Pg Students Stipend: ಗೃಹವೈದ್ಯರ ಮುಷ್ಕರ 3 ನೇ ದಿನಕ್ಕೆ | ತಟ್ಟೆ ಬಾರಿಸಿದ್ದಾಯ್ತು, ಇಂದು ಬೀದಿ ನಾಟಕ ವಾಡಿ ಗಮನ ಸೇಳೆದ ವೈದ್ಯರು

ದಾವಣಗೆರೆ: ಐದು ತಿಂಗಳ ಬಾಕಿ ಶಿಷ್ಯವೇತನಕ್ಕೆ ಆಗ್ರಹಿಸಿ ಗೃಹ ವೈದ್ಯರು ಇಂದು ಬೀದಿ ನಾಟಕವಾಡಿ ಸರ್ಕಾರದ, ಕಾಲೇಜು ಆಡಳಿತ ಮಂಡಳಿಯ ಗಮನ ಸೆಳೆಯಲು ಯತ್ನಿಸಿದರು.
ನಗರದ ಜಯದೇವ ವೃತ್ತದಲ್ಲಿ ಜೆಜೆಎಂ ಕಾಲೇಜು ಗೃಹವೈದ್ಯರು ನಡೆಸುತ್ತಿರುವ ಮುಷ್ಕರ ಇಂದು ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಈ ಹಿನ್ನೆಲೆಯಲ್ಲಿ ಇಂದು ಗೃಹ ವೈದ್ಯರು ಬೀದಿ ನಾಟಕವಾಡಿ ಮುಷ್ಕರ ನಡೆಸಿದರು.
ನಿನ್ನೆಯಷ್ಟೆ ತಟ್ಟೆ ಬಾರಿಸಿ ಆಕ್ರೋಶ ಹೊರ ಹಾಕಿದ್ದ ಗೃಹ ವೈದ್ಯರುಗಳು ಇಂದು ಬೀದಿ ನಾಟಕವಾಡಿ ಗಮನ ಸೆಳೆದರು.