ಇದೊಂದು ಅಭಿವೃದ್ಧಿ ಕೇಂದ್ರಿತ ಬಜೆಟ್-ಪ್ರೊ ಭೀಮಣ್ಣ.ಸುಣಗಾರ: ಜನಪರ ಹಾಗೂ ಅಭಿವೃದ್ಧಿ ಬಜೆಟ್-ಸಾಗರ್‌ ಎಲ್‌ ಎಂ ಹೆಚ್

This is a development oriented budget-Pro Bhimanna.Sunagara_ Pro-people and development budget-Sagar LMH.

ದಾವಣಗೆರೆ: ರೈತರು,ಶ್ರಮಿಕರು, ಮಹಿಳೆಯರು, ಹಿಂದುಳಿದ ವರ್ಗ,ಪರಿಶಿಷ್ಟ ಜಾತಿ/ಪಂಗಡ,ಅಲ್ಪಸಂಖ್ಯಾತರು ಸೇರಿದಂತೆ ವಿವಿಧ ವರ್ಗಗಳ ಅಭ್ಯುದಯಕ್ಕೆ ಹೊಸ ಕಾರ್ಯಕ್ರಮಗಳನ್ನು ಇತರ ,ಜನಪರ ಕಾರ್ಯಕ್ರಮಗಳಿಗೂ ಬಜೆಟ್ ನಲ್ಲಿ ಒತ್ತು ನೀಡಲಾಗಿದೆ.

ಆರೋಗ್ಯ, ಶಿಕ್ಷಣ,ಗ್ರಾಮೀಣಾಭೀವೃದ್ಧಿ , ನಗರಾಭಿವೃದ್ಧಿ ವಲಯಕ್ಕೂ ಒತ್ತು ನೀಡಲಾಗಿದೆ.ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಗೂ ಹೆಚ್ಚು ಆದ್ಯತೆ ನೀಡಿದ್ದಾರೆ, ರಾಜ್ಯದಆರ್ಥಿಕತೆಯನ್ನು ಸುಸ್ಥಿರಗೊಳಿಸಲು ಬಜೆಟ್ ನಲ್ಲಿ ಒತ್ತು ನೀಡಿದ್ದಾರೆ .ಉಳಿದಂತೆ ಯಾವುದೇ ಹೊರೆ ಇರದ ಬಜೆಟ್ .

ದಾಖಲೆ 16 ನೇ ಬಜೆಟ್‌ ಮಂಡಿಸಿರುವ ಸಿಎಂ ಸಿದ್ದರಾಮಯ್ಯ ಅವರು ರಾಜ್ಯದ ಅಭಿವೃದ್ಧಿಗೆ ಪೂರಕವಾಗಿದೆ. ಸರ್ವಾಂಗೀಣ ಅಭಿವೃದ್ಧಿಯ ಸಂಕೇತವಾಗಿದೆ ಎಂದು ಮಹಾನಗರ ಪಾಲಿಕೆ ನಾಮ ನಿರ್ದೇಶಿಕ ಸದಸ್ಯರು ಹಾಗೂ ಕಾಂಗ್ರೆಸ್‌ ಮುಖಂಡರಾದ ಸಾಗರ್ ಎಲ್.ಎಂ.ಹೆಚ್ ತಿಳಿಸಿದ್ದಾರೆ. ಮಹಿಳೆಯರು, ಬಡವರು, ಮಧ್ಯಮ ವರ್ಗ ಹಾಗೂ ರೈತರು, ಕಾರ್ಮಿಕರು ಸೇರಿದಂತೆ ಎಲ್ಲರಿಗೂ ಅನುಕೂಲವಾಗುವಂತ ಬಜೆಟ್‌ ಮಂಡಿಸಿದ್ದಾರೆ.

