ಕರೆಂಟ್ ಹೋದ್ರೆ ಮೊಬೈಲ್ ಟಾರ್ಚ್ ನಲ್ಲಿ ಕೆಲಸ ಮಾಡಬೇಕು ಈ ಠಾಣೆಯ ಪೊಲೀಸರು.

ದಾವಣಗೆರೆ: ದಾವಣಗೆರೆ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ups ಇಲ್ಲದೇ ಕಳೆದ 8 ತಿಂಗಳಿಂದ ಪೊಲೀಸ್ ಸಿಬ್ಬಂದಿ ಕೆಲಸ ಮಾಡಲು ಹರಸಾಹಸ ಪಡುತ್ತಿದ್ದಾರೆ.
ಇಲ್ಲಿ ಕರೆಂಟ್ ಹೋದರೆ ಸಿಬ್ಬಂದಿಗಳು ಠಾಣೆಗೆ ದೂರು ನೀಡಲು ಬರುವ ಅಥವಾ ಇನ್ನಾವುದೇ ಸಮಸ್ಯೆಗಳಿಗೆ ಠಾಣೆಗೆ ಬಂದರೆ ಪೊಲೀಸರು ಒಂದು ಕೈಯಲ್ಲಿ ಮೊಬೈಲ್ ಟಾರ್ಚ್ ಹಿಡಿದುಕೊಂಡು ವಿಸಿಟರ್ ಪುಸ್ತಕದಲ್ಲಿ ಅಥವಾ ಇನ್ನೊಂದು ಪುಸ್ತಕಗಳಲ್ಲಿ ದೂರು ಬರೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ 6 ತಿಂಗಳ ಹಿಂದೆಯೇ UPS ಹಾಕಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿಯನ್ನ ಕೊಟ್ಟಿದ್ದರಂತೆ, ಇತ್ತೀಚೆಗೆ ಖುದ್ದು ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಆಜಾದ್ ನಗರ ಠಾಣೆಗೆ ಭೇಟಿ ನಿಡಿದಾಗ UPS ಹಾಕಿಸುವಂತೆ ಮನವಿ ಮಾಡಿದ್ದರು ಸಹ ಇಲ್ಲಿಯವರೆಗೂ UPS ಭಾಗ್ಯ ಕಂಡಿರುವುದಿಲ್ಲ.
ಆದ್ದರಿಂದ ಮಾನ್ಯ SP ರಿಷ್ಯಂತ್ ಸಾಹೇಬರು ಈ ಕೂಡಲೇ ಆಜಾದ್ ನಗರ ಪೋಲಿಸ್ ಠಾಣೆಗೆ UPS ಭಾಗ್ಯ ದೊರಕಿಸಿ ಠಾಣೆಗೆ ಬರುವ ಪಿರ್ಯಾದಿಗಳ ಹಾಗೂ ಸಿಬ್ಬಂದಿಗಳ ಸಮಯ ವ್ಯರ್ಥವಾಗುವುದನ್ನು ತಪ್ಪಿಸಬೇಕಾಗಿದೆ ಎಂದು ಆಜಾದ್ ನಗರದ ಜನತೆಯ ಕಳಕಳಿಯಾಗಿದೆ.