೆನ್ನಲ್ಲೇ ಆರೋಪಿ ಪಕ್ಕದಲ್ಲಿದ್ದ ಇತರೆ ಪ್ರಯಾಣಿಕರು ದೂರ ಹೋಗಿದ್ದಾರೆ.

ಘಟನೆಯ ಬೆನ್ನಲ್ಲೇ ದೆಹಲಿ ಮೆಟ್ರೊ ರೈಲು ನಿಗಮ ಮೆಟ್ರೊದಲ್ಲಿ ಫ್ಲೈಯಿಂಗ್ ಸ್ಕ್ವಾಡ್‌ಗಳ ನಿಯೋಜನೆಯನ್ನು ತೀವ್ರಗೊಳಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Leave a Reply

Your email address will not be published. Required fields are marked *

error: Content is protected !!