ದೂರದೃಷ್ಟಿಯಿಟ್ಟುಕೊಂಡು ಮಾನ್ಯ ಮುಖ್ಯಮಂತ್ರಿಗಳು ರಾಜ್ಯದ ಅಭಿವೃದ್ಧಿಗೆ ಪೂರಕವಾದ ಆಯವ್ಯಯ ಮಂಡಿಸಿದ್ದಾರೆ ಎಂದರು. ಪ.ಜಾ, ಪ.ಪಂ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗ ಸೇತರಿದಂತೆ ಬಹುತೇ ಎಲ್ಲಾ ಸಮುದಾಯಕ್ಕೂ ಸಮಾನತೆ ಕಲ್ಪಸುವ ಮೂಲಕ ಆರ್ಥಿಕ ಅಭಿವೃದ್ಧಿಗೆ ನೆರವಾಗಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಸುಮಾರು 51 ಸಾವಿರ ಕೋಟಿ ಮೀಸಲಿಟ್ಟಿದ್ದು ನುಡಿದಂತೆ ನಡೆಯುತ್ತಿದ್ದಾರೆ. ಇದರ ನಡುವೆಯೂ ಲೋಕೋಪಯೋಗಿ, ನೀರಾವರಿ ಸೇರಿದಂತೆ ಎಲ್ಲಾ ಇಲಾಖೆಗಳಿಗೂ ಹೆಚ್ಚಿನ ಅನುದಾನ ಒದಗಿಸುವ ಮೂಲಕ ಅಭಿವೃದ್ಧಿ ಎಂದರೆ ಕಾಂಗ್ರೆಸ್‌ ಪಕ್ಷ ಎಂಬುದನ್ನು ಈ ಬಜೆಟ್‌ ನಲ್ಲಿ ಎತ್ತಿ ತೋರಿಸಿದ್ದಾರೆ ಎಂದರು. ಪ್ರಗತಿಯ ಸಂಕೇತವಾಗಿರುವ ಈ ಬಜೆಟ್‌ ಉದ್ಯೋಗ ಸೃಷ್ಟಿ ಮಾಡಲು ಸಹಾಯಕವಾಗಿದೆ, ಔದ್ಯೋಗಿಕ ಬೆಳವಣಿಗೆಗೆ ಪೂರಕವಾಗಿದೆ, ಕಾರ್ಮಿಕರ ಕಲ್ಯಾಣದ ಬಜೆಟ್‌ ಆಗಿದೆ ಎಂದು ಸಾಗರ್ ಎಲ್.ಎಂ.ಹೆಚ್ ಹೇಳಿದ್ದಾರೆ.

ಕಾರ್ಮಿಕರು, ಮಹಿಳೆಯರು, ಯುವವರ್ಗ, ರೈತರು ಸೇರಿದಂತೆ ಪ್ರತಿಯೊಂದು ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಹಲವು ಕಾರ್ಯಕ್ರಮಗಳನ್ನು ಘೋಷಿಸಲಾಗಿದೆ. ದಾವಣಗೆರೆ ಜಿಲ್ಲಾ ಆಸ್ಪತ್ರೆ ಸೇರಿದಂತೆ ಇತರೆ ಜಿಲ್ಲೆಗಳ ಒಟ್ಟು 8 ತಾಲ್ಲೂಕು ಆಸ್ಪತ್ರೆಗಳನ್ನು 650 ಕೋಟಿ ರೂ ವೆಚ್ಚದಲ್ಲಿ ನವೀಕರಣಕ್ಕೆ ಬಜೆಟ್ ನಲ್ಲಿ ಮೀಸಲಿಡಲಾಗಿದೆ.

ಬಂಜಾರ ಸಮುದಾಯದ ಪ್ರಮುಖ ಧಾರ್ಮಿಕ ಸ್ಥಳವಾದ ದಾವಣಗೆರೆ ಜಿಲ್ಲೆಯ ಸಂತ ಸೇವಾಲಾಲ್ ಪುಣ್ಯಕ್ಷೇತ್ರ ಸೂರಗೊಂಡನ ಕೊಪ್ಪದಲ್ಲಿ ಒಂದು ವಸತಿ ಶಾಲೆ ಪ್ರಾರಂಭಿಸಲು ಹಾಗೂ ಕೊಂಡಜ್ಜಿ ಬೆಟ್ಟದ ಪರಿಸರದಲ್ಲಿ ಸ್ಥಾಪಿಸಲಾಗಿರುವ ವೃತ್ತಿರಂಗಭೂಮಿ ರಂಗಾಯಣದಲ್ಲಿ 3.00 ಕೋಟಿ ರೂ ವೆಚ್ಚದಲ್ಲಿ ಮೂಲಭೂತ ಸೌಕರ್ಯ, ವೃತ್ತಿ ರಂಗಾಯಣ ಸಮುಚ್ಚಯ ಹಾಗೂ ಥಿಯೇಟರ್ ಮ್ಯೂಸಿಯಂ ನಿರ್ಮಾಣ ಮಾಡಲು ನಿರ್ಧಾರ ಮಾಡಿರುವುದು ಜಿಲ್ಲೆಯ ಜನತೆ ಪರವಾಗಿ ಸ್ವಾಗತ ಮಾಡುತ್ತೇನೆ ಇದೊಂದು ಆಶಾದಾಯಕ ಮತ್ತು ಅಭಿವೃದ್ಧಿಯ ಬಜೆಟ್‌ ಆಗಿದೆ ಎಂದು ಸಾಗರ್ ಎಲ್.ಎಂ.ಹೆಚ್ ಹೇಳಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!