ಕೇಂದ್ರದ ಬಜೆಟ್ ನಲ್ಲಿ ಹೊಸತನವಿಲ್ಲ – ಎಲ್ ಹೆಚ್ ಅರುಣ್ ಕುಮಾರ್

ದಾವಣಗೆರೆ: ಕೇಂದ್ರ ಸಚಿವೆ ನಿರ್ಮಲ ಸೀತಾರಾಮನ್ ಬುಧವಾರ ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ಯಾವುದೇ ಹೊಸತನ ಕಾಣಿಸುತ್ತಿಲ್ಲ. ಆದಾಯ ತೆರಿಗೆ ವಿನಾಯಿತಿಯನ್ನು 5 ಲಕ್ಷದಿಂದ 7 ಲಕ್ಷಕ್ಕೇರಿಸಿರುವುದು ಮಧ್ಯಮ ವರ್ಗದವರಿಗೆ ತುಸು ಸಮಾಧಾನಕರ. ಉಳಿದಂತೆ ಜನರಿಗೆ ಆದಾಯ ತರುವ ಮಾರ್ಗಗಳು, ರೈತಾಪಿ ವರ್ಗದವರಿಗೆ ಅನುಕೂಲಕರ ಪ್ರಸ್ತಾಪಗಳು ಬಜೆಟ್‌ನಲ್ಲಿ ಇಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ಅಲ್ಪ ಪ್ರಮಾಣದ ನೆರವು ಘೋಷಿಸಲಾಗಿದೆ ಎನ್ನುವುದು ಬಿಟ್ಟರೆ, ಕರ್ನಾಟಕಕ್ಕೆ ಅಂತಹ ಅನುಕೂಲಗಳು ಆಗಿಲ್ಲ. ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನೀಡುವ ಬಗ್ಗೆ ಆಲೋಚನೆಗಳನ್ನೇ ಮಾಡಲಾಗಿಲ್ಲ. ಬಜೆಟ್ ಘೋಷವಾಕ್ಯಗಳಿಗೆ ಸೀಮಿತವಾದಂತಿದೆ.
-ಎಲ್.ಎಚ್.ಅರುಣಕುಮಾರ್
ಹಿರಿಯ ವಕೀಲರು, ದಾವಣಗೆರೆ.