ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲಾ ಬೆಳವಣಿಗೆಗಳಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೇ ನೇರ ಹೊಣೆ — ಮೊಹಮ್ಮದ್ ಜಿಕ್ರಿಯಾ
ದಾವಣಗೆರೆ : ಇತ್ತೀಚೆಗೆ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೇ ನೇರ ಹೊಣೆಗಾರರಾಗಿದ್ದಾರೆ. ಅವರ ಮೌನವೇ ಇಂದು ರಾಜ್ಯದಲ್ಲಿ ಇಷ್ಟೆಲ್ಲಾ ಅನಾಹುತಗಳಿಗೆ ಕಾರಣವಾಗುತ್ತಿದೆ ಎಂದು ಕಿಸಾನ್ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಮೊಹಮ್ಮದ್ ಜಿಕ್ರಿಯಾ ಕಿಡಿ ಕಾರಿದ್ದಾರೆ. ರಾಜ್ಯದಲ್ಲಿ ಇತ್ತೀಚೆಗೆ ಕೋಮುಸ್ವಾರಸ್ಯ ಉಂಟುಮಾಡಬೇಕಾದ ಮುಖ್ಯಮಂತ್ರಿಗಳು ಅಧಿಕಾರ ವಹಿಸಿಕೊಂಡಾಗಲೇ ಕ್ರಿಯೆಗೆ ಪ್ರತಿಕ್ರಿಯೆ ನೀಡಲೇ ಬೇಕಾಗುತ್ತದೆ ಎಂಬ ಘೋಷವಾಕ್ಯದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದು ಈಗ ಅದೇ ರೀತಿ ತಮ್ಮ ಮಾತನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು ಇದು ಒಳ್ಳೆಯ ಬೆಳವಣಿಗೆ ಅಲ್ಲ ಇದರಿಂದಾಗಿ ಮುಂದೆ ರಾಜ್ಯದಲ್ಲಿ ಈ ಪರಿಸ್ಥಿತಿ ಯಾವ ಹಂತಕ್ಕೆ ಹೋಗಬಹುದೆಂದು ಆತಂಕ ವ್ಯಕ್ತ ಪಡಿಸಿದ್ದಾರೆ.
ಮೊದಲಿನಿಂದಲೂ ರಾಜ್ಯದಲ್ಲಿ ಕೋಮು ಸೌಹಾರ್ದಿತವಾಗಿ ವ್ಯಾಪಾರ ವ್ಯವಹಾರ ಮಾಡಿಕೊಂಡು ಎಲ್ಲಾ ಧರ್ಮಗಳ ಅನೇಕ ಬಡ ಕುಟುಂಬಗಳು ನೆಮ್ಮದಿಯ ಜೀವನ ನಡೆಸುತ್ತಾ ಬಂದಿದ್ದು ಈಗ್ಗೆ ಕೆಲವು ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಗಳಿಂದ ರಾಜ್ಯದ ಎಲ್ಲಾ ವರ್ಗಗಳ ಜನರು ಆತಂಕಕ್ಕೀಡಾಗಿದ್ದು ಈ ಎಲ್ಲಾ ಘಟನೆಗಳಿಗೆ ಆದಷ್ಟು ಬೇಗ ಅಂತ್ಯವಾಗಲಿ ನೆಮ್ಮದಿಯ ಜೀವನ ಮೊದಲಿನಂತೆ ನಡೆಯುವಂತಾಗಲಿ ಎಂದು ಅಭಿಲಾಷೆ ವ್ಯಕ್ತ ಪಡಿಸಿದ್ದಾರೆ. ಕೆಲವೇ ಕೆಲವು ಸಂಘಟನೆಗಳು ಹಾಗೂ ಅದರ ಮುಖ್ಯಸ್ಥರ ವರ್ತನೆಯಿಂದ ರಾಜ್ಯದಲ್ಲಿ ಅಶಾಂತಿಯುಂಟಾಗುತ್ತಿದ್ದು ಇದೆಲ್ಲಕ್ಕೆ ಕಡಿವಾಣ ಹಾಕಬೇಕಿದ್ದ ಮುಖ್ಯಮಂತ್ರಿಗಳು,ಗೃಹಸಚಿವರು ಮೌನವಹಿಸಿರುವುದನ್ನು ನೋಡಿದರೆ ಇದಕ್ಕೆಲ್ಲ ಈ ಕೋಮುವಾದಿ ಸರ್ಕಾರದ ಕುಮ್ಮಕ್ಕಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣುತ್ತಿದೆ. ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವರೂ ಸಹ ಈ ವಿಷಯವಾಗಿ ಒಂದೂ ಪ್ರತಿಕ್ರಿಯೆ ನೀಡದೆ ಇರುವುದು ಸಹ ಈ ಎಲ್ಲಾ ಘಟನೆಗಳ ಹಿಂದೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕುಮ್ಮಕ್ಕಿರುವುದು ಸ್ಪಷ್ಟವಾಗಿದೆ. ಇದಕ್ಕೆಲ್ಲ ಜನ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.
ಇಂದಿನಿಂದ ಪವಿತ್ರ ರಂಜಾನ್ ಮಾಸ ಪ್ರಾರಂಭವಾಗಲಿದ್ದು ಬಾಂಧವರು ದಯವಿಟ್ಟು ಯಾವುದೇ ಅನ್ಯ ಭಾವನೆಗಳಿಲ್ಲದೆ ಕಿಡಿಗೇಡಿಗಳ ಮಾತಿಗೆ ಮಣೆ ಹಾಕದೇ ಈ ಮೊದಲು ವ್ಯವಹರಿಸುತ್ತಿದ್ದ ರೀತಿಯಲ್ಲೇ ಎಲ್ಲರೊಂದಿಗೆ ವ್ಯವಹಾರ ಮಾಡಿ ಕೋಮು ಸ್ವಾರಸ್ಯ ಕಾಪಾಡಿಕೊಂಡು ಹೋಗಬೇಕು ಎಂದು ಇದೇ ಸಂಧರ್ಭದಲ್ಲಿ ಮನವಿ ಮಾಡಿಕೊಂಡರು.