ತಿರುಪತಿ: ಇಂದಿನಿಂದ ದರ್ಶನ ಕೋಟಾ ಟಿಕೆಟ್ ಬಿಡುಗಡೆ ಮಾಡಿದ ಟಿಟಿಡಿ ಟ್ರಸ್ಟ್..
ಇದರಲ್ಲಿ ಅಕ್ಟೋಬರ್ ತಿಂಗಳಲ್ಲಿ ದಿನಕ್ಕೆ 15000 ಟಿಕೆಟ್ ಗಳನ್ನು ಮತ್ತು ವಯೋವೃದ್ದರಿಗೆ ಮತ್ತು ವಿಶೇಷಚೇತನರಿಗೆ ಟಿಕೆಟ್ ಗಳನ್ನು ಇಂದಿನಿಂದ ಬಿಡುಗಡೆ ಮಾಡಲಿದೆ.ಇದಲ್ಲದೆ ಟಿಟಿಡಿ ಟ್ರಸ್ಟ್ ಆಗಸ್ಟ್ ಮತ್ತು ಸೆಪ್ಟಂಬರ್ ತಿಂಗಳ ಟಿಕೆಟ್ ಗಳನ್ನು ದಿನಕ್ಕೆ 4000 ದರದಲ್ಲಿ ಹೆಚ್ಚುವರಿ ಟಿಕೆಟ್ ಗಳನ್ನುಬಿಡುಗಡೆ ಮಾಡಿದೆ.
ಈ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ತಿರುಪತಿ ಭಕ್ತರು 300 ರೂಪಾಯಿಗಳ ವಿಶೇಷ ದರ್ಶನ ಟಿಕೆಟ್ ಕಾಯ್ದಿರಿಸಬೇಕೆಂದು ಟಿಟಿಡಿ ಅಧಿಕಾರಿಗಳು ಸೂಚಿಸಿದ್ದಾರೆ. ಟಿಕೆಟ್ಗಳನ್ನು ಬುಕ್ ಮಾಡಲು ನೀವು ತಿರುಮಲ ತಿರುಪತಿ ವೆಂಕಟೇಶ್ವರ ಸ್ವಾಮಿಯ ಅಧಿಕೃತ ವೆಬ್ಸೈಟ್ ನಲ್ಲಿ ನೋಂದಾಯಿಸಿಕೊಳ್ಳಬೇಕು. ಸೈಟ್ನಲ್ಲಿ ಸೈನ್ ಅಪ್ ಆಯ್ಕೆಯ ಮೂಲಕ ವಿವರಗಳನ್ನು ನಮೂದಿಸಬೇಕು. ಅದರ ನಂತರ ಖಾತೆಯನ್ನು ಸಕ್ರಿಯಗೊಳಿಸಲಾಗುತ್ತದೆ.