ಜನ ಸಾಮಾನ್ಯರ ಬದುಕು ಬವಣೆ ಅರ್ಥ ಮಾಡಿಕೊಳ್ಳುವಲ್ಲಿ ಸರ್ಕಾರಿ ನೌಕರರ ಪಾತ್ರ ಬಹುಮುಖ್ಯ

ಸರ್ಕಾರಿ ನೌಕರರ ಪಾತ್ರ

ದಾವಣಗೆರೆ: ಜನ ಸಾಮಾನ್ಯರ ಬದುಕು ಬವಣೆ ಅರ್ಥ ಮಾಡಿಕೊಳ್ಳುವಲ್ಲಿ ಸರ್ಕಾರಿ ನೌಕರರ ಪಾತ್ರ ಬಹುಮುಖ್ಯವಾದದ್ದು. ಅಲ್ಲದೇ ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಿಗೆ ಸರ್ಕಾರಿ ಸೌಲಭ್ಯವನ್ನು ತಲುಪಿಸುವಲ್ಲಿ ಸರ್ಕಾರಿ ನೌಕರರ ಪಾತ್ರ ಬಹುಮುಖ್ಯವಾದದ್ದು ಎಂದು ಚಿತ್ರದುರ್ಗ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಎಸ್ ದಿವಾಕರ್ ಅಭಿಪ್ರಾಯ ಪಟ್ಟರು.
ನಗರದ ಸರ್ಕಾರಿ ನೌಕರರ ಸಮುದಾಯ ಭವನದ ಮೇರಿ ದೇವಾಸಿಯ ಸಭಾಂಗಣದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದಿAದ ಆಯೋಜನೆ ಮಾಡಲಾದ ಡಾ.ಎಸ್.ರಂಗನಾಥ್ ಇವರ ಸ್ವಯಂ ನಿವೃತ್ತಿ ಬಿಳ್ಕೋಡುಗೆ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು.
ನೌಕರರು ಸಮಾಜದಲ್ಲಿ ಸರಳ ಜೀವನ ನಡೆಸಿ ಇತರರಿಗೆ ಮಾದರಿಯಾಗಬೇಕು. ಇತ್ತೀಚಿನ ದಿನಗಳಲ್ಲಿ ಮನುಷ್ಯನಿಗೆ ಆಸೆ ಆಕಾಂಕ್ಷೆಗಳ ಪಟ್ಟಿ ಹೆಚ್ಚುತ್ತಿದ್ದು, ಇದಕ್ಕೆ ಕಡಿವಾಣ ಹಾಕದಿದ್ದರೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಕಿವಿ ಮಾತು ಹೇಳಿದರು.
ದೂಡ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಮಾತನಾಡಿ, ನೌಕರರು ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ಸೇವೆ ಸಲ್ಲಿಸುವುದು ಹಾಗೂ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಶ್ರದ್ದೆಯಿಂದ ಕರ್ತವ್ಯ ನಿರ್ವಹಿಸುವಂತೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷರೆ ವಹಿಸಿದ್ದ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಪಾಲಾಕ್ಷಿ ಮಾತನಾಡಿ, ಡಾ.ರಂಗನಾಥ್ ಅವರು ಜಿಲ್ಲಾ ಸಂಘದಲ್ಲಿ ರಾಜ್ಯ ಪರಿಷತ್ ಸದಸ್ಯರಾಗಿ ನಮ್ಮೊಟ್ಟಿಗೆ ಸಂಘಟನೆಯ ಜವಾಬ್ದಾರಿ ಹೊತ್ತು ಅನೇಕ ನೌಕರ ಪರವಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸಿದ್ದು ದಾವಣಗೆರೆ ಜಿಲ್ಲೆಯ ನೌಕರ ಸಂಘದ ವೆಬ್ ಸೈಟ್ ಅನ್ನು ಉಚಿತವಾಗಿ ರಚಿಸುವ ಮೂಲಕ ರಾಜ್ಯದಲ್ಲಿಯೇ ವೆಬ್ ಸೈಟ್ ಹೊಂದಿದ ಪ್ರಥಮ ಜಿಲ್ಲಾ ಸಂಘ ಎಂಬ ಹೆಗ್ಗಳಿಕೆ ನಮ್ಮದು. ರಂಗನಾಥ್ ಅವರು ಯಾವಾಗಲೂ ರಚನಾತ್ಮಕ ಹಾಗೂ ಸಕಾರಾತ್ಮಕ ಯೋಚನೆಗಳ ಮೂಲಕ ಸಂಘದಲ್ಲಿ ಹೆಚ್ಚು ಕ್ರಿಯಾಶೈಲರಾಗಿದ್ದರು ಅವರ ಸ್ವಯಂ ನಿವೃತ್ತಿಯ ನಂತರದ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ರಂಗನಾಥ್, ಕಳೆದ ೨೬ವರ್ಷಗಳ ಸರ್ಕಾರಿ ಸೇವೆಯಲ್ಲಿ ಬಡ ಜನರ ಆಶೋತ್ತರಗಳಿಗೆ ಸ್ಪಂದಿಸಿ ಕರ್ತವ್ಯ ನಿರ್ವಹಿಸಿದ್ದು, ನಿವೃತ್ತಿ ನಂತರ ಸಮಾಜ ಸೇವೆಯಲ್ಲಿ ತೊಡಗುವ ಬಗ್ಗೆ ಆಲೋಚನೆ ಇದೆ ಎಂದರು.
ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯದರ್ಶಿ ಮಲ್ಲಿಕಾರ್ಜುನಯ್ಯ, ಡಾ.ರಂಗನಾಥ್ ಅವರ ಕುರಿತು ಕಿರು ಪರಿಚಯದ ಮಾಹಿತಿ ಒದಗಿಸಿದರು.

Leave a Reply

Your email address will not be published. Required fields are marked *

error: Content is protected !!