ರಾಜ್ಯ ಸರ್ಕಾರ ಪೊಲೀಸ್ ಇಲಾಖೆ ಗುಪ್ತವಾರ್ತೆ ಸಂಪೂರ್ಣ ವಿಫಲ

ದಾವಣಗೆರೆ: ರಾಜ್ಯದಲ್ಲಿ ನಡೆಯುತ್ತಿರುವ ಹಿಜಾಬ್ ಹಾಗೂ ಕೇಸರಿ ಶಾಲು ಗಲಭೆಯನ್ನು ಗಮನಿಸಿದರೆ ಇದರಲ್ಲಿ ರಾಜ್ಯ ಸರ್ಕಾರ ಪೊಲೀಸ್ ಇಲಾಖೆ ಗುಪ್ತವಾರ್ತೆ ಗುಪ್ತವಾರ್ತೆ ಸಂಪೂರ್ಣ ವಿಫಲವಾದಂತೆ ಕಾಣುತ್ತಿದೆ ಎಂದು ಎಸ್‍ಡಿಪಿಐ ರಾಜ್ಯ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ತಿಳಿಸಿದರು.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಹಿಜಬ್ ಯಾವತ್ತೂ ನಮಗೆ ಸಮಸ್ಯೆಯಾಗಿರಲಿಲ್ಲ. ಆದರೆ ರಾಜ್ಯದಲ್ಲಿ ಕೇಸರಿ ಶಾಲು ಅಲ್ಲದೇ ರಾಜ್ಯದ ಪ್ರಯೋಜಿತ ಸಂಘಟನೆಯೊಂದು ರಾಜ್ಯಾದ್ಯಂತ ಗಲಭೆ ಸೃಷ್ಟಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿನಾಕಾರಣ ಈ ಸಮಸ್ಯೆಯನ್ನು ಉತ್ತುಂಗಕ್ಕೆ ಕೊಂಡೊಯ್ಯಲಾಗುತ್ತಿದೆ. ಕುವೆಂಪುರವರ ಜನಿಸಿದ ಕರ್ನಾಟಕ ರಾಜ್ಯ ಎಲ್ಲ ಧರ್ಮದವರ ನೆಲೆ ಬೀಡಾಗಿದೆ. ಇಲ್ಲಿ ನಾವೆಲ್ಲರೂ ಶಾಂತಿ ಸೌಹಾರ್ದತೆಯಿಂದ ಬಾಳಬೇಕಾಗಿದೆ. ಆದರೆ ರಾಜ್ಯದ ಪ್ರಾಯೋಜಿತ ಕುತಂತ್ರವೂ ಇಲ್ಲಿ ಕೆಲಸ ಮಾಡುತ್ತಿದೆ. ರಾಜ್ಯದ ವಿದ್ಯಾರ್ಥಿಗಳು ನಾವೆಲ್ಲರೂ ವಿದ್ಯಾರ್ಥಿಗಳು ಸಹೋದರ ಸಹೋದರರಂತೆ ಬಾಳಬೇಕು. ಈ ನಿಟ್ಟಿನಲ್ಲಿ ಎಲ್ಲರೂ ವದಂತಿಗಳಿಗೆ ಕಿವಿಗೊಡದೆ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಮುಂದಾಗಬೇಕಿದೆ ಎಂದು ಕಿವಿಮಾತು ಹೇಳಿದರು.
ಈ ಹಿಂದೆ ನಾವೆಲ್ಲರೂ ಒಂದೇ ಊಟದ ಡಬ್ಬಿಯಲ್ಲಿ ಊಟ ತಿಂದವರು. ಅಲ್ಲದೆ ಸರಸ್ವತಿ ಪೂಜೆಯಲ್ಲಿ ಪಾಲ್ಗೊಂಡು ಆಚರಿಸಿದವರು. ಗಣಪತಿ ಪೂಜೆಯನ್ನು ಮಾಡಿದ್ದೇವೆ. ಆದರೆ ಈಗೀಗ ವಿನಾಕಾರಣ ಸಮಸ್ಯೆಯನ್ನು ಸೃಷ್ಟಿಸಲಾಗುತ್ತಿದೆ. ಆಗ ನಮಗ್ಯಾರಿಗೂ ಜಾತಿ ಮುಖ್ಯವಾಗಿರಲಿಲ್ಲ, ವಿದ್ಯೆ ಮುಖ್ಯ ಆಗಿತ್ತು. ಇದೀಗ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಕೋಮು ವಿಷಬೀಜ ಬಿತ್ತುವ ಕೆಲ ಸಂಘಟನೆಗಳನ್ನು ಸೋಲಿಸಬೇಕಾಗಿದೆ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಜ್ಯದ ವಿದ್ಯಾರ್ಥಿಗಳಿಗೆ ಕರೆ ನೀಡುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ ನಡೆಯುತ್ತಿರುವ ಗಲಭೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಾರಣ ಎನ್ನುವ ಆರೋಪ ಕೇಳಿ ಬರುತ್ತಿವೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಯಾವಾಗ ಸೋಷಿಯಲ್ ಡೆಮೋಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಮದ್ಯಸ್ಥಿಕೆ ವಹಿಸಿ ಎಂದರೆ ಉಡುಪಿಯಲ್ಲಿ ನಡೆದ 6 ಜನ ಹೆಣ್ಣು ಮಕ್ಕಳ ಸಾಂವಿಧಾನಿಕ ಹಕ್ಕು, ಧಾರ್ಮಿಕ ಹಕ್ಕು ಕಸಿದ ಹಿನ್ನೆಲೆಯಲ್ಲಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಲಾಯಿತು.
ನಾವು ಕೇವಲ ಮುಸ್ಲಿಮರಿಗೆ ಮಾತ್ರವಲ್ಲ. ಹಿಂದೂ, ಕ್ರೈಸ್ತ ಯಾವುದೇ ಧರ್ಮದ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡಾಗ ನಾವು ಅಲ್ಲಿ ಪಾಲ್ಗೊಳ್ಳುತ್ತೇವೆ. ಕೇವಲ ಉಡುಪಿಯ ಶಾಲೆಗೆ ಮಾತ್ರ ನಾವುಗಳು ಬಂಬಲ ಕೊಟ್ಟಿಲ್ಲ. ಶೋಷಣೆಗೆ ಒಳಗಾದ ಎಲ್ಲರಿಗೂ ನಾವು ನೈತಿಕವಾಗಿ ಬೆಂಬಲ ಕೊಡುತ್ತೇವೆ ಇದೇ ವಿಚಾರದಲ್ಲಿ ನಾವು ರಾಜಕೀಯ ಮಾಡಬೇಕೆಂದಿಲ್ಲ ಅದಕ್ಕೆ ಬೇಕಾದಷ್ಟು ವಿಚಾರಗಳಿವೆ ಆ ಮೂಲಕ ನಾವು ರಾಜಕೀಯ ಮಾಡುತ್ತಿವೆ ಎಂದರು.
ರಾಜ್ಯದ ಜನರಿಗೆ ದೊರೆಯಬೇಕಾದ ಶಿಕ್ಷಣ, ಆರೋಗ್ಯ, ಮೂಲಭೂತ ಸೌಲಭ್ಯಗಳು ಸೇರಿದಂತೆ ಇತರೆ ವಿಚಾರಗಳಲ್ಲಿ ನಾವು ರಾಜಕೀಯ ಮಾಡುತ್ತಿವೆ. ವಿನಃ ಶಾಲಾಕಾಲೇಜುಗಳನ್ನು ಬಳಸಿಕೊಂಡು ನಾವು ರಾಜಕೀಯ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದರು
ಅಂತಹ ಅದೋಗತಿ ಎಸ್‍ಡಿಪಿಐಗೆ ಬಂದಿಲ್ಲ. ಅದನ್ನು ಸಂಘ ಪರಿವಾರ ಮತ್ತು ಬಿಜೆಪಿಯವರು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಹಿಜಾಬ್ ವಿಚಾರವನ್ನು ವಿಷಯಾಂತರ ಮಾಡಲು ಇಂತಹ ಹೇಳಿಕೆ ನೀಡಿ ರಾಜ್ಯದ ಜನತೆಯಲ್ಲಿ ವಿಷ ಬೀಜ ಬಿತ್ತುತ್ತಿದ್ದಾರೆ ಎಂದರು. ಈ ವೇಳೆ ಎಸ್‍ಡಿಪಿಐ ಸಂಘಟನೆಯ ಹಲವಾರು ಪದಾಧಿಕಾರಿಗಳು ಇದ್ದರು.

 
                         
                       
                       
                       
                       
                       
                       
                      