ಮಿಸ್ ಕಾಲ್ ಕೊಟ್ಟು ವಂಚಿಸುವ ತಂಡ ಪೊಲೀಸ್ ವಶಕ್ಕೆ.! ಅಶ್ಲೀಲ ವೀಡಿಯೋ ಮಾಡಿ 1.50 ಲಕ್ಷ ಪಡೆದಿದ್ದ ನಾಲ್ವರು ಬಂಧನ
ದಾವಣಗೆರೆ: ಮಿಸ್ ಕಾಲ್ ಕೊಟ್ಟು ವ್ಯಕ್ತಿಯೊಬ್ಬರನ್ನು ಪರಿಚಯಿಸಿಕೊಂಡು, ಊಟಕ್ಕೆ ಕರೆದು ಹೆದರಿಸಿ ಅಶ್ಲೀಲವಾಗಿ ವೀಡಿಯೋ ಮಾಡಿ ಬೆದರಿಸಿ 1.50 ಲಕ್ಷ ರೂ. ಪಡೆದ ಆರೋಪದ ಹಿನ್ನೆಲೆಯಲ್ಲಿ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಳೆದ ಮಾರ್ಚ್ 19ರಂದು ವ್ಯಕ್ತಿಯೊಬ್ಬರ ಮೊಬೈಲ್‌ಗೆ ಮಿಸ್ ಕಾಲ್ ಬಂದಿತ್ತು. ಆತ ವಾಪಾಸ್ ಪೋನ್ ಮಾಡಿದಾಗ ಯುವತಿಯೊಬ್ಬಳು ತಮ್ಮ ಹೆಸರು, ಗಂಗಾ, ಹಿರೇಮಳಲಿ ಗ್ರಾಮ ಎಂದು ಪರಿಚಯಿಸಿಕೊಂಡಿದ್ದಳು. ಪೋನ್‌ನಲ್ಲಿ ಮಾತನಾಡಿ ಹಣ ಹಾಕಿಸಿಕೊಂಡಿದ್ದಳು.
ವ್ಯಕ್ತಿ ದಾವಣಗೆರೆಗೆ ಬಂದಿದ್ದಾಗ ಗಂಗಾ ಎಂಬ ಯುವತಿ, ಹರೀಶ್, ಚಂದ್ರು ಹಾಗೂ ಗಿಡ್ಡ ಗಂಗಮ್ಮ ಎಂಬ ಮತ್ತೊಬ್ಬ ಮಹಿಳೆ ಸೇರಿಕೊಂಡು ಒಳ ಸಂಚು ರೂಪಿಸಿ ವ್ಯಕ್ತಿಯನ್ನು ತಮ್ಮ ಮನೆಗೆ ಊಟಕ್ಕೆ ಬರಬೇಕೆಂದು ಒತ್ತಾಯ ಮಾಡಿ ಸಿದ್ಧವೀರಪ್ಪ ಬಡಾವಣೆಯ ಮನೆಗೆ ಕರೆಯಿಸಿಕೊಂಡಿದ್ದಾರೆ.
ನಂತರ ಎಲ್ಲರೂ ಸೇರಿಕೊಡು ಅಶ್ಲೀಲವಾಗಿ ವೀಡಿಯೋ ಮಾಡಿ ಬೆದರಿಸಿ 30 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟು, 1.50 ಲಕ್ಷ ರೂ.ಗಳನ್ನು ಪಡೆದು, ಯಾರಿಗಾದರೂ ಹೇಳಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಪ್ರಾಣಬೆದರಿಗೆ ಹಾಕಿದ್ದಾರೆ ಎಂದು ದೂರು ದಾಖಲಾಗಿತ್ತು.
ವಿದ್ಯಾನಗರ ಠಾಣೆಯಲ್ಲಿ ದೂರ ದಾಖಲಿಸಿಕೊಂಡ ಪೊಲೀಸರು ಇದೀಗ ಆರೋಪಿಗಳಾದ ಹರೀಶ್, ಚಂದ್ರು, ಗಂಗಾ ಹಾಗೂ ಗಿಡ್ಡ ಗಂಗಮ್ಮ ಇವರನ್ನು ಬಂಧಿಸಿ, ಆರೋಪಿಗಳಿಂದ 1.30 ಲಕ್ಷ ರೂ. ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ತನಿಖೆ ಮುಂದುವರೆಸಿದ್ದಾರೆ.
ಪ್ರಕರಣದಲ್ಲಿ ಆರೋಪಿತರನ್ನು ಪತ್ತೆ ಮಾಡಲು ದಾವಣಗೆರೆ ನಗರ ಉಪ ವಿಭಾಗದ ಡಿವೈಎಸ್‌ಪಿ ಮಲ್ಲೇಶ್ ಪಿ ದೊಡ್ಡಮನಿ ಮತ್ತು ವಿದ್ಯಾನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀಮತಿ ಪ್ರಭಾವತಿ ಸಿ ಶೇತಸನದಿ ಇವರ ಮಾರ್ಗದರ್ಶನಲ್ಲಿ ಪಿಎಸ್‌ಐ ಮೇಘರಾಜ್ ದೊಡ್ಡಮನಿ, ಪಿಎಸ್‌ಐ ಶ್ರೀಮತಿ ರೇಣುಕಾ ಜಿ.ಎಂ, ವಿಜಯ್,ಗೋ ಪಿನಾಥ ನಾಯ್ಕ, ಯೋಗೇಶ್ ನಾಯ್ಕ, ಭೋಜಪ್ಪ ಕಿಚಡಿ, ಶ್ರೀಮತಿ ಆಶಾ ಎಣ್ಣಿ ಮತ್ತು ಡಿ.ಸಿ.ಆರ್.ಬಿ ವಿಭಾಗದ ಆಂಜನೇಯ ತಂಡ ಶ್ರಮಿಸಿತ್ತು.
ಪೊಲೀಸ್ ಅಧೀಕ್ಷಕ ಸಿ.ಬಿ ರಿಷ್ಯಂತ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ ಬಸರಗಿ ತಂಡದ ಕಾರ್ಯವನ್ನು ಶ್ಲ್ಯಾಘಿಸಿದ್ದಾರೆ.