exhibition; ಬರೋ ಮೊದ್ಲು ಯೋಚಿಸಿ; ಇಲ್ಲಿಗೆ ಬಂದ್ರೆ ಜನರ ಪ್ರಾಣಕ್ಕೆ ಸುರಕ್ಷತೆ ಇಲ್ಲ
ದಾವಣಗೆರೆ, ಅ.27: ಹೀಗೆ ಕುಹೂ, ಕುಹೂ ಎಂದು ಕೂಗುವ ಶಬ್ದ, ತರೇಹವಾರಿ ಹಕ್ಕಿಗಳು ಹೀಗೆ ಇವುಗಳನ್ನು ನೋಡೋದಕ್ಕೆ ಎರಡು ಕಣ್ಣು ಸಾಲದು..ಇವುಗಳೆಲ್ಲ ಕರೆಂಟ್ ನಿಂದ ಮಾಡಿರುವ ಮಾನವ ಸಹಿತ ಹಕ್ಕಿಗಳು.. ಆದರೆ ಇಲ್ಲಿ ಯಾವುದೇ ಸುರಕ್ಷತಾ ಕ್ರಮಗಳಿಲ್ಲ…ಕಿಡಿ ತಾಗಿ ಬೆಂಕಿ ಹತ್ತಿದರೆ ಜನಗಳ ಪ್ರಾಣಕ್ಕೆ ಲೆಕ್ಕವೇ ಇಲ್ಲ. ಹೌದು..ನಗರದ ಅರುಣ್ ಟಾಕೀಸ್ ಬಳಿ ನಿರ್ಮಾಣ ಮಾಡಿರುವ ಎಕ್ಸಿಬಿಷೇನ್ ನಲ್ಲಿ (exhibition) ಇಂತಹ ದೃಶ್ಯಗಳು ಕಂಡು ಬರುತ್ತಿದೆ.
ಸುತ್ತಲೂ ಬಟ್ಟೆಯಿಂದ ಅಂಗಡಿಗಳನ್ನು ಕವರ್ ಮಾಡಿದ್ದು, ಬೃಹತ್ ಪ್ರಮಾಣದಲ್ಲಿ ವಿದ್ಯುತ್ ಹರಿಯುತ್ತಿದೆ..ಸಾವಿರಾರು ಜನ ಮಕ್ಕಳೊಂದಿಗೆ ದೌಡಾಯಿಸುತ್ತಿದ್ದಾರೆ..ಒಮ್ಮೆ ಏನಾದರೂ ಬೆಂಕಿ ಕಿಡಿ ಹತ್ತಿದರೆ ಹೊರ ಬರಲು ಸಾಧ್ಯವೇ ಇಲ್ಲ ಹೀಗಿದ್ದರೂ ಅಗ್ನಿ ಶಾಮಕ ಇಲಾಖೆ ಹೇಗೆ ಎನ್ಒಸಿ ಕೊಟ್ಟಿದೆ ಎಂಬ ಪ್ರಶ್ನೆ ಮೂಡಿದೆ..ಅಲ್ಲದೇ ಇದರಲ್ಲಿ ಇದೊಂದೇ ಇಲಾಖೆಯಿಲ್ಲ ಪಾಲಿಕೆ, ಪಿಡಬ್ಲ್ಯೂಡಿ, ಪೊಲೀಸ್ ಇಲಾಖೆ, ಬೆಸ್ಕಾಂ ಇಲಾಖೆ ಪಾತ್ರವೂ ಇದ್ದು, ಸುರಕ್ಷತಾ ಕ್ರಮಗಳಿಲ್ಲದೇ ಹೇಗೆ ಎನ್ಒಸಿ ಕೊಟ್ಟಿದ್ದಾರೆ ಎಂಬ ಪ್ರಶ್ನೆಗೆ ಅಧಿಕಾರಿಗಳೇ ಉತ್ತರಿಸಬೇಕಾಗಿದೆ.
