ಓಟ್ ಮಾಡಲು ಅಮೆರಿಕಾದಿಂದ ದಾವಣಗೆರೆಗೆ ಬಂದವರಿಗೆ ಶಾಕ್, ಮತದಾರರ ಪಟ್ಟಿಯಲ್ಲಿ ಹೆಸರೇ ನಾಮಪತ್ತೆ

ಓಟ್ ಮಾಡಲು ಅಮೆರಿಕಾದಿಂದ ದಾವಣಗೆರೆಗೆ ಬಂದವರಿಗೆ ಶಾಕ್, ಮತದಾರರ ಪಟ್ಟಿಯಲ್ಲಿ ಹೆಸರೇ ನಾಮಪತ್ತೆ

ದಾವಣಗೆರೆ: ವಿಧಾನಸಭಾ ಚುನಾವಣೆಗೆ ಮತದಾನ ಮಾಡಲು ಅಮೆರಿಕಾದಿಂದ ಬಂದಿದ್ದ ಮತದಾರರೊಬ್ಬರು ಪಟ್ಟಿಯಲ್ಲಿ ಹೆಸರೇ ಇಲ್ಲದ ಪರಿಣಾಮ ನಿರಾಶೆಯಿಂದ ವಾಪಾಸ್ ತೆರಳಬೇಕಾದ ಘಟನೆ ನಡೆದಿದೆ.

ನಗರದ ಎಂ.ಸಿ.ಸಿ. ಬಿ ಬ್ಲಾಕ್ ನಿವಾಸಿ ರಾಘವೇಂದ್ರ ಕಮಲಾಕರ ಶೇಟ್ ಅವರು ನಿರಾಸೆಗೊಳಗಾದ ವ್ಯಕ್ತಿಯಾಗಿದ್ದಾರೆ.

ನಾನೊಬ್ಬ ಜವಾಬ್ದಾರಿಯುತ ಮತದಾರನಾಗಿ ಕರ್ನಾಟಕದಲ್ಲಿ ನಡೆಯುವ ಪ್ರತಿ ಚುನಾವಣೆ ವೇಳೆಯೂ ಅಮೆರಿಕಾದಿಂದ ದಾವಣಗೆರೆಗೆ ಬಂದು ಮತ ಚಲಾಯಿಸುತ್ತಿದ್ದೇನೆ. ಈ ಬಾರಿಯ ವಿಧಾನಸಭಾ ಚುನಾವಣೆಗೂ ಮತ ಚಲಾಯಿಸಲು ಕಳೆದ ನವೆಂಬರ್ ತಿಂಗಳಂದು ಮತದಾರರ ಪಟ್ಟಿಯಲ್ಲಿ ಹೆಸರು ಪರಿಶೀಲಿಸಿದ್ದೆ. ನನ್ನ ಹೆಸರು ಇತ್ತು. ನಂತರ ಜನವರಿಯಲ್ಲಿ ಬರುವ ಪ್ಲಾನ್ ಮಾಡಿ ಮತ್ತೊಮ್ಮೆ ಚೆಕ ಮಾಡಿದಾಗಲೂ ಹೆಸರಿತ್ತು. ಆದರೆ ಇಂದು ಮತದಾನ ಮಾಡಲು ಬಂದಾಗ ಹೆಸರು ನಾಪತ್ತೆಯಾಗಿದೆ ಎಂದವರು ಬೇಸರ ವ್ಯಕ್ತಪಡಿಸಿದರು.

ಆದರೆ ಒಂದೂ ಕಾಲು ಲಕ್ಷ ರೂಪಾಯಿ ಖರ್ಚು ಮಾಡಿ ವಾರಗಟ್ಟಲೆರಜೆ ಹಾಕಿ ಮತದಾನ ಮಾಡಲು ಬಂದಿದ್ದೆ. ಇಂದು ಬಂದು ಪರಿಶೀಲಿಸಿದಾಗ ಮತಗದಾರರ ಪಟ್ಟಿಯಲ್ಲಿ ಮತವೇ ಇಲ್ಲ ಎಂದು ಹೇಳುತ್ತಾರೆ. ಚುನಾವಣಾಧಿಕಾರಿ ಕೇಳಿದಾಗ ಅವರೂ ಪರಿಶೀಲಿಸಿದ್ದಾರೆ. ಆಗಲೂ ಪ್ರಯೋಜನವಾಗಲಿಲ್ಲ. ಇದೀಗ ತೀವ್ರ ನಿರಾಸೆಯಿಂದ ಹಿಂದಿರುಗಬೇಕಾಗಿದೆ ಎಂದವರು ಹೇಳಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!