ನಿಜವಾದ ಉಜ್ಜೈನಿ ಪೀಠ ಮಧ್ಯಪ್ರದೇಶದಲ್ಲಿದೆ – ಕೇದಾರ ಶ್ರೀ

ದಾವಣಗೆರೆ: ನಿಜವಾದ ಉಜ್ಜೈನಿ ಪೀಠ ಮಧ್ಯಪ್ರದೇಶದ ಉಜ್ಜೈನಿಯಲ್ಲಿದೆ ಎಂದು ಹಿಮವತ್ಕೇದಾರ ಜಗದ್ಗುರು ಡಾ. ಭೀಮಾ ಶಂಕರಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದ್ದಾರೆ.
ಉತ್ತರಾಖಂಡದಲ್ಲಿ ಕೇದಾರ ಪೀಠ, ಉತ್ತರ ಪ್ರದೇಶದಲ್ಲಿ ಕಾಶಿ ಪೀಠ, ಆಂಧ್ರಪ್ರದೇಶದಲ್ಲಿ ಶ್ರೀಶೈಲ ಪೀಠ. ಕರ್ನಾಟಕದಲ್ಲಿರೋದು ರಂಭಾಪುರಿ ಪೀಠ ಮಾತ್ರ. ಈ ಪರಂಪರೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ ಎಂದು ಶ್ರೀಗಳು ಹೇಳಿದರು.
ಹರಿಹರ ತಾಲ್ಲೂಕು ಶಿವನಹಳ್ಳಿಯಲ್ಲಿ ಶ್ರೀ ಕೇದಾರ ವೈರಾಗ್ಯ ಧಾಮದಲ್ಲಿ `ಹಿಮಗಿರಿ ಭವನ’ ಭವ್ಯ ಕಟ್ಟಡದ ಉದ್ಘಾಟನೆ, ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಪಂಚಪೀಠಗಳ ಪೈಕಿ ಕರ್ನಾಟಕ ದಲ್ಲಿರೋದು ಒಂದೇ ಪೀಠ, ಅದು ರಂಭಾಪುರಿ ಪೀಠ. ಉತ್ತರದ ತುತ್ತ ತುದಿಯ ಪೀಠ ಅದು ಕೇದಾರ ಪೀಠ. ದಕ್ಷಿಣದಲ್ಲಿರುವುದು ರಂಭಾಪುರಿ ಪೀಠ. ಇವೆರಡಕ್ಕೂ ಅವಿನಾಭಾವ ಸಂಬಂಧವಿದೆ.
ಉಜ್ಜೈನಿ ಮೂಲ ಪೀಠ ಮಧ್ಯಪ್ರದೇಶದ ಉಜೈನಿಯಲ್ಲಿದೆ. ಅದನ್ನು ಅಭಿವೃದ್ಧಿಪಡಿಸಬೇಕು. ಇದು ಓಡಿಬಂದ ಮಹಿಳೆಯಂತೆ ಇದೆ ಎಂಬುದು ಹಿಂದಿನ ಜಗದ್ಗುರು ಶ್ರೀ ಸಿದ್ಧಲಿಂಗೇಶ್ವರ ಶಿವಾಚಾರ್ಯ ಮಾತು. ಈ ಬಗ್ಗೆ ಅವರೇ ಬರೆದ ಕಾಗದ ಪತ್ರಗಳಿವೆ ಎಂದು ಹೇಳಿದರು.