ಕಳ್ಳತನವಾಗಿದ್ದ 04 ಬೈಕ್ ಗಳು ವಶಕ್ಕೆ; ಅಪ್ರಾಪ್ತರನ್ನ ಬಂಧಿಸಿದ ಕೆಟಿಜೆ ನಗರ ಪೋಲೀಸ್

ದಾವಣಗೆರೆ: ದಿನಾಂಕ 07.09.2024 ರಂದು ರಮೇಶ್.ಜೆ.ವಥನ್ ರವರು ತಮ್ಮ KA-17 HD-7190 ನೇ ನಂಬರಿನ ಹೊಂಡಾ ಶೈನ್ ಬೈಕನ್ನು ಕೆ.ಬಿ. ಬಡಾವಣೆಯಲ್ಲಿರುವ ತಮ್ಮ ಮನೆ ಮುಂಬಾಗ ನಿಲ್ಲಿಸಿದ್ದನ್ನು ಯಾರೋ ಕಳ್ಳರು ದಿನಾಂಕ: 26.08.2024 ರಂದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಅಂತ ದೂರು ನೀಡಿದ್ದು, ಈ ಸಂಬಂಧ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಸದರಿ ಪ್ರಕರಣದಲ್ಲಿ ಆರೋಪಿತರ ಪತ್ತೆಗಾಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರುಗಳಾದ ಶ್ರೀ ವಿಜಯಕುಮಾರ್ ಎಂ.ಸಂತೋ಼ಷ್ ಮತ್ತು ಶ್ರೀ ಜಿ. ಮಂಜುನಾಥ್ ಡಿವೈಎಸ್ಪಿ ಹಾಗೂ ನಗರ ಡಿವೈಎಸ್ಪಿ ಶ್ರೀ ಮಲ್ಲೆಶ್ ದೊಡ್ಮನಿ ರವರ ಮಾರ್ಗದರ್ಶನದಲ್ಲಿ ಕೆಟಿಜೆ ನಗರ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ಸುನೀಲ್ ಕುಮಾರ್. ಹೆಚ್.ಎಸ್. ರವರ ನೇತೃತ್ವದಲ್ಲಿ ಕೆಟಿಜೆ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ ಸಾಗರ್ ಅತ್ತರವಾಲ ರವರು ಸದರಿ ಕೇಸಿನಲ್ಲಿ ಆರೋಪಿ ಹಾಗು ಮಾಲು ಪತ್ತೆಗೆ ಸಿಬ್ಬಂದಿ ಗಳೊಂದಿಗೆ ಕಾರ್ಯಚರಣೆ ಕೈಗೊಂಡಿದ್ದರು
ದಿ: 08.08.2024 ರಂದು ಭೂಮಿಕಾನಗರ ಚೆಕ್ ಪೋಸ್ಟ್ ಬಳಿ ವಾಹನ ತಪಾಸಣೆ ಮಾಡುತ್ತಿದ್ದಾಗ ಇಬ್ಬರು ಕಾನೂನು ಸಂಘರ್ಷಕ್ಕೋಳಗಾದ ಬಾಲಕರನ್ನು ವಶಕ್ಕೆ ಪಡೆದುಕೊಂಡು ಸದರಿಯವರನ್ನು ಕೂಲಂಕುಷವಾಗಿ ವಿಚಾರ ಮಾಡಿದಾಗ
1) ಕೆ.ಟಿಜೆ ನಗರ ಪೊಲೀಸ್ ಠಾಣೆಯ 02 ಬೈಕ್ ಕಳ್ಳತನ ಪ್ರಕರಣ
2) ಭರಮಸಾಗರ ಪೊಲೀಸ್ ಠಾಣೆಯ 01 ಬೈಕ್ ಕಳ್ಳತನ ಪ್ರಕರಣ
3) ಚಿಕ್ಕಜಾಜೂರು ರೈಲ್ವೆ ಸ್ಟೇಷನ್ ಬಳಿ ಕಳತನ ಮಾಡಿದ 01 ಬೈಕ್
ಮೇಲ್ಕಂಡ ನಾಲ್ಕು ಪ್ರಕರಣಗಳಲ್ಲಿ ಕಳ್ಳತನ ಮಾಡಿದ್ದ ಒಟ್ಟು 1.50.000/-ರೂ ಬೆಲೆಯ 04 ಬೈಕುಗಳನ್ನು ವಶ ಪಡಿಸಿಕೊಂಡಿರುತ್ತಾರೆ.
ಆರೋಪಿತರ ಪತ್ತೆ ಕಾರ್ಯದಲ್ಲಿ ಹಾಗು ಸ್ವತ್ತು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಕೆಟಿಜೆ ನಗರ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ಸುನೀಲ್ ಕುಮಾರ್. ಹೆಚ್.ಎಸ್., ಪಿ.ಎಸ್.ಐ ರವರಾದ ಶ್ರೀ ಸಾಗರ ಅತ್ತರವಾಲ ಹಾಗು ಸಿಬ್ಬಂದಿಗಳಾದ ಸುರೇಶ್ ಬಾಬು, ಪ್ರಕಾಶ ಟಿ, ಮಹಮದ್ ರಫಿ, ಗಿರೀಶ್ ಗೌಡ, ಶಿವರಾಜ್ ಎಮ್ ಎಸ್, ಪುರುಶೋತ್ತಮ, ಸಿದ್ದಪ್ಪ, ಮಂಜಪ್ಪ, ಹನುಮಂತಪ್ಪ.ಎ, ಶ್ರೀಮತಿ ಗೀತಾ ರವರುಗಳನ್ನು ಪೊಲೀಸ್ ಅಧೀಕ್ಷಕರಾದ ಉಮಾಪ್ರಶಾಂತ್. ಐಪಿಎಸ್ ರವರು ಶ್ಲಾಘಿಸಿರುತ್ತಾರೆ