ಪಕ್ಷೇತರ ಅಬ್ಯರ್ಥಿಗೆ ಬೆಂಬಲಿಸಿದ್ದ ಚನ್ನಗಿರಿ ಯುವಕರು ಸಮರ್ಥ್ ಶಾಮನೂರು ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆ
ದಾವಣಗೆರೆ: ಚನ್ನಗಿರಿ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡಿದ್ದ, ಯುವ ಮುಖಂಡರು ರುದ್ರೇಶ್ ಗಂಗಗೊಂಡನಹಳ್ಳಿ, ಪತ್ರಕರ್ತರು ಹಾಗೂ ಅಣ್ಣಪ್ಪ ಅವರ ಸ್ನೇಹಿತರು ಇಂದು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ್ ಅವರ ಸುಪುತ್ರರಾದ ಯುವ ಉದ್ಯಮಿಗಳು ಯುವ ಮುಖಂಡರು ಸಮರ್ಥ್ ಶಾಮನೂರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀಮತಿ ಪ್ರಭಾ.ಎಸ್.ಎಸ್ ಮಲ್ಲಿಕಾರ್ಜುನ್ ಬೆಂಬಲವನ್ನ ಸೂಚಿಸಿದರು. ಈ ಸಂದರ್ಭದಲ್ಲಿ ಯುವ ಮುಖಂಡರಾದ ರಘು,ಯುವ ಮುಖಂಡರಾದ ಸಾಗರ್.ಎಲ್.ಎಂ.ಹೆಚ್.ಶಂಭು, ಶಿವರತನ್, ಜ್ಯೋತಿ, ರಮೇಶ್, ಹರೀಶ್ ಇದ್ದರು.