ಈಗಾಗಲೇ ನಾನಾ ಕಡೆ ನಡೆದಿರುವ ಪಟಾಕಿ ದುರಂತದಲ್ಲಿ ತನ್ನದಲ್ಲದ ತಪ್ಪಿಗೆ ಸಾಕಷ್ಟು ಜನರು ಪ್ರಾಣ ತೆತ್ತಿದ್ದಾರೆ..ಇನ್ನು ವಿದ್ಯುತ್ ಕಿಡಿಯಿಂದ ದೊಡ್ಡ ದೊಡ್ಡ ಕಟ್ಟಡಗಳೇ ಉರುಳಿವೆ . ಹೀಗಿರುವಾಗ ಇಷ್ಟು ದೊಡ್ಡ ಎಕ್ಸಿಬಿಶೇನ್ ಗೆ ಸುರಕ್ಷತಾ ಕ್ರಮಗಳಿಲ್ದೇ ಹೇಗೆ ಪರವಾನಿಗೆ ನೀಡಿದ್ದಾರೆ ಎಂಬುದು ನಾನಾ ಅನುಮಾನಕ್ಕೆ ಕಾರಣವಾಗಿದೆ.
bescom; ರೈತರಿಗೆ ಕೃಷಿಗಾಗಿ ದಿನದಲ್ಲಿ 5 ಗಂಟೆ ವಿದ್ಯುತ್ ಸರಬರಾಜು – ಇಂಜಿನಿಯರ್ ಬಿ.ಎಸ್.ಜಗದೀಶ್
ಈ ಎಕ್ಸಿಬಿಷೇನ್ ನಲ್ಲಿ ಎಲೆಕ್ಟ್ರಾನಿಕ್ ವಸ್ತುಗಳೇ ಹೆಚ್ಚು ಇದೆ. ಜಾಯಿಂಟ್ ವೀಲ್, ಡೀಸ್ಕೋ, ದೋಣಿ ಆಟ ಎಲ್ಲವೂ ಇದೆ..ಆದರೆ ಇವುಗಳಲ್ಲಿ ಕುಳಿತಿರುವ ಜನರ ಪ್ರಾಣಕ್ಕೆ ರಕ್ಷಣೆ ಇಲ್ಲ..
ನಿಯಮದ ಪ್ರಕಾರ ಒಂದು ಫೈರ್ ಎಂಜಿನ್ ಸ್ಥಳದಲ್ಲಿಯೇ ಇರಬೇಕು..ಬೆಂಕಿ ನಂದಿಸಲು ಎಲ್ಲ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ಜಾಯಿಂಟ್ ವೀಲ್ ಸೇರಿದಂತೆ ಇತರೆ ಬೃಹತ್ ಆಟವಾಡಿಸುವವನಿಗೆ ತರಬೇತಿ ನೀಡಿರಬೇಕು. ಆತ ತರಬೇತಿ ಪಡೆದಿರುವ ಸರ್ಟಿಫಿಕೇಟ್ ಪಡೆದಿರಬೇಕು..ಇವೆಲ್ಲವೂ ಇದ್ದರೆ ಮಾತ್ರ ಎನ್ ಒಸಿ ನೀಡಬೇಕು..ಆದರೆ ಅಂತಹ ಯಾವ ನಿಯಮವೂ ಇಲ್ಲಿ ನಡೆಯುತ್ತಿಲ್ಲ..ಒಬ್ಬರಿಗೆ ಎಪ್ಪತ್ತುರೂಪಾಯಿ ಟಿಕೆಟ್ ದರವಿದ್ದು, ಒಳಗಿನ ಅಂಗಡಿಗಳಿಗೂ ಕೂಡ ಬಾಡಿಗೆ ನೀಡಲಾಗಿದೆ..ಇಷ್ಟೇಲ್ಲ ಹಣ ಬಂದರೂ ಸುರಕ್ಷತೆ ಮಾತ್ರ ಇಲ್ಲ…ಏನೇ ಆಗಲಿ ಜನರ ಪ್ರಾಣ ಮುಖ್ಯವಾಗಿದ್ದು, ಇನ್ನಾದರೂ ಅಗ್ನಿ ಶಾಮಕ ಇಲಾಖಾಧಿಕಾರಿಗಳು ಗಮನಹರಿಸಿ ಸುರಕ್ಷತಾ ಕ್ರಮ ಅಳವಡಿಸಿ ಜನರ ಪ್ರಾಣ ರಕ್ಷಣೆ ಮಾಡುತ್ತಾರೆಯೇ ಅಥವಾ ಕಾನೂನು ಮೀರಿ ನಡೆದರೂ ಮೌನವಹಿಸುತ್ತಾರೆಯೋ ಕಾದು ನೋಡಬೇಕಾಗಿದೆ.