ನಾಳೆ ದಾವಣಗೆರೆಯಲ್ಲಿ 2900 ಡೋಸ್ ಲಸಿಕೆ: ಗರ್ಭಿಣಿಯರು, ಬಾಣಂತಿಯರು, ಅಪೌಷ್ಠಿಕ ಮಕ್ಕಳ ಪೋಷಕರಿಗೆ ಹಾಗೂ 2ನೇ ಡೋಸ್ ಗೆ ಆದ್ಯತೆ

ದಾವಣಗೆರೆ :ದಾವಣಗೆರೆ ತಾಲ್ಲೂಕಿನ ವಿವಿಧ ಆರೋಗ್ಯ ಸಂಸ್ಥೆಗಳಲ್ಲಿ ಆಗಸ್ಟ್ 07 ರಂದು ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ಸ್ ಸೇರಿದಂತೆ ಒಟ್ಟು 2900 ಡೋಸ್ ಲಸಿಕೆ ಹಂಚಿಕೆ ಮಾಡಲಾಗಿದ್ದು, ಗರ್ಭಿಣಿಯರು, ಬಾಣಂತಿಯರು, ಅಪೌಷ್ಠಿಕ ಮಕ್ಕಳ ಪೋಷಕರಿಗೆ ಹಾಗೂ 2ನೇ ಡೋಸ್ ನವರಿಗೆ ಆದ್ಯತೆ ನೀಡಲಾಗುವುದು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಎಲ್.ಡಿ. ವೆಂಕಟೇಶ್ ತಿಳಿಸಿದ್ದಾರೆ.
ಹಂಚಿಕೆ ಮಾಡಲಾಗಿರುವ ಲಸಿಕೆ ಡೋಸ್‍ಗಳ ವಿವರ ಇಂತಿದೆ. ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆ-400 ಡೋಸ್ ಕೋವ್ಯಾಕ್ಸಿನ್ ಲಸಿಕೆ, 2ನೇ ಡೋಸ್ ನವರಿಗೆ ಮಾತ್ರ. ಕೋವಿಶೀಲ್ಡ್ ಲಸಿಕೆ ಹಂಚಿಕೆ ಮಾಡಲಾಗಿರುವ ಆರೋಗ್ಯ ಸಂಸ್ಥೆಗಳ ವಿವರ ಇಂತಿದೆ. ಆಲೂರು, ಆಲೂರಹಟ್ಟಿ, ಆನಗೋಡು, ಅಣಜಿ, ದೊಡ್ಡಬಾತಿ, ಹದಡಿ, ಹೆಬ್ಬಾಳು, ಹೆಮ್ಮನಬೇತೂರು, ಹೂವಿನಮಡು, ಐಗೂರು, ಕಕ್ಕರಗೊಳ್ಳ, ಕೊಡಗನೂರು, ಲೋಕಿಕೆರೆ, ಮಾಯಕೊಂಡ, ನೇರ್ಲಿಗೆ, ರಾಮಗೊಂಡನಹಳ್ಳಿ, ಮತ್ತು ತೋಳಹುಣಸೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತಲಾ 50 ಡೋಸ್ ಕೋವಿಶೀಲ್ಡ್ ಲಸಿಕೆ ಹಂಚಿಕೆ ಮಾಡಲಾಗಿದೆ. ಬಾಡಾ, ಹೊನ್ನೂರು, ಹುಚ್ಚವನಹಳ್ಳಿ, ಕಂದಗಲ್ಲು, ನಲ್ಕುಂದ, ಶ್ಯಾಗಲೆ ತಲಾ 50 ಡೋಸ್. ದಾವಣಗೆರೆ ನಗರದ ಆಜಾದ್‍ನಗರ, ಬಾಷಾನಗರ, ಭಾರತ್ ಕಾಲೋನಿ, ದೊಡ್ಡಪೇಟೆ, ಸೇಟ್‍ಫಾಲ್ಸ್ ಶಾಲೆ ಹತ್ತಿರದ ಆರೋಗ್ಯ ಕೇಂದ್ರ, ರಾಮನಗರ, ಹೆಚ್‍ಕೆಆರ್ ನಗರ, ನಿಟ್ಟುವಳ್ಳಿ ನಗರ ಆರೋಗ್ಯ ಕೇಂದ್ರಗಗಳಿಗೆ ತಲಾ 100 ಡೋಸ್ ಕೋವಿಶೀಲ್ಡ್ ಲಸಿಕೆ ಹಂಚಿಕೆ ಮಾಡಲಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.