ಮೂರನೇ ದಿನಕ್ಕೆ ಕಾಲಿಟ್ಟ ನಿವೇಶನ ರಹಿತರ ಹೋರಾಟ : ಪ್ರತಿಭಟನಾ ಸ್ಥಳಕ್ಕೆ ಅಗಮಿಸಿದ ಪುರಸಭಾ ಅಧ್ಯಕ್ಷ ಕಾಡಪ್ಪ

ಹಾಸನ: ಸಕಲೇಶಪುರ ಪುರಸಭಾ ವ್ಯಾಪ್ತಿಯಲ್ಲಿ ಅರ್ಹರಿಗೆ ನಿವೇಶನ ಮತ್ತು ವಸತಿಗಾಗಿ ಪಟ್ಟಿ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ನಿವೇಶನ ರಹಿತರ ಹಾಗೂ ಯೂತ್ ಕಾಂಗ್ರೇಸ್ ವತಿಯಿಂದ ಪ್ರಾರಂಭವಾಗಿರುವ ಅನಿರ್ದಿಷ್ಟಾವಧಿ ಪ್ರತಿಭನಾ ಧರಣಿ ಮಂಗಳವಾರೆ ಎರಡನೇ ದಿನಕ್ಕೆ ಕಾಲಿಟ್ಟಿತ್ತು. ಪಟ್ಟಣದಲ್ಲಿ ಕಳೆದ ಹಲವಾರು ವರ್ಷಗಳಿಂದ ನಿವೇಶನ ಮತ್ತು ವಸತಿಗಾಗಿ ಸಾವಿರಾರು ಜನರು ಅರ್ಜಿ ಸಲ್ಲಿಸಿದ್ದಾರೆ ಆದರೆ ಪ್ರತಿ ವರ್ಷ ನಿವೇಶನ ರಹಿತರ ಪಟ್ಟಿ ಬಿಡುಗಡೆ ಮಾಡುವುದು ಪುರಸಭೆಯವರ ಜವಾಬ್ದಾರಿಯಾಗಿದ್ದು ,ಇದೂವರೆಗೂ ಪುರಸಭೆ ನಿವೇಶನ ರಹಿತರ ಯಾವುದೇ ಪಟ್ಟಿ ಬಿಡುಗಡೆ ಮಾಡುವುದಾಗಲೀ,ನಿವೇಶನ ಹಂಚಿಕೆ ಮಾಡುವ ಕೆಲಸಕ್ಕೆ ಮುಂದಾಗದೆ ನೀರ್ಲಕ್ಷ್ಯ ತೋರಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ಅಗಮಿಸಿ ಧರಣಿ ನಿರತರ ಜೊತೆ ಮಾತುಕಥೆ ನಡೆಸಿ ನಂತರ ಮಾತನಾಡಿದ ಪುರಸಭಾ ಅಧ್ಯಕ್ಷ ಕಾಡಪ್ಪನವರು,ಪುರಸಭಾ ವ್ಯಾಪ್ತಿಯ 23 ವಾರ್ಡ್ ಗಳಲ್ಲಿ ಕಡುಬಡವರಿಗೆ ನಿವೇಶನ ಹಾಗೂ ವಸತಿ ನೀಡುವ ಸಲುವಾಗಿ 2014 ರಲ್ಲಿ ಸ.ನಂ 119 ಮತ್ತು 200/2 ರಲ್ಲಿ ಒಟ್ಟು 14 ಎಕರೆ ಜಾಗವನ್ನು ಖರೀದಿ ಮಾಡಲಾಗಿತ್ತು.ಆದರೆ ಜಾಗ ನೀಡಿದ ಸಂಬಧಿಕರು ಮಾರಾಟ ಮಾಡಿದ ಜಾಗಕ್ಕೆ ತಕರಾರು ತೆಗೆದ ಹಿನ್ನಲೆಯಲ್ಲಿ ಇಲ್ಲಿವರೆಗೂ ನ್ಯಾಯಲಯದಲ್ಲಿ ವಿಚಾರಣೆ ನಡೆಯುತ್ತಿದೆ ಇದರಿಂದ ನಿವೇಶನ ಹಾಗೂ ವಸತಿ ಹಂಚಿಕೆ ಪ್ರಕ್ರಿಯೆ ವಿಳಂಬವಾಗಿದೆ.ನ್ಯಾಯಲಯದಲ್ಲಿರುವ ಪ್ರಕರಣ ಸಂಬಂಧ ಪುರಸಭೆ ಈಗಾಗಲೇ ಜಾಗದ ಸಮಸ್ಯೆ ಇತ್ಯರ್ಥಕ್ಕೆಹೈಕೋರ್ಟ್ ನಲ್ಲಿ ಮತ್ತೊಮ್ಮೆ ದಾವೆ ಹೂಡಲಾಗಿದ್ದು ಪ್ರಕರಣ ಶೀಘ್ರ ಬಗೆಹರಿಯುವ ವಿಶ್ವಾಸವಿದೆ ಎಂದರು. ನಿವೇಶನ ಹಾಗೂ ವಸತಿ ರಹಿತರ ಅಯ್ಕೆ ಪಟ್ಟಿಯನ್ನು ಪುರಸಭೆ ಮಾಡುವುದಿಲ್ಲ ಅದಕ್ಕಾಗಿಯೇ ಆಶ್ರಯ ಸಮಿತಿಯಿಂದ ಸುಖಸುಮ್ಮನೆ ಪುರಸಭೆ ಮೇಲೆ ಆರೋಪ ಹೊರಿಸುವುದು ಸೂಕ್ತವಲ್ಲವೆಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!