ರಾಜ್ಯ ಸರ್ಕಾರದ ಬಜೆಟ್ನಲ್ಲಿ ದಾವಣಗೆರೆಗೆ ಏನೂ ಇಲ್ಲ.! ಎಲ್ಲವೂ ಬೆಂಗಳೂರಿಗೇ ಸೀಮಿತ – ನಮ್ಮ ದಾವಣಗೆರೆ ತಂಡ
ದಾವಣಗೆರೆ: ರಾಜ್ಯ ಸರ್ಕಾರದ ಬಜೆಟ್ನಲ್ಲಿ ದಾವಣಗೆರೆಗೆ ಏನೂ ಇಲ್ಲ, ಎಲ್ಲವೂ ಬೆಂಗಳೂರಿಗೇ ಸೀಮಿತ , ಮಧ್ಯ ಕರ್ನಾಟಕದಲ್ಲಿ ದಾವಣಗೆರೆಯೂ ಕೂಡ ಒಂದು ಕೈಗಾರಿಕಾ ನಗರವಾಗಿತ್ತು ಎಂಬುದನ್ನು ಎಲ್ಲರೂ ಮರೆತಿದ್ದಾರೆ.
ದಶಕದ ಬೇಡಿಕೆಯಾದ ದಾವಣಗೆರೆ – ಚಿತ್ರದುರ್ಗ – ತುಮಕೂರು ನೇರ ರೈಲು ಮಾರ್ಗದ ಭೂ ಖರೀದಿ ಕಾರ್ಯವನು ಈ ಬಜೆಟ್ ನಲ್ಲಿ ಇನ್ನಷ್ಟು ಚುರುಕುಗೊಳಿಸಬಹುದಾಗಿತ್ತು , ಜಿಲ್ಲೆಯ ಜನರಿಗೆ ಉದ್ಯೋಗ ಸೃಷ್ಟಿಗೆ ಬೇಕಾದ ಯೋಜನೆಗಳು , ಜಿಲ್ಲೆಯಲ್ಲಿ ಜವಳಿ ಪಾರ್ಕ್ ಘೋಷಣೆ ಮಾಡಬಹುದಾಗಿತ್ತು, ದಶಕದ ಬೇಡಿಕೆಯಾದ ಮೆಗಾ ಡೈರಿ , ದಾವಣಗೆರೆ ಜಿಲ್ಲೆಯಲ್ಲಿ ಒಂದು ಹೊಸದಾದ , ಸುಸಜಿತ ಜಿಲ್ಲಾ ಕ್ರೀಡಾಂಗಣ ಮತ್ತು ಕ್ರೀಡಾ ಹಾಸ್ಟೆಲ್‌ಗಳನ್ನು ಮಂಜೂರು ಮಾಡಬಹುದಾಗಿತ್ತು,ಜಿಲ್ಲೆಯ ಜನರಿಗೆ ಉದ್ಯೋಗ ಸೃಷ್ಟಿಗೆ ಬೇಕಾದ ಯೋಜನೆಗಳು, ಜಿಲ್ಲೆಯಲ್ಲಿ ಜವಳಿ ಪಾರ್ಕ್ ನಿಮಾ೯ಣ. ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಬಡಾವಣೆ ನಿರ್ಮಾಣ , ಬೃಹತ್ ಕೈಗಾರಿಕೆ ಘಟಕಗಳ ಆರಂಭಕ್ಕೆ ‘ಲ್ಯಾಂಡ್ ಬ್ಯಾಂಕ್ ಮಂಜೂರು ಮಾಡಬಹುದಾಗಿತ್ತು,
ದಾವಣಗೆರೆ ಜಿಲ್ಲೆಯ ಕೃಷಿ ಉತ್ಪಾದನೆ ಸಂರಕ್ಷಣೆಗಾಗಿ ಫುಡ್ ಪಾರ್ಕ್ ಮಂಜೂರು ಮಾಡಬಹುದಾಗಿತ್ತು, ಪೆಟ್ರೋಲ್ ಡೀಸೆಲ್ ತೆರಿಗೆ ಕೆಡಿಮೆ ಮಾಡಬಹುದಿತ್ತು, ದಾವಣಗೆರೆ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಸ್ಥಾಪಿಸಲು ಕಾರ್ಯ ಸಾಧ್ಯತೆ ವರದಿ ಬಗ್ಗೆ ಉಲ್ಲೇಖಿಸಲಾಗಿದೆ.
ನಮ್ಮ ದಾವಣಗೆರೆ ತಂಡ