Cctv Footage: ಟೈಲ್ಸ್ ಅಂಗಡಿಯಲ್ಲಿ 10 ಸಾವಿರ ಕಳ್ಳತನ.! ಕಳ್ಳನ ಕರಾಮತ್ತಿನ ವಿಡಿಯೋ ನೋಡಿ.!

ದಾವಣಗೆರೆ: money theft ಅಂಗಡಿ ಮಾಲೀಕ ಟೀ ಕುಡಿಯಲು ತೆರಳಿದಾಗ ಅಪರಿಚಿತ ವ್ಯಕ್ತಿ unknown person 10 ಸಾವಿರ ರೂ. ಕಳ್ಳತನ ಮಾಡಿಕೊಂಡು ಹೋದ ಘಟನೆ ನಗರದ ಹದಡಿ ರಸ್ತೆಯಲ್ಲಿರುವ ಭರತ್ ಪೆಟ್ರೋಲ್ ಬಂಕ್ ಎದುರುಗಡೆ ಇರುವ ಶ್ರೀ ಕಲ್ಲೇಶ್ವರ ಟೈಲ್ಸ್ ಗ್ಯಾಲಾರಿ ಅಂಗಡಿಯಲ್ಲಿ ಜರುಗಿದೆ.
ಅಂಗಡಿ ಮಾಲೀಕ ಟೀ ಕುಡಿಯಲು ಹೊರಗಡೆ ಹೋದ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯೋರ್ವ ಅಂಗಡಿಗೆ ದಾವಿಸಿ ಹತ್ತು ಸಾವಿರ ರೂ.ಗಳನ್ನು ಕದ್ದಿದ್ದಾನೆ. ಇದೀಗ ಕಳ್ಳನ ಕೈಚಳಕದ ವಿಡಿಯೋ ಸಿಸಿಟಿವಿಯಲ್ಲಿ CCTV footage ಸೆರೆಯಾಗಿದ್ದು, ಅಂಗಡಿ ಮಾಲೀಕ ಸುನಿಲ್ ಕುಮಾರ್ ಎಂಬುವವರು ನಗರದ ವಿದ್ಯಾನಗರ ಪೊಲೀಸ್ ಠಾಣೆಗೆ police station complaint ದೂರು ಸಲ್ಲಿಸಿದ್ದಾರೆ.
ಇದೀಗ ಈ ರೀತಿಯ ಕಳ್ಳತನ ಪ್ರಕರಣಗಳು ನಗರದಾದ್ಯಂತ ನಡೆಯುತ್ತಿರುವುದು ಕಂಡು ಬಂದಿದ್ದು ಪೊಲೀಸರು ಜಾಗೃತರಾಗುವ awareness ಅವಶ್ಯಕತೆಯಿದೆಯೆಂದು ಅಂಗಡಿಯ ಮಾಲೀಕ ಸುನಿಲ್ ಕುಮಾರ್ ಅವರು ಪೊಲೀಸರಿಗೆ ಒತ್ತಾಯಿಸಿದ್ದಾರೆ.